ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಕ್ರೀಡಾ ಬಳಕೆಯ ವಾಹನವು ಭಾರತದಲ್ಲಿ ಬಿಡುಗಡೆಯಾಗಲಿದೆ.

By Nagaraja

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಈ ವರ್ಷಾಂತ್ಯದ ವೇಳೆಯಲ್ಲಿ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಕಾರು ಭಾರತ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಬೇಕಿತ್ತು. ಆದರೆ ಕಾರಣಾಂತರಗಳಿಂದಾಗಿ ನಿಸ್ಸಾನ್ ಎಕ್ಸ್ ಟ್ರೈಲ್ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ಬಲ್ಲ ಮೂಲಗಳ ಪ್ರಕಾರ ನಿಸ್ಸಾನ್ ಎಕ್ಸ್ ಟ್ರೈಲ್ ಹೈಬ್ರಿಡ್ ಕಾರು ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ನಿಸ್ಸಾನ್ ಜಿಟಿಆರ್ ಕ್ರೀಡಾ ಕಾರು ಜೊತೆಗೆ ಎಕ್ಸ್ ಟ್ರೈಲ್ ಹೈಬ್ರಿಡ್ ಕಾರನ್ನು ನಿಸ್ಸಾನ್ ಅನಾವರಣಗೊಳಿಸಿತ್ತು.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತದ ಮುಖಾಂತರ ನಿಸ್ಸಾನ್ ಎಕ್ಸ್ ಟ್ರೈಲ್ ಭಾರತವನ್ನು ತಲುಪಲಿದ್ದು, 30 ರಿಂದ 35 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ಕಾರಿನಡಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 32 ಕೆಡಬ್ಲ್ಯು ಎಲೆಕ್ಟ್ರಿಕ್ ಮೋಟಾರು ಜೋಡಣೆಯಾಗಲಿದೆ. ಭಾರತವು ನಿಸ್ಸಾನ್ ಎಕ್ಸ್ ಟ್ರೈಲ್ ಗಿಟ್ಟಿಸಿಕೊಳ್ಳುತ್ತಿರುವ ನಾಲ್ಕನೇ ಮಾರುಕಟ್ಟೆಯಾಗಿದೆ,.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ನೂತನ ಎಕ್ಸ್ ಟ್ರೈಲ್ ಕ್ರೀಡಾ ಬಳಕೆಯ ಕಾರಿನಲ್ಲಿ ಎಕ್ಸ್ ಟ್ರಾನಿಕ್ ಸಿವಿಟಿ ಗೇರ್ ಬಾಕ್ಸ್ ಜೊತೆಗೆ ಆಲ್ ವೀಲ್ ಚಾಲನಾ ವ್ಯವಸ್ಥೆಯು ಪ್ರಮುಖ ಆಕರ್ಷಣೆಯಾಗಲಿದೆ.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ಸಿಎಂಎಫ್-ಸಿ ತಳಹದಿಯಲ್ಲಿ ನಿರ್ಮಾಣವಾಗಲಿರುವ ಎಕ್ಸ್ ಟ್ರೈಲ್ ಸ್ಲಿಮ್ ಹೆಡ್ ಲ್ಯಾಂಪ್, ವಿ ಮೊಷನ್ ಗ್ರಿಲ್, ಸಿ ಆಕಾರದ ಟೈಲ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಹೊಸ ವರ್ಷದಲ್ಲಿ ನಿಸ್ಸಾನ್ ಎಕ್ಸ್-ಟ್ರೈಲ್ ಹೈಬ್ರಿಡ್ ಕಾರು ಭಾರತಕ್ಕೆ

ಐದು ಸೀಟುಗಳ ಆಸನ ವ್ಯವಸ್ಥೆಯ ನಿಸ್ಸಾನ್ ಎಕ್ಸ್ ಟ್ರೈಲ್ 4640 ಎಂಎಂ ಉದ್ದ, 1820 ಎಂಎಂ ಅಗಲ ಮತ್ತು 1715 ಎಂಎಂ ಎತ್ತರವನ್ನು ಪಡೆಯಲಿದೆ. ಹಾಗೆಯೇ 2705 ಎಂಎಂ ಚಕ್ರಾಂತರವನ್ನು ಒಳಗೊಂಡಿರುತ್ತದೆ.

Most Read Articles

Kannada
English summary
Nissan X-Trail Hybrid India Launch Slated For Early 2017
Story first published: Saturday, December 3, 2016, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X