ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ದೇಶದ ಜನಪ್ರಿಯ ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಒಂದಾಗಿದೆ. ಇದೀಗ ಹೊಸ ತಲೆಮಾರಿನ ಸ್ವಿಫ್ಟ್ ಡಿಜೈರ್ ಕಾರು ಹೇಗಿರಬಹುದೆಂಬುದು ಬಹಳಷ್ಟು ಕುತೂಹಲ ಮೂಡಿಸಿದೆ.

By Nagaraja

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮುಂಚೂಣಿಯ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸ್ವಿಫ್ಟ್ ಡಿಜೈರ್ ಅತಿ ಶೀಘ್ರದಲ್ಲೇ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದೆ. ಈ ಸಂಬಂಧ ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಪರೀಕ್ಷಾರ್ಥ ಚಾಲನೆ ಹಮ್ಮಿಕೊಳ್ಳುತ್ತಿರುವ ವೇಳೆ ಕ್ಯಾಮೆರಾದ ರಹಸ್ಯ ಕಣ್ಣಿಗಳಿಗೆ ಸೆರೆ ಸಿಕ್ಕಿವೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಕಾಂಪಾಕ್ಟ್ ಸೆಡಾನ್ ಕಾರಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮಾರುಕಟ್ಟೆಯಲ್ಲಿ ಈಗಲೂ ಅತಿ ಹೆಚ್ಚಿನ ಮಾರಾಟವನ್ನು ಕಾಪಾಡಿಕೊಂಡಿದೆ. ಇದೇ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಹೊಸ ಸ್ವಿಫ್ಟ್ ಡಿಜೈರ್ ತನ್ನ ಹೆಗಲ ಮೇಲೆ ಹೊರಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಸಂಪೂರ್ಣ ಮರೆಮಾಚಿದ ರೂಪದಲ್ಲಿ ನೂತನ ಸ್ವಿಫ್ಟ್ ಡಿಜೈರ್ ಪ್ರತ್ಯಕ್ಷಗೊಂಡಿದೆ. ವಾಹನ ವಿಶ್ಲೇಷಕರ ಪ್ರಕಾರ ಹೊಸ ಸ್ವಿಫ್ಟ್ ಡಿಜೈರ್ ಕಾರು ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಕಾರಿನ ಹೊರಮೈಯಲ್ಲಿ ಆಧುನಿಕತೆಗೆ ತಕ್ಕಂತೆ ಡೇಟೈಮ್ ರನ್ನಿಂಗ್ ಲೈಟ್ಸ್ (ಡಿಆರ್ ಎಲ್), ದಿಟ್ಟವಾದ ಗ್ರಿಲ್ ಹಾಗೂ ಎಲ್ ಇಡಿ ಟೈಲ್ ಲ್ಯಾಂಪ್ ಕಂಡುಬರಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಕಾರಿನೊಳಗೆ ಜನಪ್ರಿಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿಗೆ ಸಮಾನವಾದ ವಿನ್ಯಾಸ ನೀತಿಯು ಕಂಡುಬರಲಿದೆ. ಇದು ದೊಡ್ಡದಾದ ಮಾಹಿತಿ ಮನರಂಜನಾ ವ್ಯವಸ್ಥೆ, ಹೊಸ ಅಲಾಯ್ ಚಕ್ರಗಳು ಮತ್ತು ಬಹು ಮಾಹಿತಿ ಪರದೆಯನ್ನು ಗಿಟ್ಟಿಸಿಕೊಳ್ಳಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಗುಜರಾತ್ ನಲ್ಲಿ ತೆರೆಯಲಿರುವ ಹೊಸ ಘಟಕದಲ್ಲಿ ನಿರ್ಮಾಣವಾಗಲಿರುವ ನೂತನ ಮಾರುತಿ ಸ್ವಿಫ್ಟ್ ಡಿಜೈರ್, 2017 ಮೊದಲಾರ್ಧದಲ್ಲಿ ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಕಾರಿನಡಿಯಲ್ಲಿರುವ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದು 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಗಳನ್ನು ಪಡೆಯಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಇನ್ನು ಸುಜುಕಿಯ ನೂತನ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್ ಎಚ್ ವಿಎಸ್) ತಂತ್ರಗಾರಿಕೆಯನ್ನು ಪಡೆಯಲಿದ್ದು, 1.0 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

2017ನೇ ಸಾಲಿನಲ್ಲಿ ನಡೆಯಲಿರುವ ಜಿನೆವಾ ಮೋಟಾರು ಶೋದಲ್ಲಿ ನೂತನ ಸ್ವಿಫ್ಟ್ ಡಿಜೈರ್ ಮೊದಲ ಸಾರ್ವಜನಿಕ ದರ್ಶನ ನೀಡುವ ಸಾಧ್ಯತೆಯಿದೆ. ಇದು ಭಾರತದಂತಹ ಬೆಳೆದು ಬರುತ್ತಿರುವ ಮಾರುಕಟ್ಟೆಗಳನ್ನು ಗುರಿ ಮಾಡಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಡ್ಯುಯಲ್ ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ವ್ಯವಸ್ಥೆಯಿರಲಿದೆ.

ಬದಲಾವಣೆಯ ಪರ್ವದಲ್ಲಿ ನಿಮ್ಮ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್

ಇನ್ನು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫುಶ್ ಬಟನ್ ಸ್ಟ್ಯಾರ್ಟ್, ಅಲಾಯ್ ಚಕ್ರಗಳು, ಕೀಲೆಸ್ ಎಂಟ್ರಿ, ಸ್ಟೀರಿಂಗ್ ಮೌಂಟೆಡ್ ನಿಯಂತ್ರಣ ಮತ್ತು ರಿವರ್ಸ್ ಕ್ಯಾಮೆರಾ ಜೊತೆಗೆ ನೇವಿಗೇಷನ್ ಸಿಸ್ಟಂ ವ್ಯವಸ್ಥೆಗಳಿದ್ದರೆ ಅಚ್ಚರಿಪಡಬೇಕಿಲ್ಲ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಹ್ಯುಂಡೈ ಎಕ್ಸ್ ಸೆಂಟ್

ಹೋಂಡಾ ಅಮೇಜ್

ಫೋಕ್ಸ್ ವ್ಯಾಗನ್ ಎಮಿಯೊ

ಟಾಟಾ ಕೈಟ್ 5 (ಇನ್ನಷ್ಟೇ ಬಿಡುಗಡೆಯಾಗಬೇಕಿದೆ)

ಷೆವರ್ಷೆ ಎನ್ಷೆನ್ಷಿಯಾ (ಇನ್ನಷ್ಟೇ ಬಿಡುಗಡೆಯಾಗಬೇಕಿದೆ)

Most Read Articles

Kannada
English summary
2017 Maruti Suzuki Swift Dzire Spied Testing For The First Time
Story first published: Monday, October 24, 2016, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X