ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಟಾಟಾ ಟಿಯಾಗೊ ಕಾರಿಗೆ ಬೇಡಿಕೆ ಹೆಚ್ಚಿದ್ದರ ಹಿನ್ನಲೆಯಲ್ಲಿ ಬಹುನಿರೀಕ್ಷಿತ ಟಾಟಾ ಕೈಟ್ 5 ಕಾಂಪಾಕ್ಟ್ ಸೆಡಾನ್ ಕಾರಿನ ಬಿಡುಗಡೆ ವಿಳಂಬವಾಗಲಿದೆ.

By Nagaraja

ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಅತಿ ನೂತನ ಟಾಟಾ ಟಿಯಾಗೊ (ಟಾಟಾ ಝಿಕಾ), ಟಾಟಾ ಕೈಟ್ 5 ಕಾಂಪಾಕ್ಟ್ ಸೆಡಾನ್, ಟಾಟಾ ಹೆಕ್ಸಾ ಮತ್ತು ಟಾಟಾ ನೆಕ್ಸನ್ ಕಾರುಗಳನ್ನು ಅನಾವರಣಗೊಳಿಸಿತ್ತು. ಈ ಪೈಕಿ ಆಟೋ ಎಕ್ಸ್ ಪೋ ಮುಗಿದ ಬೆನ್ನಲ್ಲೇ ಟಾಟಾ ಟಿಯಾಗೊ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಇನ್ನೊಂದೆಡೆ ಟಾಟಾ ಹೆಕ್ಸಾ ಬಿಡುಗಡೆ 2017 ವರ್ಷಾರಂಭದಲ್ಲಿ ನಡೆಯಲಿದೆ [ಟಾಟಾ ಹೆಕ್ಸಾ ಎಕ್ಸಕ್ಲೂಸಿವ್ ವಿಮರ್ಶೆ ಓದಲು ಕ್ಲಿಕ್ಕಿಸಿ]. ಏತನ್ಮಧ್ಯೆ ಟಾಟಾ ಟಿಯಾಗೊ ತಳಹದಿಯಲ್ಲಿ ನಿರ್ಮಾಣವಾಗಲಿರುವ ಟಾಟಾ ಕೈಟ್ 5 ಕಾಂಪಾಕ್ಟ್ ಸೆಡಾನ್ ಕಾರಿನ ಬಿಡುಗಡೆ ನಿಗದಿತ ಸಮಯಗಿಂತಲೂ ವಿಳಂಬವಾಗಲಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿಗೆ ಅತೀವ ಬೇಡಿಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಟಾಟಾ ಕೈಟ್ 5 ಕಾರಿನ ಬಿಡುಗಡೆ ನಿಗದಿತ ಅವಧಿಗಿಂತಲೂ ವಿಳಂಬವಾಗಲಿದೆ ಎಂಬುದನ್ನು ವಾಹನ ಮೂಲಗಳು ತಿಳಿಸಿವೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಪ್ರಸ್ತುತ ಟಿಯಾಗೊ ಕಾಯುವಿಕೆ ಅವಧಿಯನ್ನು ತಗ್ಗಿಸುವಲ್ಲಿ ಟಾಟಾ ಕಾರ್ಯ ಮಗ್ನವಾಗಿದೆ. ಇದುವರೆಗೆ ಟಿಯಾಗೊ ಕಾರಿಗೆ 50,000 ಗಿಂತಲೂ ಹೆಚ್ಚು ಮುಂಗಡ ಬುಕ್ಕಿಂಗ್ ದಾಖಲಾಗಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಟಿಯಾಗೊ ನಿರ್ಮಾಣವಾಗುತ್ತಿರುವ ಗುಜರಾತ್ ನ ಸನಂದ್ ಘಟಕದಲ್ಲೇ ಟಾಟಾ 5 ನಿರ್ಮಾಣವಾಗಲಿದೆ. ಹಾಗಾಗಿ ಪ್ರಸ್ತುತ ತಿಂಗಳೊಂದರಲ್ಲಿ 4,000ದಿಂದ 4,500ರಷ್ಟು ಟಿಯಾಗೊ ನಿರ್ಮಿಸಲಾಗುತ್ತಿದ್ದು, ಈ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸುವ ಇರಾದೆಯಲ್ಲಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಬುಕ್ಕಿಂಗ್ ಸ್ವೀಕರಿಸಿರುವ 50,000 ಯುನಿಟ್ ಗಳ ಪೈಕಿ 25,000 ಟಿಯಾಗೊ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಇದಕ್ಕೂ ಮೊದಲು ಟಾಟಾ ಕೈಟ್ 5 ಬಿಡುಗಡೆ ದೀಪಾವಳಿ ವೇಳೆಯಲ್ಲಿ ನಿಗದಿಪಡಿಸಲಾಗಿತ್ತು.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಟಾಟಾ ಟಿಯಾಗೊದಲ್ಲಿ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.05 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ (69 ಅಶ್ವಶಕ್ತಿ, 140 ಎನ್ ಎಂ ತಿರುಗುಬಲ) ಬಳಕೆಯಾಗಲಿದೆ. ಇದೇ ಎಂಜಿನ್ ಟಾಟಾ ಕೈಟ್ 5 ಕಾರಿನಲ್ಲೂ ಜೋಡಣೆಯಾಗಲಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಇದರ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ 84 ಅಶ್ವಶಕ್ತಿಯಲ್ಲಿ 114 ಎನ್ ಎಂ ತಿರುಗುಬಲವನ್ನು ಮತ್ತು 1.05 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ 140 ಎನ್ ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ನೀಡಲಿದೆ. ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದ್ದು, ಬಳಿಕ ಎಎಂಟಿ ಗೇರ್ ಬಾಕ್ಸ್ ಆಯ್ಕೆಯು ಸೇರಿಕೊಳ್ಳಲಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಬಹುನಿರೀಕ್ಷಿತ ಟಾಟಾ ಕೈಟ್ 2017 ಮಾರ್ಚ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಈ ಸಂಬಂಧ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಕಾಂಪಾಕ್ಟ್ ಸೆಡಾನ್ ಕಾರಾಗಿರುವ ಟಾಟಾ ಕೈಟ್ 5 ಮುಂಭಾಗದಲ್ಲಿ ಟಿಯಾಗೊಗೆ ಸಮಾನವಾದ ವಿನ್ಯಾಸವನ್ನು ಹಂಚಿಕೊಳ್ಳಲಿದೆ. ಇನ್ನು ಕಾರಿನ ಒಳಮೈ ವೈಶಿಷ್ಟ್ಯಗಳನ್ನು ಹಂಚಿಕೊಳ್ಳಲಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಆಗಲೇ ಪೈಪೋಟಿ ಜೋರಾಗಿ ನಡೆಯುತ್ತಿದೆ. ಇಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್ ಜೊತೆಗೆ ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್, ಫೋರ್ಡ್ ಫಿಗೊ ಆಸ್ಪೈರ್, ಫೋಕ್ಸ್ ವ್ಯಾಗನ್ ಎಮಿಯೊ ಜೊತೆಗೆ ಇನ್ನಷ್ಟೇ ಬಿಡುಗಡೆಯಾಗಲಿರುವ ಷೆವರ್ಲೆ ಎನ್ಷೆನ್ಷಿಯಾ ಕೂಡಾ ಇರಲಿದೆ.

ಟಿಯಾಗೊ ಯಶಸ್ಸು; ದೀಪಾವಳಿಗೆ ಟಾಟಾ ಕೈಟ್ 5 ಪಟಾಕಿ ಸಿಡಿಸುವುದು ಡೌಟ್!

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗುತ್ತಿರುವ ಟಾಟಾ ಕೈಟ್ 5 ತೆರಿಗೆ ವಿನಾಯಿತಿ ಪಡೆಯುವುದರೊಂದಿಗೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಯನ್ನು ತಲುಪಲಿದೆ.

Most Read Articles

Kannada
English summary
Tata Kite 5 Launch Delayed — Its The Tiago Effect!
Story first published: Monday, October 24, 2016, 9:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X