ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ನಿಸ್ಸಾನ್ ಟೆರನೊ ಎಎಂಟಿ ಮೂಲಕ ಪ್ರೀಮಿಯಂ ಎಸ್ ಯುವಿ ಗ್ರಾಹಕರಲ್ಲಿ ಹೊಸತನವನ್ನುಂಟು ಮಾಡಲಿದೆ.

By Nagaraja

ರೆನೊ ಡಸ್ಟರ್ ಹೆಜ್ಜೆಯನ್ನೇ ಹಿಂಬಾಲಿಸಿರುವ ಜಪಾನ್ ಮೂಲ ನಿಸ್ಸಾನ್, ಜನಪ್ರಿಯ ಟೆರನೊ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆವೃತ್ತಿವನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಎಎಂಟಿ ಕಾರುಗಳ ಸಂಖ್ಯೆಯು ಏರಿಕೆಯಾಗಿದ್ದು, ನಿಸ್ಸಾನ್ ಟೆರೆನೊ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ನೂತನ ನಿಸ್ಸಾನ್ ಟೆರನೊ ಎಎಂಟಿ ಮಾದರಿಯು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 13.75 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ನಿಸ್ಸಾನ್ ಟೆರೆನೊ ಎಎಂಟಿ ಆವೃತ್ತಿಯು ಟಾಪ್ ಎಂಡ್ 110 ಪಿಎಸ್ ವೆರಿಯಂಟ್ ನಲ್ಲಿ ಲಭ್ಯವಾಗಲಿದ್ದು, ಮ್ಯಾನುವಲ್ ಎಕ್ಸ್ ವಿ ಟಿಎಚ್ ಪಿ ಪ್ರೀಮಿಯಂ ವೆರಿಯಂಟ್ ಗಿಂತಲೂ ಸರಿ ಸುಮಾರು 60,000 ರು.ಗಳಷ್ಟು ದುಬಾರಿಯೆನಿಸಲಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ನಿಸ್ಸಾನ್ ಟೆರನೊ ಎಎಂಟಿ ಕಾರು ಪರಿಷ್ಕೃತ ಒಳಮೈ ಜೊತೆಗೆ ಏಳು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಹೊಸತಾದ 'ಸ್ಯಾಂಡ್ ಸ್ಟೋನ್ ಬ್ರೌನ್' ಕೂಡಾ ಸೇರಿರಲಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ನಿಸ್ಸಾನ್ ಟೆರನೊ ಎಎಂಟಿ ಮಾದರಿಯು 1.5 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಪಡೆಯಲಿದ್ದು, 245 ಎನ್ ಎಂ ತಿರುಗುಬಲದಲ್ಲಿ 109 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ನೂತನ ಟೆರನೊ ಎಎಂಟಿ ಕಾರು ರೆನೊ ಡಸ್ಟರ್ ಆರ್ ಎಕ್ಸ್ ಝಡ್ ಟು ವೀಲ್ ಡ್ರೈವ್ ಎಎಂಟಿ ಮಾದರಿಗಿಂತಲೂ 78,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ವಾಹನ ಪ್ರೇಮಿಗಳು ಹೇಗೆ ಬರಮಾಡಿಕೊಳ್ಳಲಿದ್ದಾರೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ಡಸ್ಟರ್ ಬಳಿಕವೀಗ ನಿಸ್ಸಾನ್ ಟೆರನೊ ಎಎಂಟಿ ಕಾರು ಬಿಡುಗಡೆ

ಮತ್ತೊಂದೆಡೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಪ್ರೀಮಿಯಂ ಎಸ್ ಯುವಿ ಗ್ರಾಹಕರು ನಿಸ್ಸಾನ್ ಅತ್ಯುತ್ತಮ ಕೊಡುಗೆಯನ್ನೇ ನೀಡಿದೆ.

Most Read Articles

Kannada
English summary
Nissan India Launches The Terrano AMT At An Irresistible Price
Story first published: Wednesday, November 2, 2016, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X