'ಮೇಡ್ ಇನ್ ಇಂಡಿಯಾ' ಬೆಂಝ್ ಜಿಎಲ್ ಸಿ ಎಸ್ ಯುವಿ ಬಿಡುಗಡೆ
ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್, ಮೇಡ್ ಇನ್ ಇಂಡಿಯಾ ಜಿಎಲ್ ಸಿ ಕ್ರೀಡಾ ಬಳಕೆ ವಾಹನವನ್ನು ಬಿಡುಗಡೆಗೊಳಿಸಿದೆ. ಇದು ಜೂನ್ ತಿಂಗಳಲ್ಲಿ ಮೊದಲ ಬಾರಿಗೆ ದೇಶವನ್ನು ಪ್ರವೇಶಿಸಿತ್ತು.
ಎಡಿಷನ್ 1 ಎಂದೇ ಜನಪ್ರಿಯತೆ ಸಾಧಿಸಿರುವ ಬೆಂಝ್ ಜಿಎಲ್ ಸಿ, ಇದುವರೆಗೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ಭಾರತವನ್ನು ತಲುಪಿತ್ತು. ಈಗ ಮೇಡ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ಪುಣೆಯಲ್ಲಿರುವ ಚಕನ್ ಘಟಕದಲ್ಲಿ ಜೋಡಣೆಗೊಂಡಿದೆ.

ಭಾರತದಲ್ಲಿ ಜೋಡಣೆ ಕಾರ್ಯಕ್ಕೆ ಉತ್ತೇಜನ ನೀಡುವ ಮೂಲಕ ಮರ್ಸಿಡಿಸ್ ಬೆಂಝ್ ಜಿಎಲ್ ಸಿ ಕಾರಿನ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬಂದಿದೆ. 220ಡಿ ಸ್ಟೈಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಬೆಲೆಯಲ್ಲಿ ಎರಡು ಲಕ್ಷ ರು.ಗಳಷ್ಟು ಇಳಿಕೆಯಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ
ಜಿಎಲ್ ಸಿ 220 ಡಿ 4 ಮ್ಯಾಟಿಕ್ ಸ್ಟೈಲ್: 47.90 ಲಕ್ಷ ರು.
ಜಿಎಲ್ ಸಿ 220 ಡಿ 4 ಮ್ಯಾಟಿಕ್ ಸ್ಪೋರ್ಟ್: 51.50 ಲಕ್ಷ ರು.
ಜಿಎಲ್ ಸಿ 300 ಡಿ 4 ಮ್ಯಾಟಿಕ್ ಸ್ಪೋರ್ಟ್: 51.90 ಲಕ್ಷ ರು.

ಡೀಸೆಲ್ ಎಂಜಿನ್ ನಿಂದ ನಿಯಂತ್ರಿತ ಜಿಎಲ್ ಸಿ 220 ಡಿ ಸ್ಟೈಲ್ ಮತ್ತು ಸ್ಪೋರ್ಟ್ ಆವೃತ್ತಿಗಳಲ್ಲಿರುವ 2143 ಸಿಸಿ ಟರ್ಬೊಚಾರ್ಜ್ಡ್ ಫೋರ್ಡ ಸಿಲಿಂಡರ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 170 ಅಶ್ವಶಕ್ತಿಯನ್ನು ನೀಡಲಿದೆ.

ಅದೇ ರೀತಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿತ ಜಿಎಲ್ ಸಿ 300 ನಲ್ಲಿರುವ 2.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ ಸಿಲಿಂಡರ್ ಎಂಜಿನ್ 370 ಎನ್ ಎಂ ತಿರುಗುಬಲದಲ್ಲಿ 245 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈ ಎರಡು ಎಂಜಿನ್ ಗಳು 9 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಹಂಚಿಕೊಳ್ಳಲಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ 18 ಇಂಚುಗಳ ಅಲಾಯ್ ಚಕ್ರಗಳು, ಎಲ್ ಇಡಿ ಟೈಲ್ ಲ್ಯಾಂಪ್, ಏಳು ಇಂಚುಗಳ ಕಲರ್ ಡಿಸ್ ಪ್ಲೇ ಜೊತೆ ನೇವಿಗೇಷನ್, ಪ್ಯಾನರಾಮಿಕ್ ಸನ್ ರೂಫ್, ಕ್ಲೈಮೇಟ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ ಜೊತೆ ಆಕ್ಟಿವ್ ಪಾರ್ಕ್ ಅಸಿಸ್ಟ್, ಆ್ಯಂಬಿಯಂಟ್ ಲೈಟಿಂಗ್, ಕೀಲೆಸ್ ಸ್ಟ್ಯಾರ್ಟಿಂಗ್ ಫಂಕ್ಷನ್, ಹಿಂದುಗಡೆ ವಿಂಡೋದಲ್ಲಿ ಸನ್ ಬ್ಲೈಂಡ್ಸ್ ಸೌಲಭ್ಯಗಳು ಇರಲಿದೆ.

ಸುರಕ್ಷತೆಯನ್ನು ಗಮನ ಹಾಯಿಸಿದಾಗ ಇಎಸ್ ಪಿ ಕರ್ವ್ ಡೈನಾಮಿಕ್ ಅಸಿಸ್ಟ್, ಕ್ರಾಸ್ ವಿಂಡ್ ಅಸಿಸ್ಟ್, ಎಚ್ಚರಿಕಾ ಸಹಾಯಿ, ಅಡಾಪ್ಟಿವ್ ಬ್ರೇಕ್ ಲೈಟ್ಸ್, ಟೈರ್ ಪ್ರೆಶರ್ ಮಾನಿಟರಿಂಗ್ ಅಸಿಸ್ಟ್ ಹಾಗೂ ಏಳು ಏರ್ ಬ್ಯಾಗ್ ಗಳ ಸೌಲಭ್ಯವಿರಲಿದೆ.


Click it and Unblock the Notifications