ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಪರಿಷ್ಕೃತ ಹ್ಯುಂಡೈ ಇಯಾನ್ ಕಾರು 2017ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.

By Nagaraja

ದಕ್ಷಿಣ ಕೊರಿಯಾ ಮೂಲದ ಪ್ರಮುಖ ವಾಹನ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಇಯಾನ್ ಕಾರನ್ನು ಮರು ಪರಿಚಯಿಸಲು ಸಜ್ಜಾಗುತ್ತಿದೆ. ಅಂದ ಚೆಂದ ಬದಲಾಯಿಸಲಿರುವ ಹ್ಯುಂಡೈ ಇಯಾನ್, ಸಣ್ಣ ಕಾರು ಮಾರುಕಟ್ಟೆಯಲ್ಲಿ ತನ್ನ ಹಿಡಿತಯನ್ನು ಮತ್ತಷ್ಟು ಬಿಗಿಗೊಳಿಸಲಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ನೂತನ ಹ್ಯುಂಡೈ ಇಯಾನ್ ಕಾರಿನ ಹೊರಗೂ ಮತ್ತು ಒಳಗೂ ಗಮನಾರ್ಹ ಮಾರ್ಪಾಡುಗಳನ್ನು ಪಡೆಯಲಿದೆ ಎಂಬುದು ವಾಹನ ಮೂಲಗಳಿಂದ ತಿಳಿದು ಬಂದಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಹೊಸ ತಲೆಮಾರಿನ ಹ್ಯುಂಡೈ ಇಯಾನ್ ಇನ್ನು ಒಂದೆರಡು ವರ್ಷದೊಳಗೆ ಬಿಡುಗಡೆಯಾಗಲಿರುವಂತೆಯೇ ಮಾರುಕಟ್ಟೆಯಲ್ಲಿ ತಾಜಾತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ನೂತನ ಹ್ಯುಂಡೈ ಇಯಾನ್ ಸಣ್ಣ ಕಾರು ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಪರದೆ ಗಿಟ್ಟಿಸಿಕೊಳ್ಳಲಿದೆಯೆಂಬುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಇದರ ಮೂಲಕ ರೆನೊ ಕ್ವಿಡ್ ಕಾರಿಗೆ ತಕ್ಕ ಉತ್ತರವನ್ನೇ ನೀಡಲಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಪರಿಷ್ಕೃತ ಹ್ಯುಂಡೈ ಇಯಾನ್ 2017ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಿದೆ. ಇದರಂತೆ ಏರ್ ಬ್ಯಾಗ್ ಭದ್ರತಾ ವೈಶಿಷ್ಟ್ಯವನ್ನು ನೀಡಲಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

2014ರಲ್ಲಿ ಹೆಚ್ಚು ಶಕ್ತಿಶಾಲಿ ಒಂದು ಲೀಟರ್ ಆವೃತ್ತಿಯ ಹೊರತಾಗಿ ತದಾ ಬಳಿಕ ಹ್ಯುಂಡೈ ಹೆಚ್ಚಿನ ಬದಲಾವಣೆಗಳನ್ನು ಗಿಟ್ಟಿಸಿಕೊಂಡಿಲ್ಲ. ಫೇಸ್ ಲಿಫ್ಟ್ ಮಾದರಿಯಲ್ಲೂ ಇದೇ ಎಂಜಿನ್ ಆಯ್ಕೆ ಮುಂದುವರಿಯುವ ಸಾಧ್ಯತೆಯಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಭಾರತದಲ್ಲಿ ಹ್ಯುಂಡೈ ಇಯಾನ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದು 800 ಮತ್ತು ಒಂದು ಲೀಟರ್ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಈ ಪೈಕಿ 800 ಸಿಸಿ ಎಂಜಿನ್ 74.5 ಎನ್ ಎಂ ತಿರುಗುಬಲದಲ್ಲಿ 55 ಅಶ್ವಶಕ್ತಿಯನ್ನು ಉತ್ಪಾದಿಸಿದರೆ ಹೆಚ್ಚು ಶಕ್ತಿಶಾಲಿ ಒಂದು ಲೀಟರ್ ಎಂಜಿನ್ 98 ಎನ್ ಎಂ ತಿರುಗುಬಲದಲ್ಲಿ 68 ಅಶ್ವಶಕ್ತಿಯನ್ನು ನೀಡಲಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್ ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಮಾರುತಿ ಸುಜುಕಿ ಆಲ್ಟೊ, ರೆನೊ ಕ್ವಿಡ್ ಮತ್ತು ದಟ್ಸನ್ ರೆಡಿ ಗೊ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಅಂದ ಚೆಂದ ಬದಲಾಯಿಸಿ ಬರುತ್ತಿದೆ ಹ್ಯುಂಡೈ ಇಯಾನ್

ಏತನ್ಮಧ್ಯೆ ಗ್ರಾಂಡ್ ಐ10 ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹ್ಯುಂಡೈ ಹೊಂದಿದೆ. ಇದು ಕೂಡಾ 2017ರಲ್ಲೇ ಬಿಡುಗಡೆಯಾಗಲಿದೆ.

Most Read Articles

Kannada
English summary
Hyundai Working On Eon Facelift — Details Revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X