ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಸ್ವಿಡನ್ ಗೆ ಸಮಾನವಾದ ರೀತಿಯಲ್ಲಿ ಭಾರತದಲ್ಲೂ ಟ್ರಕ್ ಗಳ ಸಂಚಾರಕ್ಕೆ ಎಲೆಕ್ಟ್ರಿಕ್ ಹೆದ್ದಾರಿಗಳ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ.

By Nagaraja

ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪರಿಸರ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು, ಸ್ವಿಡನ್ ಗೆ ಸಮಾನವಾದ ರೀತಿಯಲ್ಲಿ ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಿಸುವ ಕುರಿತಾಗಿ ಚಿಂತನೆ ನಡೆಸಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನೂತನ ಎಲೆಕ್ಟ್ರಿಕ್ ಹೈವೇ ತಂತ್ರಜ್ಞಾನ ರಚನೆ ಪರಿಗಣನೆಯಲ್ಲಿದೆ ಎಂದಿದ್ದಾರೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಸ್ವಿಡನ್ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾತರಿಂದಲೇ ಪ್ರಸ್ತಾವನೆಯನ್ನು ಸ್ವೀಕರಿಸಿರುವ ಕೇಂದ್ರ ಸರಕಾರ, ಎಲೆಕ್ಟ್ರಿಕ್ ರೈಲುಗಳಿಗೆ ಸಮಾನವಾಗಿ ವಿದ್ಯುತ್ ಚಾಲಿತ ಹೆದ್ದಾರಿಗಳ ಮೂಲಕವೇ ಟ್ರಕ್ ಗಳನ್ನು ಓಡಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ವಿಶ್ವದ ಮೊದಲ ಎರಡು ಕೀ.ಮೀ. ದೂರದ ವರೆಗಿನ ಎಲೆಕ್ಟ್ರಿಕ್ ಹೆದ್ದಾರಿಯನ್ನು ಸ್ವಿಡನ್ ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಹೆಸರಾಂತ ಸಿಮೆನ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಭಾರತ-ಸ್ವಿಡನ್ ಉದ್ಯಮ ಸಂಗಮ ಮಾತುಕತೆಯ ಬಳಿಕ ಗಡ್ಕರಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇದು ವಾಣಿಜ್ ಸಾರಿಗೆ ವೆಚ್ಚ ಕಡಿತಗೊಳಿಸಲು ನಿರ್ಣಾಯಕವೆನಿಸುತ್ತದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಎಲೆಕ್ಟ್ರಿಕ್ ಹೆದ್ದಾರಿಯಲ್ಲಿ ಓಡಾಡುತ್ತಿರುವ ಟ್ರಕ್ ಗಳನ್ನು ಸ್ವಿಡನ್ ಮೂಲದ ಸ್ಕಾನಿಯಾ ಸಂಸ್ಥೆಯು ನಿರ್ಮಿಸಿದ್ದು, ಯುರೋ 6 ಮಾಲಿನ್ಯ ಮಟ್ಟವನ್ನು ಕಾಪಾಡಿಕೊಂಡಿದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಎಲೆಕ್ಟ್ರಿಕ್ ಹೆದ್ದಾರಿಗಳಲ್ಲಿ ವಿದ್ಯುತ್ ಚಾಲಿತ ವಾಹನವಾಗಿ ಸಂಚರಿಸಲಿರುವ ಇಂತಹ ಟ್ರಕ್ ಗಳು ಇತರೆ ರಸ್ತೆಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಎಲೆಕ್ಟ್ರಿಕ್ ಹೆದ್ದಾರಿಗಳ ಮುಖಾಂತರ ಟ್ರಕ್ ಗಳನ್ನು ಟ್ರ್ಯಾಕ್ ಮಾಡುವುದು ಸುಲಭವೆನಿಸಲಿದೆ. ಈ ಬಗ್ಗೆ ಸ್ವಿಡಿಷ್ ನಿಯೋಗವು ಕೇಂದ್ರ ಸರಕಾರವನ್ನು ಮನವರಿಕೆ ಮಾಡಿದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಸರಕು ಸಾಗಣೆ ವೆಚ್ಚವನ್ನು ಕಡಿತಗೊಳಿಸುವುದು ಭಾರತದ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಹೈವೇ ಯೋಜನೆಯು ಎಷ್ಟರ ಮಟ್ಟಿಗೆ ಸೂಕ್ತವೆನಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಈಗಲೂ ರಸ್ತೆಯಲ್ಲಿ ಓಡಾಡುತ್ತಿರುವ 15 ವರ್ಷಗಳಿಗೂ ಹಳೆಯದಾದ ವಾಣಿಜ್ಯ ವಾಹನಗಳು ಶೇಕಡಾ 65ರಷ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಇವೆಲ್ಲವನ್ನು ತಡೆಗಟ್ಟುವುದು ಅನಿವಾರ್ಯವೆನಿಸುತ್ತದೆ.

ಭಾರತದಲ್ಲೂ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ!

ಸಾವಿರಾರು ವರ್ಷದ ಪಳೆಯುಳಿಕೆಗಳಿಂದ ಭೂಮಿಯಡಿಯಲ್ಲಿ ತಯಾರಾಗುವ ಇಂಧನವು ಪರಿಸರಕ್ಕೆ ಮಾರಕವೆನಿಸಿದೆ. ಇದನ್ನು ತಡೆಯಲು ಸಿಮೆನ್ಸ್ ಮತ್ತು ಸ್ಕಾನಿಯಾ ದಿಟ್ಟ ಹೆಜ್ಜೆಯನ್ನಿಟ್ಟಿದೆ.

Most Read Articles

Kannada
Read more on ಭಾರತ india
English summary
India Might Soon Have An Electric Highway
Story first published: Monday, November 21, 2016, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X