ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

By Nagaraja

ಫ್ರಾನ್ಸ್ ಮೂಲದ ರೆನೊ ಸಂಸ್ಥೆಯೊಂದಿಗೆ ಜೊತೆಗಾರಿಕೆ ಹೊಂದಿರುವ ಜಪಾನ್‌ನ ಹೆಸರಾಂತ ಸಂಸ್ಥೆ ನಿಸ್ಸಾನ್ ಇದೀಗ ರೆನೊ ಡಸ್ಟರ್ ಗೆ ಸಮಾನವಾಗಿ ನಿಸ್ಸಾನ್ ಟೆರೆನೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಹಿಂದೆ ಭಾರತೀಯ ಮಾರುಕಟ್ಟೆಗೆ ರೆನೊ ಡಸ್ಟರ್ ಮೊದಲು ಕಾಲಿಟ್ಟಿದ್ದರೆ ನಿಸ್ಸಾನ್ ಟೆರನೊ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹಿಂಬಾಲಿಸಿತ್ತು.

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

ಹಬ್ಬದ ಆವೃತ್ತಿಯಲ್ಲಿ ಗ್ರಾಹಕರಿಗೆ ಜೊತೆಗೆ ಸಂಭ್ರಮವನ್ನು ಹಂಚಿಕೊಳ್ಳಲಿರುವ ನಿಸ್ಸಾನ್, ಎಎಂಟಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ಟ್ವಿಟರ್ ನಲ್ಲಿ ನಿಸ್ಸಾನ್ ಟ್ವೀಟ್ ಮಾಡಿದೆ.

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

ಇಲ್ಲೂ ರೆನೊ ಡಸ್ಟರ್ ಗೆ ಸಮಾನವಾದ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಪಡೆಯಲಿದೆ. ಸದ್ಯಕ್ಕೆ ನಿಸ್ಸಾನ್ ಸನ್ನಿ ಹಾಗೂ ಮೈಕ್ರಾ ಕಾರುಗಳಲ್ಲಿ ಆಯೋಮ್ಯಾಟಿಕ್ ಆಯ್ಕೆಯಿರುತ್ತದೆ.

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 248 ಎನ್ ಎಂ ತಿರುಗುಬಲದಲ್ಲಿ 109 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

ಭಾರತದಲ್ಲಿ ಡಸ್ಟರ್ ಎಎಂಟಿ ಆರ್ ಎಕ್ಸ್ ಎಳ್ ಮತ್ತು ಆರ್ ಎಕ್ಸ್ ಝಡ್ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಲಭ್ಯವಿದೆ. ಇವೆರಡು ಅನುಕ್ರಮವಾಗಿ 11.76 ಹಾಗೂ 12.97 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

ನೂತನ ನಿಸ್ಸಾನ್ ಟೆರನೊ ಎಎಂಟಿ ಡಸ್ಟರ್ ಗಿಂತಲೂ ದುಬಾರಿಯೆನಿಸಲಿದ್ದು, ದೆಹಲಿ ಎಕ್ಸ್ ಶೋ ರೂಂ 12.50 ಲಕ್ಷ ರು.ಗಳ ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಬ್ಲೂಟೂತ್ ಹ್ಯಾಂಡ್ಸ್ ಫ್ರಿ ಫೋನ್ ಸಿಸ್ಟಂ

ಎಎಂ, ಎಫ್, ಸಿಡಿ ಆಡಿಯೋ ಸಿಸ್ಟ

ಮಲ್ಟಿ ಫಂಕ್ಷನ್ ಡಿಸ್ ಪ್ಲೇ

ರಿಯರ್ ಪವರ್ ಸಾಕೆಟ್

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

ಅಪ್ಪರ್ ಡ್ಯಾಶ್ ಸ್ಟೋರೆಜ್ ಕಂಪಾರ್ಟ್ ಮೆಂಟ್,

ಫ್ರಂಟ್ ಡೋರ್ ಪಾಕೆಟ್,

ರಿಯರ್ ಸೀಟು ಆರ್ಮ್ ರೆಸ್ಟ್, ಕಪ್ ಹೋಲ್ಡರ್,

ರಿಯರ್ ಸೀಟು ಎಸಿ,

ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಬದಿಯ ಮಿರರ್,

ಡಸ್ಟರ್ ಬಳಿಕವೀಗ ಎಎಂಟಿ ರೂಪದಲ್ಲಿ ಬರುತ್ತಿದೆ ನಿಸ್ಸಾನ್ ಟೆರನೊ

ಟಿಲ್ಟ್ ಸ್ಟೀರಿಂಗ್ ವೀಲ್,

8 ವಿಧಗಳಲ್ಲಿ ಹೆಂದಾಣಿಸಬಹುದಾದ ಚಾಲಕ ಸೀಟು,

ಢಿಕ್ಕಿ ಜಾಗ,

ರಿಯರ್ ಪಾರ್ಕಿಂಗ್ ಸೆನ್ಸಾರ್

Most Read Articles

Kannada
English summary
Nissan India To Add More Convenience To Its Terrano Compact SUV Soon
Story first published: Wednesday, October 5, 2016, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X