ಇಸುಝು ಜೀವನಶೈಲಿ ವಾಹನಗಳಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

Written By:

ಭಾರತದಲ್ಲಿರುವ ತನ್ನೆಲ್ಲ ಶ್ರೇಣಿಯ ಟ್ರಕ್ ಗಳಿಗೆ ಇಸುಝು ಇಂಡಿಯಾ ಬೆಲೆ ಏರಿಕೆಯನ್ನು ಘೋಷಿಸಿದೆ. ನೂತನ ಬೆಲೆ ನೀತಿಯು 2017 ಜನವರಿ 01ರಿಂದಲೇ ಜಾರಿಗೆ ಬರಲಿದೆ.

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಇಸುಝು, ದೇಶದಲ್ಲಿ ಡಿ ಮ್ಯಾಕ್ಸ್ ವಿಕ್ರಾಸ್ ಮತ್ತು ಡಿ ಮ್ಯಾಕ್ಸ್ ಎಸ್ ಕ್ಯಾಬ್ ಮಾದರಿಗಳಿಗೆ ಶೇಕಡಾ ಮೂರರಿಂದ ನಾಲ್ಕರಷ್ಟು ಬೆಲೆ ಏರಿಕೆಗೊಳಿಸಿದೆ.

ದೇಶದ ಮುಂಚೂಣಿಯ ವಾಹನ ಸಂಸ್ಥೆಗಳೆಲ್ಲ ಪ್ರಯಾಣಿಕ ಕಾರುಗಳಿಗೆ ಬೆಲೆ ಏರಿಕೆಯನ್ನು ಘೋಷಿಸಿದೆ. ಇದೇ ಹಾದಿಯನ್ನು ಪಿಕಪ್ ಟ್ರಕ್ ನಿರ್ಮಾಣ ಸಂಸ್ಥೆ ಹಿಡಿದಿದೆ.

ಪ್ರಮುಖವಾಗಿಯೂ ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಬೆಲೆ ಏರಿಕೆಯ ಹಿಂದಿರುವ ಪ್ರಮುಖ ಕಾರಣವಾಗಿದೆ. ಇಸುಝು ಸಹ ಇದೇ ಕಾರಣವನ್ನು ಮುಂದಿಟ್ಟಿದೆ.

ಜೀವನಶೈಲಿ ವಾಹನ ವಿಭಾಗದಲ್ಲಿ ಇಸುಝು ದೇಶದಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಮುಂದಿಡುತ್ತಿದೆ. ಇದು ಎಲ್ಲ ವಿಧದ ಭೂಪ್ರದೇಶಗಳಿಗೂ ಸೈ ಎನಿಸಿಕೊಂಡಿದೆ.

ದೇಶದಲ್ಲಿ ಮಾರಾಟದಲ್ಲಿರುವ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್ ಮತ್ತು ಡಿ ಮ್ಯಾಕ್ಸ್ ಎಸ್ ಕ್ಯಾಬ್ ಮಾದರಿಗಳು ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 12.8 ಹಾಗೂ 7.87 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ದೇಶದ ಏಳು ಜನಪ್ರಿಯ ಪ್ರಯಾಣಿಕ ಕಾರು ಸಂಸ್ಥೆಗಳು ಈಗಾಗಲೇ ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿದೆ. ಈ ಸಾಲಿನಲ್ಲಿ ಟಾಟಾ ಮೋಟಾರ್ಸ್, ನಿಸ್ಸಾನ್, ಟೊಯೊಟಾ, ಫೋಕ್ಸ್ ವ್ಯಾಗನ್, ಹ್ಯುಂಡೈ, ಮರ್ಸಿಡಿಸ್ ಬೆಂಝ್ ಮತ್ತು ಹೋಂಡಾ ಸಂಸ್ಥೆಗಳು ಸೇರಿವೆ.

Read more on ಇಸುಝು isuzu
English summary
Isuzu India To Hike Prices; Effective January 1, 2017
Please Wait while comments are loading...

Latest Photos