ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ಕಾರಿಗೆ ದೇಶದಲ್ಲಿ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಗರಿಷ್ಠ ಮಾರಾಟವನ್ನು ಕಾಪಾಡಿಕೊಂಡಿದೆ.

By Nagaraja

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಬ್ರೆಜಿಲ್ ನಲ್ಲಿ ಪರಿಷ್ಕೃತ ಕ್ರೆಟಾ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಅನಾವರಣಗೊಳಿಸಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಪ್ರವೇಶಿಸಲಿದೆ ಎಂಬುದು ಶುಭ ಸೂಚಕವಾಗಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಭಾರತದಲ್ಲೂ ಹ್ಯುಂಡೈ ಕ್ರೆಟಾ ಕ್ರೀಡಾ ಬಳಕೆಯ ವಾಹನಕ್ಕೆ ಅತಿ ಹೆಚ್ಚಿನ ಬೇಡಿಕೆಯಿದೆ. ಈಗ ಬ್ರೆಜಿಲ್ ನಲ್ಲಿ ಪರಿಷ್ಕೃತ ಕ್ರೆಟಾ ಕಾರು ಪ್ರತ್ಯಕ್ಷಗೊಂಡಿರುವುದು ಸಂತಸದಾಯಕ ಸುದ್ದಿಯಾಗಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಪ್ರಮುಖವಾಗಿಯೂ ಕಾರಿನ ಮುಂಭಾಗದಲ್ಲಿರುವ ಹೆಕ್ಸಾಗನಲ್ ಗ್ರಿಲ್ ಜೊತೆಗೆ ಕ್ರೋಮ್ ಬಳಕೆಯಲ್ಲಿ ಬದಲಾವಣೆ ಕಂಡುಬಂದಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಸಮತಲವಾದ ಫಾಗ್ ಲ್ಯಾಂಪ್, ಪರಿಷ್ಕೃತ ಬಂಪರ್, ಲೈಟ್ ಲ್ಯಾಂಪ್, ಕ್ರೋಮ್ ಫಿನಿಶಿಂಗ್ ಇತ್ಯಾದಿ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ನೂತನ ಕ್ರೆಟಾ 1.6 ಲೀಟರ್ ಸಿವಿವಿಟಿ ಫ್ಲೆಕ್ಸ್ ಫ್ಯೂಯಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 161.81 ಎನ್ ಎಂ ತಿರುಗುಬಲದಲ್ಲಿ 128 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತದೆ. ಇನ್ನು ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯು ಕಂಡುಬರಲಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ನವೆಂಬರ್ ನಲ್ಲಿ ನಡೆಯಲಿರುವ 2016 ಸಾವೊ ಪಾಲೊ ಆಟೋ ಶೋದಲ್ಲಿ ಹ್ಯುಂಡೈ ಕ್ರೆಟಾ ತನ್ನ ಜಾಗತಿಕ ಪಾದಾರ್ಪಣೆಗೈಯಲಿದೆ. ಬಳಿಕ ಬ್ರೆಜಿಲ್ ಮಾರುಕಟ್ಟೆಯನ್ನು 2017ರಲ್ಲಿ ತಲುಪಲಿದೆ.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಭಾರತದಲ್ಲಿ ನಂ.1 ಕಾರು ಸಂಸ್ಥೆ ಮಾರುತಿ ಸುಜುಕಿಗೆ ಪ್ರಬಲ ಪೈಪೋಟಿಯನ್ನು ಒಡ್ಡುತ್ತಿರುವ ಹ್ಯುಂಡೈ, ಇತ್ತೀಚೆಗಷ್ಟೇ ಕ್ರೆಟಾ ಮೊದಲನೇ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ವಾರ್ಷಿಕ ಮತ್ತು ಇ ಪ್ಲಸ್ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.

ವಾಹನ ಪ್ರೇಮಿಗಳಿಗೆ ಸಂತಸದ ಸುದ್ದಿ; ಬದಲಾಗುತ್ತಿಗೆ ಹ್ಯುಂಡೈ ಕ್ರೆಟಾ

ಎಂಜಿನ್ ಆಯ್ಕೆಗಳು

1.6 ಲೀಟರ್ ಪೆಟ್ರೋಲ್: 122 ಅಶ್ವಶಕ್ತಿ, 154 ಎನ್ ಎಂ ತಿರುಗುಬಲ

1.6 ಲೀಟರ್ ಡೀಸೆಲ್: 126 ಅಶ್ವಶಕ್ತಿ, 256 ಎನ್ ಎಂ ತಿರುಗುಬಲ

Most Read Articles

Kannada
English summary
Hyundai Creta Facelift Has Been Teased Prior To Its Public Debut
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X