ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

By Nagaraja

ತನ್ನ ಪ್ರತಿಸ್ಪರ್ಧಿಗಳೆನ್ನಲ್ಲ ಮೀರಿಸಿರುವ ಹೊಸ ತಲೆಮಾರಿನ ಇನ್ನೋವಾ ಕ್ರೈಸ್ಟಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಕಾಪಾಡಿಕೊಂಡಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ದೇಶದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಇನ್ನೋವಾ ಕ್ರೈಸ್ಟಾ ಪ್ರತಿಸ್ಪರ್ಧಿಯೊಂದನ್ನು ಕಣಕ್ಕಿಳಿಸುತ್ತಿದೆ.

ಈಗಾಗಲೇ ನೂತನ ಬಹು ಬಳಕೆಯ ವಾಹನದ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಟೆಸ್ಟಿಂಗ್ ವೇಳೆಯಲ್ಲಿ ಸಂಪೂರ್ಣ ಮರೆಮಾಚಿದ ಕಾರಿನ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

ಕಳೆದ ತಿಂಗಳಿನಲ್ಲಷ್ಟೇ ಮಹೀಂದ್ರ ನೂತನ ಎಂಪಿವಿ ಟೆಸ್ಟಿಂಗ್ ಪ್ರಕ್ರಿಯೆ ಆರಂಭಿಸಿರುವುದರ ಬಗ್ಗೆ ಸುದ್ದಿ ಹರಡಿತ್ತು. ಈಗ ನಿರ್ಮಾಣ ಸಿದ್ಧ ವಾಹನದ ಪರೀಕ್ಷಾರ್ಥ ಚಾಲನೆಯ ವೇಳೆ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

ಏಳು ಸೀಟುಗಳ ಮಹೀಂದ್ರ ನೂತನ ಎಂಪಿವಿ ನೇರವಾಗಿ ಟೊಯೊಟಾ ಇನ್ನೋವಾ ಕ್ರೈಸ್ಟಾಗೆ ಸೆಡ್ಡು ಹೊಡೆಯಲಿದೆ. ಇದು ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಹೊರಗಿನ ರಿಯರ್ ವ್ಯೂ ಮಿರರ್ ಹಾಗೂ ಟೈಲ್ ಲ್ಯಾಂಪ್ ಗಳನ್ನು ಗಿಟ್ಟಿಸಿಕೊಂಡಿದೆ.

ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

ಸದ್ಯಕ್ಕೆ ಹೆಚ್ಚಿನ ವಿವರಗಳು ಅಲಭ್ಯವಾಗಿದೆ. ಬಹುಶ: ಇದು ಮುಂದಿನ ತಲೆಮಾರಿನ ಕ್ಸೈಲೋ ಕೂಡಾ ಆಗಿರಬಹುದು. ಇದು ಅಲ್ಲದಿದ್ದರೆ ಸಂಪೂರ್ಣವಾಗಿ ಹೊಸ ತಳಹದಿಯಲ್ಲಿ ನಿರ್ಮಾಣವಾಗುತ್ತಿರುವ ಎಕ್ಸ್ ಯುವಿ300 ಎಂದು ಹೆಸರಿಸಿಕೊಳ್ಳಬಹುದು.

ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

ಕ್ಸೈಲೋ ಹಾಗೂ ಎಕ್ಸ್ ಯುವಿ500 ಜೊತೆಗೆ ಸಾಮತ್ಯತೆಯನ್ನು ಹೊಂದಿರುವ ಹೊಸ ಕಾರು ಬೃಹತ್ ಗಾತ್ರವನ್ನು ಪಡೆದಿದೆ.

ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

ಇನ್ನು ದೆಹಲಿಯಲ್ಲಿ ಡೀಸೆಲ್ ಕಾರುಗಳಿಗೆ ನಿಷೇಧಗಳಂತಹ ತೊಡಕು ಎದುರಾಗಿದ್ದರ ಹಿನ್ನಲೆಯಲ್ಲಿ 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಬಳಕೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಹೊಸತಾದ 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹ ಇರುವ ಸಾಧ್ಯತೆಯಿದೆ.

ಮಹೀಂದ್ರದಿಂದ ಇನ್ನೋವಾ ಪ್ರತಿಸ್ಪರ್ಧಿ ಸಿದ್ಧ; ಭರದಿಂದ ಸಾಗುತ್ತಿದೆ ಟೆಸ್ಟಿಂಗ್!

ಅಂದ ಹಾಗೆ ಬಿಡುಗಡೆ ಬಗ್ಗೆಯೂ ಯಾವುದೇ ಸ್ಪಷ್ಟ ಮಾಹಿತಿಗಳಿಲ್ಲ. ಆದರೂ ಬಲ್ಲ ಮೂಲಗಳ ಪ್ರಕಾರ 2017ನೇ ಸಾಲಿನ ದ್ವಿತಿಯಾರ್ಧದಲ್ಲಷ್ಟೇ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

Most Read Articles

Kannada
English summary
Spy Pics: Mahindra's Innova Rival Spotted Testing
Story first published: Saturday, August 27, 2016, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X