ಆಫ್ ರೋಡ್‌ಗೂ ಸೈ; ಭಾರತದಲ್ಲಿ ಮಾರುತಿ ಬಿಡುಗಡೆ ಮಾಡಲಿದೆ 'ಜಿಮ್ನಿ'

ಭಾರತದಲ್ಲಿ ಮಗದೊಂದು ಆಕರ್ಷಕ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜುಕಿ ಸಜ್ಜಾಗುತ್ತಿದೆ. ಅದುವೇ ಮಾರುತಿ ಜಿಮ್ನಿ

By Nagaraja

ಜಪಾನ್ ವಾಹನ ಸಂಸ್ಥೆ ಸುಜುಕಿ ಪಾಲಿಗೆ ಭಾರತ ಅತ್ಯಂತ ಪ್ರಾಮುಖ್ಯ ಮಾರುಕಟ್ಟೆಯಾಗಿದೆ. ಹಾಗಿದ್ದರೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕೆಲವೊಂದು ಗಮನಾರ್ಹ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಂಸ್ಥೆಯು ಇದುವರೆಗೆ ಆಸಕ್ತಿ ತೋರಿಸಿಲ್ಲ. ಇವುಗಳಲ್ಲಿ ಮಾರುತಿ ಜಿಮ್ನಿ ಕಾಂಪಾಕ್ಟ್ ಕ್ರೀಡಾ ಬಳಕೆಯ ಕಾರು ಸಹ ಒಂದಾಗಿದೆ. ಕಳೆದ ಕೆಲವು ಸಮಯಗಳಿಂದ ಮಾರುತಿ ಜಿಮ್ನಿ ಭಾರತ ಪ್ರವೇಶ ಸಂಬಂಧಿಸಿದಂತೆ ಸುದ್ದಿಗಳು ಹರಿದಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮಗದೊಂದು ಅತ್ಯಾಕರ್ಷಕ ಕಾರನ್ನು ಪಡೆಯುವಲ್ಲಿ ದೇಶದ ವಾಹನ ಪ್ರೇಮಿಗಳು ಯಶ ಕಾಣಲಿದ್ದಾರೆ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಬಲ್ಲ ಮೂಲಗಳ ಪ್ರಕಾರ ಮುಂದಿನ ತಲೆಮಾರಿನ ಜಿಮ್ನಿ ಕಾರನ್ನು ಭಾರತದಲ್ಲೇ ನಿರ್ಮಿಸಲಾಗುವುದು. ಅಲ್ಲದೆ 2017ನೇ ಸಾಲಿನಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನಿರಿಸಿಕೊಳ್ಳಲಾಗಿದೆ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಬಲೆನೊ ಹ್ಯಾಚ್ ಬ್ಯಾಕ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಲಿರುವ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಕಾರಿನ ಅದೇ ತಳಹದಿಯಲ್ಲಿ ನೂತನ ಜಿಮ್ನಿ ನಿರ್ಮಿಸಲಾಗುವುದು.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಗುಜರಾತ್ ನಲ್ಲಿ ತೆರೆದುಕೊಳ್ಳುತ್ತಿರುವ ಸುಜುಕಿಯ ನೂತನ ಘಟಕದಲ್ಲಿ ಮುಂದಿನ ತಲೆಮಾರಿ ಜಿಮ್ನಿ ಕಾರನ್ನು ತಯಾರಿಸಲಾಗುವುದು.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಆಫ್ ರೋಡ್ ಚಾಲನೆಗೆ ಹೊಂದಿಕೆಯಾಗುವ ರೀತಿಯಲ್ಲಿ ನೂತನ ಜಿಮ್ನಿ ಫೋರ್ ವೀಲ್ ಚಾಲನಾ ವ್ಯವಸ್ಥೆಯನ್ನು ಗಿಟ್ಟಿಸಿಕೊಳ್ಳಲಿದೆ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ನೂತನ ಜಿಮ್ನಿ ಕಾಂಪಾಕ್ಟ್ ಎಸ್ ಯುವಿ ಸಹ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ ಪಡೆಯಲಿದೆ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಮುಂದಿನ ವರ್ಷದಲ್ಲಿ ಮಾರುತಿ ಬಲೆನೊ ಆರ್ ಎಸ್ ಶಕ್ತಿಶಾಲಿ ಕಾರು ಬಿಡುಗಡೆಯಾಗಲಿದೆ. ತದಾ ಬಳಿಕ ಜಿಮ್ನಿ ಕಾರು ಆಗಮನವಾಗಲಿದೆ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಹಾಗಿದ್ದರೂ ಯುರೋಪ್ ಮಾರುಕಟ್ಟೆಯಲ್ಲಿ ಹೆಚ್ಚು ಶಕ್ತಿಶಾಲಿ 1.4 ಲೀಟರ್ ಬೂಸ್ಟರ್ ಜೆಟ್ ಎಂಜಿನನ್ನು ಸುಜುಕಿ ಪರಿಗಣಿಸಲಿದೆ. ಇದು ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

ಭಾರತದಲ್ಲಿ ಜಿಮ್ನಿ ಹೆಸರಿನಿಂದಲೇ ಬಿಡುಗಡೆಯಾಗಲಿದೆಯೇ ಎಂಬುದು ಇನ್ನು ಕುತೂಹಲವಾಗಿದೆ. ಇದರ ಬದಲಾಗಿ ಹೆಚ್ಚು ಪ್ರಚಲಿತವಾಗಿರು ಜಿಪ್ಸಿ ನಾಮಕರಣವನ್ನು ನೀಡಿದರೂ ಅಚ್ಚರಿ ಪಡಬೇಕಿಲ್ಲ.

ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾರುತಿ ಜಿಮ್ನಿ

1970ನೇ ಇಸವಿಯಲ್ಲಿ ಮೊದಲನೇ ತಲೆಮಾರಿನ ಜಿಮ್ನಿ ಬಿಡುಗಡೆಯಾಗಿತ್ತು. ತದಾ ಬಳಿಕ 1981ರಲ್ಲಿ ಎರಡನೇ ಹಾಗೂ 1998ರಲ್ಲಿ ಮೂರನೇ ತಲೆಮಾರಿನ ಆವೃತ್ತಿಯನ್ನು ಕಂಡಿತ್ತು. ಆಮೇಲೆ ಸುದೀರ್ಘ 17 ವರ್ಷಗಳ ಬಳಿಕ ನಾಲ್ಕನೇ ತಲೆಮಾರಿನ ಜಿಮ್ನಿ ಕಾರು 2017ರಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ.

Most Read Articles

Kannada
English summary
Maruti Suzuki Jimny India Launch Slated For Late 2017
Story first published: Tuesday, November 29, 2016, 9:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X