ಟಾಟಾ ನೂತನ ಕಾರು ಹೆಕ್ಸಾ ಖರೀದಿಗೆ ಯೋಗ್ಯವೇ?

By Nagaraja

ಸ್ವಲ್ಪ ಸಮಯದ ಹಿಂದಿನ ವರೆಗೂ ಟಾಟಾ ಕಾರುಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದರು. ಆದರೆ ಹೊಸ ವಿನ್ಯಾಸ ತಂತ್ರಜ್ಞಾನದೊಂದಿಗೆ ಎಂಟ್ರಿ ಕೊಟ್ಟಿರುವ ಟಾಟಾ ಟಿಯಾಗೊ ಪ್ರವೇಶದ ಬಳಿಕ ಪರಿಸ್ಥಿತಿ ಬದಲಾಗುತ್ತಿದೆ. ಟ್ಯಾಕ್ಸಿ ಕಾರೆಂಬ ಅಪಕೀರ್ತಿಯನ್ನು ತೊಳಗಿಸುವಲ್ಲಿ ಟಿಯಾಗೊ ಯಶಸ್ಸನ್ನು ಕಂಡಿದೆ.

ಈಗ ಮಗದೊಂದು ಟಾಟಾ ಕಾರು ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಅದುವೇ ಹೊಚ್ಚ ಹೊಸ ಹೆಕ್ಸಾ. ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಲಿರುವ ನೂತನ ಹೆಕ್ಸಾ ಖರೀದಿಗೆ ಯೋಗ್ಯವೇ ಎಂಬುದು ಬಹಳ ಕುತೂಹಲವನ್ನು ಮೂಡಿಸಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ದಿಟ್ಟವಾದ ವಿನ್ಯಾಸ ಟಾಟಾ ಹೆಕ್ಸಾಗೆ ವರದಾನವಾಗಲಿದೆ. ಸ್ಟೈಲಿಷ್ ಫ್ರಂಟ್ ಗ್ರಿಲ್, ಬಂಪರ್, ರೂಫ್ ರೈಲ್, ಕಪ್ಪು ಪಟ್ಟಿ ಹಾಗೂ 19 ಇಂಚುಗಳ ಅಲಾಯ್ ಚಕ್ರಗಳು ಇದರಲ್ಲಿರಲಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಟಾಟಾ ನೂತನ ಹೆಕ್ಸಾದಲ್ಲಿರುವ 2.2 ಲೀಟರ್ 4 ಸಿಲಿಂಡರ್ ವ್ಯಾರಿಕೋರ್ 400 ಡೀಸೆಲ್ ಟರ್ಬೊಚಾರ್ಜರ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 156 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಪಡೆಯಲಿದೆ. ಬಳಿಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಲಭ್ಯವಾಗಲಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಐದು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಜೆಬಿಎಲ್ ಹರ್ಮಾನ್ ಆಡಿಯೋ ಸಿಸ್ಟಂ, ಬಹು ಮಾಹಿತಿ ಪರದೆ, ಎಂಟು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು, ಮನಮೋಹಕ ಬೆಳಕಿನ ಸೇವೆಯಿರಲಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಟಿಯಾಗೊಗೆ ಸಮಾನವಾದ ರೀತಿಯಲ್ಲಿ ಪುಣೆ, ಇಟಲಿ ಹಾಗೂ ಬ್ರಿಟನ್ ನಲ್ಲಿ ಸ್ಥಿತಗೊಂಡಿರುವ ಡಿಸೈನ್ ಘಟಕಗಳ ನೆರವಿನಿಂದ ಹೆಕ್ಸಾ ಕ್ರೀಡಾ ಬಳಕೆಯ ವಾಹನವನ್ನು ನಿರ್ಮಿಸಲಾಗಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟಿಂಗ್, ಲೆಥರ್ ಹೋದಿಕೆಯ ಕ್ಯಾಪ್ಟನ್ ಸೀಟು, ಆರ್ಮ್ ರೆಸ್ಟ್, ಡ್ಯುಯಲ್ ಟೋನ್ ಫಿನಿಶ್ ಇತರ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಇದು 4764 ಎಂಎಂ ಉದ್ದ, 1895 ಎಂಎಂ ಅಗಲ, 1780 ಎಂಎಂ ಎತ್ತರ ಹಾಗೂ 2850 ಎಂಎಂ ಚಕ್ರಾಂತರವನ್ನು ಪಡೆದಿದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ನಾಲ್ಕು ಚಾಲನಾ ವಿಧಗಳು - ಆಟೋ, ಕಂಫರ್ಟ್, ಡೈನಾಮಿಕ್ ಮತ್ತು ರಫ್ ರೋಡ್.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಎಬಿಎಸ್, ಇಬಿಡಿ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಆರು ಏರ್ ಬ್ಯಾಗ್ ಗಳ ಸೇವೆಯಿರುತ್ತದೆ.

ಟಾಟಾ ಹೆಕ್ಸಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಮಹೀಂದ್ರ ಎಕ್ಸ್ ಯುವಿ500, ಟೊಯೊಟಾ ಇನ್ನೋವಾ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಟಾಟಾ ಹೆಕ್ಸಾ 13ರಿಂದ 18 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Most Read Articles

Kannada
English summary
Is It Worth Waiting For Tata Hexa? Well, Here Are The Reasons
Story first published: Friday, September 23, 2016, 9:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X