ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

By Nagaraja

ಆತ ಟೆಸ್ಟ್ ಕ್ರಿಕೆಟ್ ರಂಗಕ್ಕೆ ನಿವೃತ್ತಿ ಹೇಳಿರಬಹುದು. ಏಕದಿನ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದರೂ ವೃತ್ತಿ ಜೀವನದ ಸರ್ವಶ್ರೇಷ್ಠ ಫಾರ್ಮ್ ನಲ್ಲಿರದೇ ಹೋಗಿರಬಹುದು. ಆದರೂ ಜನಪ್ರಿಯತೆಗೆ ಕಿಂಚಿತ್ತೂ ಕುತ್ತು ಸಂಭವಿಸಿಲ್ಲ ಎಂಬುದು ಮುಂಬರುವ ಆತ್ಮ ಚರಿತ್ರೆ ಆಧಾರಿಸಿ ನಿರ್ಮಾಣಗೊಂಡಿರುವ 'ಎಂಎಂಸ್ ಧೋನಿ - ದಿ ಅನ್ ಟೋಲ್ಡ್ ಸ್ಟೋರಿ' ಎಂಬ ಚಿತ್ರವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಬಹಳ ಮಹತ್ವಾಕಾಂಕ್ಷೆಯಿಂದ ಕಾದು ಕುಳಿತಿರುವುದೇ ಸಾಕ್ಷಿಯಾಗಿದೆ.

ಈಗ ವಾಹನ ವಲಯಕ್ಕೂ ಮಹೀಂದ್ರ ಸಿಂಗ್ ಧೋನಿ ಪ್ರೀತಿ ತಟ್ಟಿದೆ. ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಧೋನಿ ಅವರಿಂದಲೇ ಸ್ಪೂರ್ತಿ ಪಡೆದುಕೊಂಡು ಅತಿ ನೂತನ ಆಲ್ಟೊ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ.

-

-

-
-

-

-
-

-

-
-

-

-
-

-

-
-

-

-
-

-

-
-

-

-
-

-

-
-

-

-
-

-

-
ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಧೋನಿಯನ್ನು ದ್ವೇಷಿಸುವವರು ಏನೇ ಬೇಕಾದರೂ ಹೇಳಲಿ. ಮಾರುತಿ ಮಾತ್ರ ತನ್ನ ಜನಪ್ರಿಯ ಕಾರಿಗೆ ಧೋನಿ ಸ್ಪರ್ಶವನ್ನು ನೀಡುವಲ್ಲಿ ಹಿಂದೇಟು ಹಾಕಲಿಲ್ಲ. ಪರಿಣಾಮ ಎರಡು ಅತ್ಯಾಕರ್ಷಕ ಕಾರುಗಳು ರೂಪುಗೊಂಡಿದೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಮಹೇಂದ್ರ ಸಿಂಗ್ ಧೋನಿ ಅವರಿಂದ ಪ್ರೇರಣೆ ಪಡೆದಿರುವ ದೇಶದ ಅತ್ಯಂತ ಜನಪ್ರಿಯ ಆಲ್ಟೊ 800 ಮತ್ತು ಅಲ್ಟೊ ಕೆ10 ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇಲ್ಲಿ ಆಲ್ಟೊ ದೇಶದ ಸರ್ವಕಾಲಿಕ ಶ್ರೇಷ್ಠ ಕಾರು ಎಂಬುದನ್ನು ಗಮನಾರ್ಹ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಮುಂಬರುವ 'ಎಂಎಂಸ್ ಧೋನಿ - ದಿ ಅನ್ ಟೋಲ್ಡ್ ಸ್ಟೋರಿ' ಚಿತ್ರದ ಸಹಯೋಗದಲ್ಲಿ ಮಾರುತಿ ಈ ವಿಶೇಷ ಆವೃತ್ತಿಗಳನ್ನು ಬಿಡುಗಡೆಗೊಳಿಸಿದೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಧೋನಿ ಆಲ್ಟೊ ವಿಶೇಷ ಆವೃತ್ತಿಯ ಕಾರುಗಳು 2016 ಅಕ್ಟೋಬರ್ ಮೊದಲ ವಾರದಿಂದಲೇ ಮಾರುತಿ ಅಧಿಕೃತ ಡೀಲರುಗಳ ಬಳಿ ಮಾರಾಟಕ್ಕೆ ಲಭ್ಯವಾಗಲಿದೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಧೋನಿ ತರಹನೇ ಆಲ್ಟೊ ಕಾರನ್ನು ದೇಶದೆಲ್ಲೆಡೆ ಅತಿ ಹೆಚ್ಚು ಪ್ರೀತಿಸಲಾಗುತ್ತದೆ. ಆಲ್ಟೊ ಜನಪ್ರಿಯತೆಗೆ ಸಂಸ್ಥೆಯು ಸಾಧಿಸಿರುವ 30 ಲಕ್ಷ ಯುನಿಟ್ ಗಳ ಮಾರಾಟವೇ ಸಾಕ್ಷಿಯಾಗಿದೆ. ಇನ್ನೊಂದೆಡೆ ಕ್ರಿಕೆಟ್ ನ ಜೀವಂತ ದಿಗ್ಗಜ ಎನಿಸಿಕೊಂಡಿರುವ ಧೋನಿ 2011ರಲ್ಲಿ ಭಾರತಕ್ಕೆ 28 ವರ್ಷಗಳ ಸುದೀರ್ಘ ಅವಧಿಯ ಬಳಿಕ ಏಕದಿನ ವಿಶ್ವಕಪ್ ಗೆಲ್ಲಿಸಿ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಧೋನಿ ಹಾಗೂ ಆಲ್ಟೊ ಗಳಿಸಿರುವ ಸಾಧನೆಗಳು ಮತ್ತು ಮನ್ನಣೆಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೈಜ ತಾರೆಯನ್ನಾಗಿ ಗುರುತಿಸಿವಂತೆ ಮಾಡಿದೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಇದೇ ಸಂದರ್ಭದಲ್ಲಿ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಧೋನಿ, "ಕಠಿಣ ಪರಿಸ್ಥಿತಿ ಎದುರಾಗುತ್ತಿದೆ ಎಂದಿದ್ದಾರೆ. ಚಿತ್ರದ ನಿರೂಪನೆ ಮಾಡುವ ಮೂಲಕ ನಾನು ನನ್ನ ಪಾತ್ರವನ್ನು ಮಾಡಿ ಮುಗಿಸಿದ್ದೇನೆ. ಆದರೂ ಚಿತ್ರದ ಪ್ರಚಾರ ಸಂಬಂಧ ಒತ್ತಡವನ್ನು ಅನುಭವಿಸುತ್ತಿದ್ದೇನೆ" ಎಂದಿದ್ದಾರೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪ್ರಚಾರಕ್ಕಾಗಿ ಮಾರುತಿ ಸುಜುಕಿ ಸಹ ಸಕ್ರಿಯವಾಗಿ ಭಾಗವಹಿಸುತ್ತಿದೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಅಂದ ಹಾಗೆ ಧೋನಿಯಿಂದ ಪ್ರೇರಣೆ ಪಡೆದ ಆಲ್ಟೊ ಆವೃತ್ತಿಯು, ಕ್ರೀಡಾತ್ಮಕ ಸೀಟು ಕವರ್ ಜೊತೆ 7 ಅದೃಷ್ಟ ಸಂಖ್ಯೆಯನ್ನು ಪಡೆಯಲಿದೆ. ಇನ್ನುಳಿದಂತೆ ಧೋನಿ ಸಹಿ ಪಡೆದ ಡಿಕಾಲ್ಸ್, ಬಾಡಿ ಗ್ರಾಫಿಕ್ಸ್, ಹೈ ಎಂಡ್ ಮ್ಯೂಸಿಕ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಇನ್ನಿತರ ವೈಶಿಷ್ಟ್ಯಗಳು ಲಭ್ಯವಾಗಲಿದೆ.

ಮಾರುತಿಗೂ ಧೋನಿಯೇ ಸ್ಟಾರ್; ಆಲ್ಟೊದಿಂದ ಡಬಲ್ ಧಮಾಕಾ

ಮಹೇಂದ್ರ ಸಿಂಗ್ ಧೋನಿ ಪ್ರೇರಿತ ಆಲ್ಟೊ ಸೀಮಿತ ಆವೃತ್ತಿಯ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಆಲ್ಟೊ 800 ಕಾರಿನಲ್ಲಿರುವ 796 ಸಿಸಿ ಎಂಜಿನ್ 47.3 ಅಶ್ವಶಕ್ತಿಯನ್ನು ಮತ್ತು ಆಲ್ಟೊ ಕೆ10ಬಿ ಮಾದರಿಯಲ್ಲಿರುವ 998 ಸಿಸಿ ಎಂಜಿನ್ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

Most Read Articles

Kannada
English summary
Maruti Suzuki Launches 'MS Dhoni Inspired' Alto Special Edition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X