ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ನೂತನ ಟಾಟಾ ಕ್ಸೆನನ್ ಪ್ರಮುಖವಾಗಿಯೂ ಭಾರತದಲ್ಲಿ ಜೀವನ ಶೈಲಿ ವಾಹನಗಳ ಕೊರತೆಯನ್ನು ನೀಗಿಸಲಿದೆ.

By Nagaraja

ಮಾರುಕಟ್ಟೆಯಲ್ಲಿ ವರ್ಧಿಸತ್ತಿರುವ ಪ್ರತಿಸ್ಪರ್ಧೆಯನ್ನು ಮನಗಂಡಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ, ತನ್ನ ಜನಪ್ರಿಯ ಕ್ಸೆನನ್ ಪಿಕಪ್ ಟ್ರಕ್ ಗೆ ಹೊಸ ರೂಪ ನೀಡಲು ನಿರ್ಧರಿಸಿದೆ. ಬಲ್ಲ ಮೂಲಗಳ ಪ್ರಕಾರ ಟಾಟಾ ಕ್ಸೆನನ್ ಫೇಸ್ ಲಿಫ್ಟ್ ಮಾದರಿಯು 2017ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ಜಪಾನ್ ಮೂಲದ ಗುಣಮಟ್ಟದ ಇಸುಝು ಡಿ-ಮ್ಯಾಕ್ಸ್ ವಿಕ್ರಾಸ್ ಎಂಟ್ರಿಯೊಂದಿಗೆ ಟಾಟಾಗೆ ಕಠಿಣ ಸ್ಪರ್ಧೆಯು ಎದುರಾಗಿದೆ. ಇದರಿಂದಾಗಿ ಸದ್ಯ ಮಾರಾಟದಲ್ಲಿರುವ ಕ್ಸೆನನ್ ನಲ್ಲಿ ಹೆಚ್ಚಿನ ಬದಲಾವಣೆ ತರುವುದು ಅನಿವಾರ್ಯವೆನಿಸಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ಬಲ್ಲ ಮೂಲಗಳ ಪ್ರಕಾರ ಟಾಟಾ ಕ್ಸೆನನ್ ಟೆಸ್ಟಿಂಗ್ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಹೊರಮೈ ಸೇರಿದಂತೆ ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ಎಂಜಿನ್ ಮಾನದಂಡಗಳಲ್ಲೂ ಬದಲಾವಣೆಯು ಸಾಧ್ಯತೆಯಿದೆ. ಸದ್ಯ ಮಾರಾಟದಲ್ಲಿರುವ ಕ್ಸೆನನ್ 2.2 ಲೀಟರ್ ಡೀಸೆಲ್ ಎಂಜಿನ್ ಪೆಡದಿದ್ದು, ಇದನ್ನು ವಿಶೇಷವಾಗಿ ಟ್ಯೂನ್ ಮಾಡುವ ಸಂಭವವಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ನೂತನ ಟಾಟಾ ಕ್ಸೆನನ್ ಪಿಕಪ್ ಟ್ರಾಕ್ 400 ಎನ್ ಎಂ ತಿರುಗುಬಲದಲ್ಲಿ 154 ಅಶ್ವಶಕ್ತಿ ಉತ್ಪಾದಿಸುವ ಸಾಧ್ಯತೆಯಿದ್ದು, ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಇದು ಇನ್ನಷ್ಟೇ ಬಿಡುಗಡೆಯಾಗಲಿರುವ ಟಾಟಾ ಹೆಕ್ಸಾ ಕಾರಿಗೆ ಸಮಾನವಾಗಿರಲಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ಆರಂಭದಲ್ಲಿ ಏಕಮಾತ್ರ ಕ್ಯಾಬಿನ್ ಆಯ್ಕೆಯ ಕ್ಸೆನನ್ ಮಾದರಿಯನ್ನು ಟಾಟಾ ಬಿಡುಗಡೆ ಮಾಡಲಿದೆ. ಇದು ಸರಿ ಸುಮಾರು ಎಂಟು ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ಸದ್ಯ ಮಾರಾಟದಲ್ಲಿರುವ ಟಾಟಾ ಕ್ಸೆನನ್ ಟು ವೀಲ್ ಡ್ರೈವ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 9.92 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ. ಹಾಗೆಯೇ ಟಾಟಾ ಕ್ಸೆನನ್ ಫೋರ್ ವೀಲ್ ಡ್ರೈವ್ ವೆರಿಯಂಟ್ 11 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ನವೀಕೃತ ಫ್ರಂಟ್ ಗ್ರಿಲ್, ಪರಿಷ್ಕೃತ ಫ್ರಂಟ್ ಬಂಪರ್ ಸೇರಿದಂತೆ ಕಾರಿನೊಳಗೆ ಪ್ರಯಾಣಿಕ ವಾಹನಗಳಿಗೆ ತಕ್ಕುದಾಗಿ ಮನರಂಜನಾ ವೈಶಿಷ್ಟ್ಗಗಳನ್ನು ಖಾತ್ರಿಪಡಿಸಲಾಗುವುದು.

ಟಾಟಾ ಕ್ಸೆನನ್ ರೂಪ ಬದಲಾವಣೆ; 2017ರಲ್ಲಿ ಬಿಡುಗಡೆ ಭಾಗ್ಯ!

ಅಂದ ಹಾಗೆ ನೂತನ ಕ್ಸೆನನ್ ಮಾರುಕಟ್ಟೆಯಲ್ಲಿ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್ ಮತ್ತು ಮಹೀಂದ್ರ ಸ್ಕಾರ್ಪಿಯೊ ಗೇಟ್ ವೇ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Article Published On: Thursday, November 17, 2016, 15:48 [IST]
English summary
Tata Xenon Facelift To Be Launched In 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+