ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕೂಪೆ ಕಾರು ಅನಾವರಣ

Written By:

ದೆಹಲಿಯ ಬುದ್ಧ ಅಂತರಾಷ್ಟ್ರೀಯ ಫಾರ್ಮುಲಾ ಒನ್ ಸರ್ಕ್ಯೂಟ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಅತ್ಯಂತ ಶಕ್ತಿಶಾಲಿ ಎಎಂಜಿ ಸಿ43 ಕಾರನ್ನು ಬಿಡುಗಡೆಗೊಳಿಸಿತ್ತು. ಇದೇ ಸಂದರ್ಭದಲ್ಲಿ ಮಗದೊಂದು ಇ ಕ್ಲಾಸ್ ಕೂಪೆ ಕಾರನ್ನು ಬೆಂಝ್ ಅನಾವರಣಗೊಳಿಸುವ ಮೂಲಕ ಗಮನ ಸೆಳೆದಿದೆ.

2017 ಡೆಟ್ರಾಯ್ಟ್ ಆಟೋ ಶೋಗಿಂತಲೂ ಮುಂಚಿತವಾಗಿ ಬುದ್ಧ ಅಂತರಾಷ್ಟ್ರೀಯ ಎಫ್1 ರೇಸ್ ಟ್ರ್ಯಾಕ್ ನಲ್ಲಿ ಬೆಂಝ್ ಇ ಕ್ಲಾಸ್ ಕೂಪೆ ತನ್ನ ಶಕ್ತಿ ಪ್ರದರ್ಶನವನ್ನು ನಡೆಸಿದೆ.

ಸಿ ಕ್ಲಾಸ್ ಮತ್ತು ಎಸ್ ಕ್ಲಾಸ್ ಕೂಪೆ ಕಾರುಗಳಿಂದ ಸ್ಪೂರ್ತಿ ಪಡೆದುಕೊಂಡು ಇ ಕ್ಲಾಸ್ ಕೂಪೆ ಕಾರನ್ನು ನಿರ್ಮಿಸಲಾಗಿದೆ.

ಮುಂಭಾಗದಲ್ಲಿ ಟ್ವಿನ್ ಬ್ಲೇಡ್ ಗ್ರಿಲ್, ಎಲ್ ಇಡಿ ಹೆಡ್ ಲ್ಯಾಂಪ್, ತ್ರಿ ಪಾಯಿಂಟ್ ಸ್ಟಾರ್ ರೇಖೆಗಳು, ಬದಿಯಲ್ಲಿ ಸ್ವಭಾವ ರೇಖೆಗಳು ಮತ್ತು ಬಾಗಿದ ಮೇಲ್ಚಾವಣಿ ಗಿಟ್ಟಿಸಿಕೊಳ್ಳಲಾಗಿದೆ.

ಹಿಂದುಗಡೆ ಸಮತಲವಾದ ವಿಭಜಿತ ಎಲ್ ಇಡಿ ಬೆಳಕಿನ ಜೊತೆಗೆ ಟೈಲ್ ಲೈಟ್ ಸೇವೆಯನ್ನು ಕೊಡಲಾಗಿದೆ. ಡ್ಯುಯಲ್ ಎಕ್ಸಾಸ್ಟ್ ಮತ್ತು ಬೂಟ್ ಲಿಡ್ ಗಳಿರಲಿದೆ.

ಕಾರಿನೊಳಗೆ 12.3 ಇಂಚುಗಳ ಮಾಹಿತಿ ಮನರಂಜನಾ ಪರದೆಯನ್ನು ಜೋಡಿಸಲಾಗಿದೆ. ಸ್ಟ್ಯಾಂಡರ್ಡ್ ಇ ಕ್ಲಾಸ್ ನಲ್ಲಿ ಇದು ಐಚ್ಚಿಕವಾಗಿರಲಿದೆ.

ಇದರ ಜೊತೆಗೆ 23 ಸ್ಪೀಕರ್ ಬರ್ಮ್ ಸ್ಟರ್ ಸೌಂಡ್ ಸಿಸ್ಟಂ ಜೊತೆ ನವೀಕೃತ ಏರ್ ವೆಂಟ್ಸ್ ಗಳನ್ನು ಕೊಡಲಾಗಿದೆ.

ಸಂಸ್ಥೆಯ ಮೊಡ್ಯುಲರ್ ರಿಯರ್ ಆರ್ಕಿಟೇಕ್ಚರ್ ತಳಹದಿಯಲ್ಲಿ ನೂತನ ಇ ಕ್ಲಾಸ್ ಕೂಪೆ ಕಾರನ್ನು ನಿರ್ಮಿಸಲಾಗಿದೆ. ಹಿಂದಿನ ತಲೆಮಾರಿಗೆ ಹೋಲಿಸಿದಾಗ ದೊಡ್ಡದಾಗಿರಲಿದೆ.

ಆಯಾಮ (ಎಂಎಂ)

ಉದ್ದ 4826
ಅಗಲ 1860
ಎತ್ತರ 1430
ಚಕ್ರಾಂತರ 2873

ಈ ಮೂಲಕ ಹಿಂದಿನ ಮಾದಿರಿಗಿಂತಲೂ 123 ಎಂಎಂ ಹೆಚ್ಚು ಉದ್ದ, 74 ಎಂಎಂ ಹೆಚ್ಚು ಅಗಲ, 32 ಎಂಎಂ ಹೆಚ್ಚು ಎತ್ತರ ಮತ್ತು 113 ಎಂಎಂ ಹೆಚ್ಚು ಚಕ್ರಾಂತರವನ್ನು ಪಡೆದಿದೆ.

ಮೂರು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಆಯ್ಕೆಗಳಲ್ಲಿ ಇ ಕ್ಲಾಸ್ ಕೂಪೆ ಲಭ್ಯವಿರುತ್ತದೆ. ಇದರ ಇ200ಡಿ ವೆರಿಯಂಟ್ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 400 ಎನ್ ಎಂ ತಿರುಗುಬಲದಲ್ಲಿ 191 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಒಂಬತ್ತು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದಿದೆ.

ಹಾಗೆಯೇ ಇ200 ಮತ್ತು ಇ300 ಗಳೆಂಬ ಎರಡು ಪೆಟ್ರೋಲ್ ವೆರಿಯಂಟ್ ಗಳು 2.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಗಿಟ್ಟಿಸಿಕೊಳ್ಳಲಿದ್ದು, 9 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಈ ಪೈಕಿ ಇ200 ಮಾದರಿಯು 300 ಎನ್ ಎಂ ತಿರುಗುಬಲದಲ್ಲಿ 181 ಅಶ್ವಶಕ್ತಿಯನ್ನು ಮತ್ತು ಇ300 ವೆರಿಯಂಟ್ 370 ಎನ್ ಎಂ ತಿರುಗುಬಲದಲ್ಲಿ 241 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂತೆಯೇ ಟಾಪ್ ಎಂಡ್ ಇ400 ಮಾದರಿಯಲ್ಲಿರುವ 3.0 ಲೀಟರ್ ಟ್ವಿನ್ ಟರ್ಬೊಚಾರ್ಜ್ಡ್ ವಿ6 ಎಂಜಿನ್ 480 ಎನ್ ಎಂ ತಿರುಗುಬಲದಲ್ಲಿ 328 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ ಒಂಬತ್ತು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮರ್ಸಿಡಿಸ್ ಇ400 ಕೂಪೆ ಕಾರು 5.3 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಮತ್ತು ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಚಾಲನಾ ವಿಧಗಳು: ಇಕೊ, ಕಂಫರ್ಟ್, ಸ್ಪೋರ್ಟ್ ಮತ್ತು ಸ್ಪೋರ್ಟ್ ಪ್ಲಸ್

English summary
2017 Mercedes E-Class Coupe Unveiled
Please Wait while comments are loading...

Latest Photos