ಟಾಟಾ ಟಿಯಾಗೊದಿಂದ ವಿಯಾಗೊದತ್ತ ಅಥವಾ ಅಲ್ಟಿಗೊವೇ?
ಟಾಟಾದ ನೂತನ ಕಾಂಪಾಕ್ಟ್ ಸೆಡಾನ್ ಕಾರಿನ ಹೆಸರು ಏನಾಗಿರಲಿದೆ ಎಂಬುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಟಿಯಾಗೊ ತಳಹದಿಯಲ್ಲೇ ಟಾಟಾ ಸಂಸ್ಥೆಯು ಮಗದೊಂದು ಕಾಂಪಾಕ್ಟ್ ಸೆಡಾನ್ ಕಾರು ಬಿಡುಗಡೆ ಮಾಡುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಟಾಟಾ ಕೈಟ್ 5 ಎಂಬ ಕೋಡ್ ಪಡೆದಿರುವ ನೂತನ ಕಾರಿನ ನಾಮಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ ಕ್ಲೂಸಿವ್ ಮಾಹಿತಿಗಳು ಹೊರಬಂದಿವೆ.

ವಾಹನೋದ್ಯಮದಿಂದ ಬಂದಿರುವ ತಾಜಾ ಮಾಹಿತಿಗಳ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ನೂತನ ಕಾಂಪಾಕ್ಟ್ ಕಾರು ವಿಯಾಗೊ ಅಥವಾ ಅಲ್ಟಿಗೊ ಎಂದು ಹೆಸರಿಸಿಕೊಳ್ಳಲಿದೆ.

ಮುಖ್ಯವಾಗಿಯೂ ಟಿಯಾಗೊದಲ್ಲಿ ದೊರಕಿರುವ ಯಶಸ್ಸೇ ನೂತನ ಕಾರಿನ ಹೆಸರನ್ನಿಡಲು ಟಾಟಾಗೆ ಸ್ಪೂರ್ತಿಯಾಗಿದೆ. ತನ್ಮೂಲಕ ಟಾಟಾ ಶ್ರೇಣಿಯ ಕಾರಿನ ಹೆಸರಿನ ಅಂತಿಮದಲ್ಲಿ 'ಗೊ' ಎಂಬ ಉಚ್ಚಾರಣೆಯನ್ನು ಟಾಟಾ ಮುಂದುವರಿಸಲಿದೆ.

ಟಾಟಾ ಕೈಟ್ 5 ಕಾರಿನ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲದಿದ್ದರೂ 2017ನೇ ಸಾಲಿನಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟದಲ್ಲಿರುವ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಟಾಟಾದ ಜೆಸ್ಟ್ ಈಗಾಗಲೇ ಮಾರಾಟದಲ್ಲಿದ್ದರೂ ಸದ್ದು ಮಾಡುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ನೂತನ ಕಾರಿನ ಪರಿಚಯವಾಗಲಿದೆ. ಈ ನಡುವೆ ಟೈಗೊರ್ ಎಂಬ ಹೆಸರು ಕೂಡಾ ಟಾಟಾ ಪರಿಗಣನೆಯಲ್ಲಿದೆ.

ಟಿಯಾಗೊ ನಿರ್ಮಾಣವಾಗುತ್ತಿರುವ ಸಂಸ್ಥೆಯ ಸನಂದ್ ಘಟಕದಲ್ಲಿಯೇ ನೂತನ ಕಾಂಪಾಕ್ಟ್ ಸೆಡಾನ್ ಕಾರು ಹೊರಬರಲಿದೆ. ಮುಂಬರುವ ಟಾಟಾ ಪೆಲಿಕ್ಯಾನ್ ಸಹ ಇದೇ ಘಟಕದಲ್ಲೇ ನಿರ್ಮಾಣವಾಗುವ ಸಾಧ್ಯತೆಯಿದೆ.

ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಆಗಲೇ ಪೈಪೋಟಿ ಜೋರಾಗಿ ನಡೆಯುತ್ತಿದೆ. ಇಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್ ಜೊತೆಗೆ ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್, ಫೋರ್ಡ್ ಫಿಗೊ ಆಸ್ಪೈರ್, ಫೋಕ್ಸ್ ವ್ಯಾಗನ್ ಎಮಿಯೊ ಜೊತೆಗೆ ಇನ್ನಷ್ಟೇ ಬಿಡುಗಡೆಯಾಗಲಿರುವ ಷೆವರ್ಲೆ ಎನ್ಷೆನ್ಷಿಯಾ ಕೂಡಾ ಇರಲಿದೆ.

ಇತ್ತೀಚೆಗಷ್ಟೇ ಟಾಟಾ ಸಂಸ್ಥೆಯು ಹೆಕ್ಸಾ ಎಂಬ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು. ಇದು ಪ್ರಮುಖವಾಗಿಯೂ ಮಹೀಂದ್ರ ಎಕ್ಸ್ ಯುವಿ 500 ಹಾಗೂ ಟೊಯೊಟಾ ಫಾರ್ಚ್ಯುನರ್ ಎಂಪಿವಿ ಸವಾಲನ್ನು ಎದುರಿಸಲಿದೆ.


Click it and Unblock the Notifications