ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

2016 ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಕಾರು ಮಾರಾಟ ಕುಸಿತ ಕಂಡರೂ ಟಾಪ್ 10 ಪಟ್ಟಿಯಲ್ಲಿ ಮಾರುತಿ ಅಧಿಪತ್ಯವನ್ನು ಮುಂದುವರಿಸಿದೆ.

By Nagaraja

ಕೇಂದ್ರ ಸರಕಾರ ಹಳೆಯ 500 ರು. ಮತ್ತು 1000 ರು.ಗಳ ನೋಟುಗಳ ಚಲಾವಣೆಗೆ ನಿಷೇಧ ಹೇರಿರುವುದು ವಾಹನ ಮಾರುಕಟ್ಟೆ ಮೇಲೂ ಬಲವಾದ ಪೆಟ್ಟು ಬಿದ್ದಿದೆ. ಆದರೂ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಕಾಪಾಡಿಕೊಳ್ಳಲು ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಯಶಸ್ವಿಯಾಗಿದೆ.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಭಾರತೀಯ ವಾಹನ ತಯಾರಿಕ ಸಂಸ್ಥೆಗಳ ಒಕ್ಕೂಟ (ಸಿಯಾಮ್) ಬಿಡುಗಡೆ ಮಾಡಿರುವ ಮಾರಾಟ ಅಂಕಿಅಂಶಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಾರುತಿ ಅಲ್ಟೊ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಅಗ್ರ 10ರ ಪಟ್ಟಿಯಲ್ಲಿ ಮಾರುತಿಯ ಏಳು ಕಾರುಗಳು ಕಾಣಿಸಿಕೊಂಡಿದೆ. ಅಕ್ಟೋಬರ್ ತಿಂಗಳಲ್ಲಿ 18,854 ಯುನಿಟ್ ಗಳ ಮಾರಾಟ ಕಾಪಾಡಿಕೊಂಡಿರುವ ಮಾರುತಿ ಆಲ್ಟೊ ಅಗ್ರಸ್ಥಾನದಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,861 ಯುನಿಟ್ ಗಳಷ್ಟು ಆಲ್ಟೊ ಮಾರಾಟಗೊಂಡಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಎರಡನೇ ಸ್ಥಾನದಲ್ಲಿರುವ ಮಾರುತಿ ಸ್ವಿಫ್ಟ್ ಡಿಜೈರ್ 2016 ಅಕ್ಟೋಬರ್ ತಿಂಗಳಲ್ಲಿ 15,201 ಯುನಿಟ್ ಗಳ ಮಾರಾಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 21,084 ಯುನಿಟ್ ಗಳಷ್ಟು ಡಿಜೈರ್ ಮಾರಾಟಗೊಂಡಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಮೂರನೇ ಸ್ಥಾನದಲ್ಲಿರುವ ಮಾರುತಿ ವ್ಯಾಗನಾರ್ 15,075 ಯುನಿಟ್ ಗಳಷ್ಟು ಮಾರಾಟ ದಾಖಲಿಸಿಕೊಂಡಿದೆ. ಕಳೆದ ಸಾಲಿನಲ್ಲಿ ವ್ಯಾಗನಾರ್ ಮೂರನೇ ಸ್ಥಾನದಲ್ಲಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಅತ್ತ ಮಾರುತಿ ಸುಜುಕಿ ಸ್ವಿಫ್ಟ್ ನಾಲ್ಕನೇ ಸ್ಥಾನದಲ್ಲಿದ್ದು, 2016 ಅಕ್ಟೋಬರ್ ತಿಂಗಳಲ್ಲಿ 14,611 ಯುನಿಟ್ ಗಳಷ್ಟು ಮಾರಾಟವನ್ನು ದಾಖಲಿಸಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಐದನೇ ಸ್ಥಾನದಲ್ಲಿ ಹ್ಯುಂಡೈ ಗ್ರಾಂಡ್ ಐ10 ಕಾರು ಕಾಣಿಸಿಕೊಂಡಿದ್ದು, 2016 ಅಕ್ಟೋಬರ್ ತಿಂಗಳಲ್ಲಿ 14,530 ಯುನಿಟ್ ಗಳ ಮಾರಾಟ ಕಂಡಿದೆ.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಅಂತೆಯೇ ಆರನೇ ಸ್ಥಾನದಲ್ಲಿ ಮಗದೊಂದು ಹ್ಯುಂಡೈ ಕಾರಾಗಿರುವ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ 11532 ಯುನಿಟ್ ಗಳಷ್ಟು ಮಾರಾಟ ದಾಖಲಿಸಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಹ್ಯುಂಡೈ ಎಲೈಟ್ ಐ20 ಪ್ರತಿಸ್ಪರ್ಧಿಯಾಗಿರುವ ಮಾರುತಿ ಬಲೆನೊ 10,718 ಯುನಿಟ್ ಗಳ ಮಾರಾಟದೊಂದಿಗೆ ಏಳನೇ ಸ್ಥಾನವನ್ನು ವಶಪಡಿಸಿಕೊಂಡಿದೆ.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಮಾರುತಿಯ ಮಗದೊಂದು ಹಾಟ್ ಕಾರು ವಿಟಾರಾ ಬ್ರಿಝಾ ಎಂಟನೇ ಸ್ಥಾನ ವಶಪಡಿಸಿಕೊಂಡಿದೆ. ಈ ಅವಧಿಯಲ್ಲಿ 10,056 ಯುನಿಟ್ ಗಳಷ್ಟು ವಿಟಾರಾ ಬ್ರಿಝಾ ಮಾರಾಟಗೊಂಡಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ರೆನೊದ ಅತ್ಯಂತ ಯಶಸ್ಸಿನ ಕಾರು ಕ್ವಿಡ್ ಸಣ್ಣ ಹ್ಯಾಚ್ ಬ್ಯಾಕ್ ಕಾರು ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ 9,801 ಯುನಿಟ್ ಗಳಷ್ಟು ಕ್ವಿಡ್ ಕಾರು ಮಾರಾಟಗೊಂಡಿತ್ತು.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಕೊನೆಯ ಸ್ಥಾನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಾರುತಿ ಸುಜುಕಿ ಸೆಲೆರಿಯೊ 2016 ಅಕ್ಟೋಬರ್ ಅವಧಿಯಲ್ಲಿ 9,581 ಯುನಿಟ್ ಗಳಷ್ಟು ಮಾರಾಟ ದಾಖಲಿಸಿದೆ.

ನೋಟು ಬ್ಯಾನ್ ಬಳಿಕವೂ ಮಾರುತಿ ಆಲ್ಟೊ ಕಾರೇ ನಂ.1

ಹಾಗಿದ್ದರೂ ಕಳೆದ ವರ್ಷ ಟಾಪ್ 10 ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ಹ್ಯುಂಡೈ ಕ್ರೆಟಾ, ಹೋಂಡಾ ಅಮೇಜ್ ಹಾಗೂ ಮಹೀಂದ್ರ ಬೊಲೆರೊ ಈ ಬಾರಿ ಪಟ್ಟಿಯಿಂದ ಹೊರದಬ್ಬಲ್ಪಟ್ಟಿದೆ.

Most Read Articles

Kannada
Read more on ಕಾರು car
English summary
Maruti Suzuki Alto Is The Best Selling Car In India Despite Fall In Sales
Story first published: Wednesday, November 23, 2016, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X