ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ; ಭಾರತಕ್ಕಿಲ್ಲ ಏಕೆ ?

By Nagaraja

ಜಪಾನ್ ಮೂಲದ ಪ್ರಸಿದ್ಧ ವಾಹನ ಸಂಸ್ಥೆ ಸುಜುಕಿ, ಇಟಲಿಯಲ್ಲಿ ಅತಿ ನೂತನ ಸ್ವಿಫ್ಟ್ ಟೈಗರ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಆದರೆ ಭಾರತದಲ್ಲಿ ಮಾರುತಿ ಸುಜುಕಿ ಮಾರಾಟ ಮಾಡುತ್ತಿರುವ ಈ ಜನಪ್ರಿಯ ಕಾರಿನ ನೂತನ ಎಡಿಷನ್ ದೇಶವನ್ನು ತಲುಪುತ್ತಿಲ್ಲ. ಬದಲಾಗಿ ದೇಶದ ನಿವಾಸಿಗಳು ಈಗಷ್ಟೇ ಬಿಡುಗಡೆಗೊಂಡಿರುವ ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿಯ ಆನಂದವನ್ನು ಪಡೆಯಬಹುದಾಗಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಇಟಲಿಯಲ್ಲಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಎಕ್ಸ್ ಕ್ಲೂಸಿವ್ ಸ್ಟೈಲಿಂಗ್ ಪ್ಯಾಕೇಜನ್ನು ಪಡೆಯಲಿದೆ. ಅಲ್ಲದೆ ಸೀಮಿತ 100 ಯುನಿಟ್ ಗಳಷ್ಟು ಮಾತ್ರ ಲಭ್ಯವಾಗಲಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಭಾರತೀಯ ರುಪಾಯಿ ಪ್ರಕಾರ ಸ್ವಿಫ್ಟ್ ಟೈಗರ್ ಎಡಿಷನ್ 10.11 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದ್ದು, ಈ ವಿಶೇಷ ಆಫರ್ ಗಾಗಿ ಅಕ್ಟೋಬರ್ 31ರೊಳಗೆ ಬುಕ್ಕಿಂಗ್ ಮಾಡಿಕೊಳ್ಳಬೇಕಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಒಮ್ಮೆ 100 ಯುನಿಟ್ ಮಾರಾಟವಾದ್ದಲ್ಲಿ ಬಳಿಕ ಸ್ವಿಫ್ಟ್ ಟೈಗರ್ ಎಡಿಷನ್ ಕಾರಿನ ಬೆಲೆ ಮುಂದಿನ ತಿಂಗಳಿಂದ 12.43 ಲಕ್ಷ ರುಪಾಯಿಗಳಿಗೆ ಏರಿಕೆಯಾಗಲಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಟು ಟೋನ್ ಬಾಡಿ ಬಣ್ಣ ಜೊತೆಗೆ ಆರಂಜ್ ಪ್ರಾಥಮಿಕ ಬಣ್ಣ ಹಾಗೂ ಆನಂತರ ಕಪ್ಪು ವರ್ಣವಿರಲಿದೆ. ಎ ಪಿಲ್ಲರ್, ಬಿ ಪಿಲ್ಲರ್, ರೂಫ್, 16 ಇಂಚುಗಳ ಅಲಾಯ್ ವೀಲ್, ಸ್ಪಾಯ್ಲರ್ ಮತ್ತು ಡೋರ್ ಮಿರರ್ ಮೇಲ್ಬಾಗವು ಕಪ್ಪು ವರ್ಣದಿಂದ ಕೂಡಿರಲಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಸಿ ಪಿಲ್ಲರ್ ನಲ್ಲಿ ಟೋರಾ ಎಂದು ಜಪಾನ್ ಭಾಷೆಯಲ್ಲಿ ಬರೆಯಲಿದೆ. ಇಂಗ್ಲಿಂಷ್ ನಲ್ಲಿ ಇದರರ್ಥ ಟೈಗರ್ ಎಂಬುದಾಗಿದೆ. ಬೂಟ್ ಲಿಡ್ ನಲ್ಲೂ ಟೈಗರ್ ಗ್ರಾಫಿಕ್ಸ್ ಕಂಡುಬರಲಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಇವೆರಡು ಹುಲಿ ಲಾಂಛನಗಳು ಸಂಸ್ಥೆಯ ಟ್ಯೂರಿನ್ ವಿನ್ಯಾಸ ಕೇಂದ್ರದಿಂದ ಲಗತ್ತಿಸಲಾಗಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಕಾರಿನೊಳಗೆ ಏನೆಲ್ಲ ಬದಲಾವಣೆಗಳಿವೆ ಎಂಬುದನ್ನು ಸುಜುಕಿ ಬಹಿರಂಗಪಡಿಸಿಲ್ಲ. ಇದು ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಖಾಸಗಿ ಗ್ಲಾಸ್, ಕ್ರೂಸ್ ಕಂಟ್ರೋಲ್, 2 ಡಿನ್ ಆಡಿಯೋ ಜೊತೆ 4 ಸ್ಪೀಕರ್ ಮತ್ತು ನೇವಿಗೇಷನ್ ವ್ಯವಸ್ಥೆಯಿರಲಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಅಂದ ಹಾಗೆ ಸುಜುಕಿ ಸ್ವಿಫ್ಟ್ ಟೈಗರ್ ಎಡಿಷನ್ ಕೆ12ಬಿ 1.2 ಲೀಟರ್ ವಿವಿಟಿ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 118 ಎನ್ ಎಂ ತಿರುಗುಬಲದಲ್ಲಿ 92.49 ಅಶ್ವಶಕ್ತಿಯನ್ನು ನೀಡಲಿದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದ್ದು, ಪ್ರತಿ ಗಂಟೆಗೆ 165 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇಟಲಿಯಲ್ಲಿ ಸುಜುಕಿ ಸ್ವಿಫ್ಟ್ ಟೈಗರ್ ಆವೃತ್ತಿ ಬಿಡುಗಡೆ

ಇವನ್ನೂ ಓದಿ: ನೀವೇಕೆ ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ಖರೀದಿಸಬೇಕು? 10 ಕಾರಣಗಳು

Most Read Articles

Kannada
Read more on ಸುಜುಕಿ suzuki
English summary
Suzuki Launches The Swift Hatchback In A Special Edition Avatar
Story first published: Thursday, October 6, 2016, 9:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X