ಹೋಟೆಲ್ ವೆಚ್ಚ ಹೊರೆಯಾಗುತ್ತಿದೆಯೇ ? ಕಾರಲ್ಲೇ ನಿದ್ರಿಸಿ!
ದೂರ ಪ್ರಮಾಣಕ್ಕೆ ತೆರಳಿದಾಗ ರಾತ್ರಿ ವೇಳೆಯಲ್ಲಿ ತಂಗಲು ಹೋಟೆಲ್ ಖರ್ಚು ದೊಡ್ಡ ಹೊರೆಯಾಗುತ್ತಿದೆಯೇ ? ನೀವು ಕಾರಲ್ಲೇ ನಿದ್ರಿಸಲು ಬಯಸುವೀರಾ ? ಟೆಸ್ಲಾ ನಿಮ್ಮ ಬಯಕೆಗಳನ್ನು ಈಡೇರಿಸಲಿದೆ.
ಅಮೆರಿಕದ ಪ್ರಖ್ಯಾತ ವಿದ್ಯುತ್ ಚಾಲಿತ ಸಂಸ್ಥೆಯಾಗಿರುವ ಟೆಸ್ಲಾ, ಮಾಡೆಲ್ 3 ಮಾದರಿಯೊಂದಿಗೆ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರದೊಂದಿಗೆ ಮುಂದೆ ಬಂದಿದೆ.

ಟೆಸ್ಲಾ ಆಂತರಿಕ ಸ್ಥಳಾವಕಾಶದ ಬಗ್ಗೆ ವಿಶ್ಲೇಷಣೆ ಮಾಡಿರುವ ತಜ್ಞರು, ಅತೀವ ಸಂತಸ ವ್ಯಕ್ತಪಡಿಸಿದ್ದು, ಹಿಂಬದಿಯ ಸೀಟನ್ನು ಸಮತಲವಾಗಿ ಮಡಚುವ ಮೂಲಕ ಮಲಗುವಷ್ಟು ಜಾಗ ರೂಪಿಸಿಕೊಳ್ಳಬಹುದಾಗಿದೆ.

ಟೆಸ್ಲಾ ಮಾಡೆಲ್ 3 ಕಾರಿನಲ್ಲಿ ಐದೂವರೆ ಅಡಿ ಎತ್ತರದ ವ್ಯಕ್ತಿಗಳಿಗೆ ಆರಾಮವಾಗಿ ನಿದ್ರಿಸಬಹುದಾಗಿದೆ ಎಂದು ಆಟೋ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಟೆಸ್ಲಾ ಇಂತಹ ವೈಶಿಷ್ಟ್ಯವನ್ನು 'ಕ್ಯಾಂಪರ್ ಮೋಡ್' ಎಂದು ವಿಶ್ಲೇಷಿಸಬಹುದಾಗಿದ್ದು, ಹೆಚ್ಚು ಆರಾಮದಾಯಕವೆನಿಸಿಕೊಂಡಿದೆ.

ಸಹಜವಾಗಿಯೇ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಟೆಸ್ಲಾ ಕಾರುಗಳು ಬಹಳ ಶಾಂತವಾಗಿರುತ್ತದೆ. ಹಾಗಾಗಿ ಶಬ್ದ ಮಾಲಿನ್ಯದ ತೊಂದರೆಯೇ ಇರುವುದಿಲ್ಲ.

ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ವಿಶಿಷ್ಟತೆಯ ಮೂಲಕ ಆನ್ ಮಾಡಿಟ್ಟುಕೊಂಡು ಸುಖ ನಿದ್ರೆಗೆ ಜಾರಬಹುದಾಗಿದೆ.

ಟೆಸ್ಲಾ ಮಾಡೆಲ್ ಎಸ್ ಪ್ಯಾನರಾಮಿಕ್ ಸನ್ ರೂಫ್ ವ್ಯವಸ್ಥೆಯನ್ನು ಹೊಂದಿದ್ದು, ರಾತ್ರಿ ವೇಳೆಯಲ್ಲಿ ಆಕಾಶದ ಸೌಂದರ್ಯವನ್ನು ಸವಿಯಬಹುದಾಗಿದೆ.

ಒಟ್ಟಿನಲ್ಲಿ ತಡ ರಾತ್ರಿಯಲ್ಲಿ ವಿಶ್ರಾಂತಿ ಬಯಸುವುದಾದ್ದಲ್ಲಿ ಟೆಸ್ಲಾ ಮಾಡೆಲ್ 3 ಪರಿಪೂರ್ಣ ಆಯ್ಕೆಯಾಗಿರಲಿದೆ.

ಅಷ್ಟಕ್ಕೂ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳು ಭಾರತಕ್ಕೆ ಯಾವಾಗ ಪ್ರವೇಶಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಇದಕ್ಕೂ ಮೊದಲು ಎಲೆಕ್ಟ್ರಿಕ್ ಮೂಲಸೌಕರ್ಯಗಳ ಅಭಿವೃದ್ಧಿಯಾಗಬೇಕಿರುವುದು ಅತ್ಯಗತ್ಯವಾಗಿದೆ.


Click it and Unblock the Notifications