ಕೊನೆಗೂ ಶರಣಾದ ಮಾರುತಿ ರಿಟ್ಜ್; ಇಗ್ನಿಸ್ ಹಾದಿ ಸುಗಮ
ಆಧುನಿಕ ಅತ್ಯಾಕರ್ಷಕ ಕಾರುಗಳಿಗೆ ಮಾರುತಿ ರಿಟ್ಜ್ ಕೊನೆಗೂ ಶರಣಾಗಿದೆ. ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ರಿಟ್ಜ್ ಮಾರಾಟವನ್ನು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ನಿಲುಗಡೆಗೊಳಿಸಿದೆ. ಇದರೊಂದಿಗೆ ಬಹುನಿರೀಕ್ಷಿತ ಮಾರುತಿ ಇಗ್ನಿಸ್ ಪ್ರವೇಶ ಹಾದಿ ಸುಗಮವಾಗಿದೆ.

ಅಕ್ಟೋಬರ್ 01ರಿಂದ ಮಾರುತಿ ಸುಜುಕಿ ರಿಟ್ಜ್ ನಿರ್ಮಾಣವನ್ನು ಸ್ಥಗಿತಗೊಳಿಸಲು ಮಾರುತಿ ನಿರ್ಧರಿಸಿದೆ. ಇದರೊಂದಿಗೆ ಜನಪ್ರಿಯ ಕಾರೊಂದರ ಯುಗಾಂತ್ಯ ಕಂಡಿದೆ.

2009ನೇ ಇಸವಿಯಲ್ಲಿ ಮಾರುತಿ ಸುಜುಕಿ ರಿಟ್ಜ್ ಹ್ಯಾಚ್ ಬ್ಯಾಕ್ ಕಾರಿನ ನಿರ್ಮಾಣ ಆರಂಭವಾಗಿತ್ತು. ಈಗ 7.5 ವರ್ಷಗಳ ಬಳಿಕ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸಿದೆ.

2012ನೇ ಸಾಲಿನಲ್ಲಿ ರಿಟ್ಜ್ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿದರೂ ಮಾರಾಟದಲ್ಲಿ ದೊಡ್ಡ ಪರಿಣಾಮ ಬೀರುವಲ್ಲಿ ವಿಫಲವಾಗಿತ್ತು.

ಬಲ್ಲ ಮೂಲಗಳ ಪ್ರಕಾರ ಬಹು ನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಕಾರಿಗೆ ಮಾರುತಿ ರಿಟ್ಜ್ ಹಾದಿ ಬಿಟ್ಟು ಕೊಟ್ಟಿದೆ. ಇದು ಇನ್ನೇನು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

ಸದ್ಯಕ್ಕೆ ನಿರ್ಮಾಣವನ್ನು ಮಾತ್ರ ನಿಲುಗಡೆಗೊಳಿಸಲಾಗಿದೆ. ಈಗ ಸ್ಟೋಕ್ ಬಾಕಿ ಇರುವ ಕಾರುಗಳ ಮಾರಾಟವು ಸಂಸ್ಥೆಯ ಅಧಿಕೃತ ಡೀಲರುಗಳ ಬಳಿ ಮುಂದುವರಿಯಲಿದೆ. ತದಾ ಬಳಿಕವಷ್ಟೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.

ದೊಡ್ಡ ಹ್ಯಾಚ್ ಬ್ಯಾಕ್ ಎಂದೆನಿಸಿಕೊಂಡಿರುವ ಮಾರುತಿ ಸುಜುಕಿ ರಿಟ್ಜ್ ನಲ್ಲಿ 1.2 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಹಾಗೂ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಇದು 5 ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋ ಗೇರ್ ಬಾಕ್ಸ್ ನಿಂದಲೂ ಲಭ್ಯವಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ವ್ಯಾಗನಾರ್ ನಡುವಣ ರಿಟ್ಜ್ ಕಾರಿಗೆ ಸ್ಥಾನ ನೀಡಲಾಗಿತ್ತು. ಆದರೆ ಸಾಮಾನ್ಯ ಅತ್ಯುತ್ತಮ ಮಾರಾಟವನ್ನಷ್ಟೇ ಗಿಟ್ಟಿಸಿಕೊಳ್ಳತ್ತಾ ಬಂದಿತ್ತು.

ವಿನ್ಯಾಸದ ವಿಚಾರದಲ್ಲಿ ಮಾರುತಿ ರಿಟ್ಜ್ ಪ್ರಭಾವಶಾಲಿ ಎನಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಇದು ಕ್ರಮೇಣ ಕಳಪೆ ಮಾರಾಟಕ್ಕೆ ಹೇತುವಾಗಿತ್ತು.

ಟೆಸ್ಟಿಂಗ್ ವೇಳೆ ಮತ್ತೆ ಕ್ಯಾಮೆರಾಗೆ ಸೆರೆ ಸಿಕ್ಕಿದ ಮಾರುತಿ ಇಗ್ನಿಸ್


Click it and Unblock the Notifications