ತೂಗುಯ್ಯಾಲೆಯಲ್ಲಿ ಟಾಟಾ ಬೋಲ್ಟ್ ಭವಿಷ್ಯದ ಸವಾರಿ

By Nagaraja

ಕಳಪೆ ಮಾರಾಟವನ್ನು ಎದುರಿಸುತ್ತಿರುವ ಟಾಟಾ ಮೋಟಾರ್ಸ್ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನ ಭವಿಷ್ಯ ಅಕ್ಷರಶ: ತೂಗುಯ್ಯಾಲೆಯಲ್ಲಿದೆ. ಆದರೆ ಕೊನೆಯ ಆಶಾಕಿರಣವೆಂಬಂತೆ ಟಾಟಾ ಬೋಲ್ಟ್ ನಿರ್ಮಾಣವನ್ನು ಶಾಶ್ವತವಾಗಿ ನಿಲುಗಡೆಗೊಳಿಸುವ ಯಾವುದೇ ಯೋಜನೆ ಸಂಸ್ಥೆಗಿಲ್ಲ ಎಂದು ಟಾಟಾ ಮೋಟಾರ್ಸ್ ವಕ್ತಾರರೋರ್ವರು ತಿಳಿಸಿದ್ದಾರೆ.

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಆಗಿರುವ ಟಾಟಾ ಮೋಟಾರ್ಸ್ 2015 ವರ್ಷಾರಂಭದಲ್ಲಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿತ್ತು. ಆರಂಭದಲ್ಲಿ ತಾರತಮ್ಯ ಅತ್ಯುತ್ತಮ ಮಾರಾಟ ಮಾರಾಟ ಗಿಟ್ಟಿಸಿಕೊಂಡರೂ ಕ್ರಮೇಣ ಕಳೆಗುಂದಿತ್ತು. ಇವೆಲ್ಲವೂ ಸಂಸ್ಥೆಗೆ ದೊಡ್ಡ ಹೊಡೆತವನ್ನೇ ನೀಡಿದೆ.

ಟಾಟಾ ಬೋಲ್ಟ್


ಬೆಲೆ ಕೊಂಚ ಜಾಸ್ತಿಯಾಗಿರುವುದು ಕಳಪೆ ಮಾರಾಟಕ್ಕೆ ಕಾರಣ ಎನ್ನಲಾಗುತ್ತಿದೆ. 2015ರಲ್ಲಿ ಬಿಡುಗಡೆಯಾಗಿರುವ ಟಾಟಾ ಬೋಲ್ಟ್ ಇದುವರೆಗೆ 17,000 ಯುನಿಟ್ ಗಳಷ್ಟೇ ಮಾರಾಟವನ್ನು ಗಿಟ್ಟಿಸಿಕೊಂಡಿದೆ.

ಟಾಟಾ ಬೋಲ್ಟ್ ನಲ್ಲಿರುವ 1.2 ಲೀಟರ್ ರೆವೊಟ್ರಾನ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ 1.3 ಲೀಟರ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ 190 ಎನ್ ಎಂ ತಿರುಗುಬಲದಲ್ಲಿ 73 ಅಶ್ವಶಕ್ತಿಯನ್ನು ನೀಡುತ್ತದೆ. ಇವೆರಡು ಫೈವ್ ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ.

ಇದಕ್ಕೂ ಮೊದಲು ಟಾಟಾ ಬೋಲ್ಟ್ ಸ್ಪೋರ್ಟ್ ಯೋಜನೆಗೂ ಟಾಟಾ ಬ್ರೇಕ್ ಹಾಡುತ್ತಿದೆ ಎಂಬ ಬಗ್ಗೆ ವರದಿಗಳು ಬಂದಿದ್ದವು. ಟಾಟಾ ಬೋಲ್ಟ್ ನಿಂದ ಪ್ರೇರಣೆ ಪಡೆದ ಸ್ಪೋರ್ಟ್ ಆವೃತ್ತಿಯನ್ನು ಮೊದಲ ಬಾರಿಗೆ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳಿಸಲಾಗಿತ್ತು.

ಇನ್ನೊಂದೆಡೆ ಟಾಟಾ ಪಾಲಿಗೆ ವರದಾನವಾಗಿರುವ ಅತಿ ನೂತನ ಟಿಯಾಗೊ ಪ್ರತಿ ತಿಂಗಳು ಸರಾಸರಿ 4,000 ಯುನಿಟ್ ಗಳಿಗೂ ಹೆಚ್ಚಿನ ಮಾರಾಟವನ್ನು ಕಂಡುಕೊಳ್ಳುತ್ತಿದೆ. ಅಲ್ಲದೆ ಟಾಟಾ ಪಾಲಿನಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಕಾರೆಂಬ ಕೀರ್ತಿಗೂ ಪಾತ್ರವಾಗಿದೆ.

Most Read Articles

Kannada
English summary
Future Of Tata Motors’ Bolt Hatchback Under Scanner
Story first published: Tuesday, September 27, 2016, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X