ಟಾಪ್ ಲೆಸ್ ಚೆಲುವೆ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಮತ್ತು ಎಸ್ ಕ್ಲಾಸ್ ಬಿಡುಗಡೆ
ಓಪನ್ ಟಾಪ್ ಕಾರುಗಳ ದೊಡ್ಡ ಶೇಖರಣೆಯನ್ನೇ ಹೊಂದಿರುವ ಮರ್ಸಿಡಿಸ್ ಬೆಂಝ್ ನಿರಂತರ ಅಂತರಾಳದಲ್ಲಿ ಭಾರತಕ್ಕೆ ಪರಿಚಯಿಸುತ್ತಲೇ ಇದೆ.
ಜರ್ಮನಿಯ ಮೂಲದ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಭಾರತದಲ್ಲಿ ಟಾಪ್ ಲೆಸ್ ಚೆಲುವೆರಾದ ಸಿ ಕ್ಲಾಸ್ ಮತ್ತು ಎಸ್ ಕ್ಲಾಸ್ ಕ್ಯಾಬ್ರಿಯೊ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಇದು ಪ್ರಸಕ್ತ ಸಾಲಿನಲ್ಲಿ ಬೆಂಝ್ ಬಿಡುಗಡೆ ಮಾಡುತ್ತಿರುವ 10 ಮತ್ತು 11ನೇ ಬಿಡುಗಡೆಯಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಸಿ ಕ್ಲಾಸ್ ಕ್ಯಾಬ್ರಿಯೊ: 60 ಲಕ್ಷ ರು.
ಎಸ್ ಕ್ಲಾಸ್ ಕ್ಯಾಬ್ರಿಯೊ: 2.25 ಕೋಟಿ ರು.

ದೇಶದಲ್ಲಿ ಅತಿ ಹೆಚ್ಚು ಕನ್ವರ್ಟಿಬಲ್ ಶ್ರೇಣಿಯ ಕಾರುಗಳನ್ನು ಹೊಂದಿರುವ ಮರ್ಸಿಡಿಸ್ ಬೆಂಝ್ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 9924 ಯುನಿಟ್ ಗಳ ಮಾರಾಟವನ್ನು ದಾಟಿದೆ.

ಸಿ300 ಕ್ಯಾಬ್ರಿಯೊ ಮಾರಾಟಕ್ಕೆ ಲಭ್ಯವಾಗಲಿರುವ ಅತಿ ಸಣ್ಣ ಕನ್ವರ್ಟಿಬಲ್ (ಆಕಾರದಲ್ಲಿ ಅಲ್ಲ) ಕಾರೆನಿಸಿಕೊಳ್ಳಲಿದೆ. ಇದು ಸೆಡಾನ್ ಕಾರಿನಿಂದ ನಿರ್ಣಾಯಕ ವಿನ್ಯಾಸ ನೀತಿಯನ್ನು ಪಡೆದಿದೆ.

ಫ್ಯಾಬ್ರಿಕ್ ರೂಫ್, ವೈವಿಧ್ಯತೆಯ ಮುಂಭಾಗ ಹಾಗೂ ಹಿಂಭಾಗದ ನೋಟ ಇದರಲ್ಲಿರಲಿದ್ದು, ಗಂಟೆಗೆ 50 ಕೀ.ಮೀ. ವೇಗದಲ್ಲೂ ಕೇವಲ 20 ಸಕೆಂಡುಗಳಲ್ಲಿ ರೂಫ್ ಮುಚ್ಚುಗಡೆಗೊಳ್ಳಲಿದೆ.

ಇದರಲ್ಲಿರುವ 2.0 ಲೀಟರ್ 4 ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್, 370 ಎನ್ ಎಂ ತಿರುಗುಬಲದಲ್ಲಿ 241 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 9 ಸ್ಪೀಡ್ 9ಜಿ ಟ್ರಾನಿಕ್ ಗೇರ್ ಬಾಕ್ಸ್ ಇರಲಿದೆ.

ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಚಲಿಸಬಲ್ಲ ಸಿ300 ಕ್ಯಾಬ್ರಿಯೊ ಕಾರು, 6.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅಲ್ಲದೆ ಮಾರ್ಪಾಡುಗೊಳಿಸುವ ಅವಕಾಶವೂ ಇದರಲ್ಲಿರುತ್ತದೆ.

ಸಿ300 ಕ್ಯಾಬ್ರಿಯೊಗೆ ಹೋಲಿಸಿದಾಗ ಮತ್ತಷ್ಟು ಐಷಾರಾಮಿ ಎನಿಸಿಕೊಳ್ಳಲಿರುವ ಎಸ್500 ಕ್ಯಾಬ್ರಿಯೊ, ಹೆಚ್ಚು ಶಕ್ತಿಶಾಲಿ 4.7 ಲೀಟರ್ ವಿ8 ಬೈಟರ್ಬೊ ಎಂಜಿನ್ ಪಡೆಯಲಿದೆ. ಇದು 700 ಎನ್ ಎಂ ತಿರುಗುಬಲದಲ್ಲಿ 443 ಅಶ್ವಶಕ್ತಿಯನ್ನು ನೀಡಲಿದೆ.

ಮರ್ಸಿಡಿಸ್ ಬೆಂಝ್ ಎಸ್500 ಕ್ಯಾಬ್ರಿಯೊ ಕಾರು ಕೇವಲ 4.6 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಮತ್ತು ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಸಿ300 ಕ್ಯಾಬ್ರಿಯೊ ತರಹನೇ ಎಸ್500 ಓಪನ್ ಟಾಪ್ ಕಾರು ಸಹ ಗಂಟೆಗೆ 50 ಕೀ.ಮೀ. ವೇಗದಲ್ಲಿ ಕೇವಲ 20 ಸೆಕೆಂಡುಗಳಲ್ಲೇ ರೂಫ್ ಮುಚ್ಚುಗಡೆಗೊಳ್ಳಲಿದೆ.

ಎಸ್ ಕ್ಲಾಸ್ ಕೂಪೆ ಕಾರಿನಿಂದ ವಿನ್ಯಾಸವನ್ನು ಆಮದು ಮಾಡಲಾಗಿದ್ದು, ಎಸ್500 ಕ್ಯಾಬ್ರಿಯೊ ಒಂಬತ್ತು ಹೊರಮೈ ಬಣ್ಣಗಳು ಮತ್ತು 4 ಫ್ಯಾಬ್ರಿಕ್ ರೂಫ್ ಬಣ್ಣದ ಆಯ್ಕೆಯನ್ನು ಹೊಂದಿರಲಿದೆ.

ನಿಮ್ಮ ಮಾಹತಿಗಾಗಿ, ಎಸ್500 ಕ್ಯಾಬ್ರಿಯೊ ದೇಶದಲ್ಲಿ ಪರಿಚಯಿಸಲಾಗುತ್ತಿರುವ ಆರನೇ ಎಸ್ ಕ್ಲಾಸ್ ಮಾದರಿಯಾಗಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಬಹು ಏರ್ ಬ್ಯಾಗ್, ಆಟೋಮ್ಯಾಟಿಕ್ ಪಾರ್ಕಿಂಗ್ ಜೊತೆಗೆ 360 ಡಿಗ್ರಿ ಕ್ಯಾಮೆರಾ, ರಾತ್ರಿ ವೀಕ್ಷಣೆ ಸಹಾಯಿ ವ್ಯವಸ್ಥೆ ಮುಂತಾದ ವ್ಯವಸ್ಥೆಗಳನ್ನು ಹೊಂದಿರಲಿದೆ.


Click it and Unblock the Notifications