ಸಣ್ಣ ಹಾಗೂ ಕಾಂಪಾಕ್ಟ್ ಕಾರುಗಳ ಕಾಲ ಮುಗ್ದೋಯ್ತು!
ಭಾರತ ಮಾರುಕಟ್ಟೆಯಲ್ಲಿ ಎಸ್ ಯುವಿ ಹಾಗೂ ಎಂಪಿವಿ ಸೇರಿದ ಉಪಯುಕ್ತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಭಾರತೀಯ ವಾಹನ ಮಾರುಕಟ್ಟೆ ನಿಧಾನವಾಗಿ ಬದಲಾಗುತ್ತಿದೆ. ಒಂದು ದಶಕದಷ್ಟು ಹಿಂದೆ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿತ್ತು. ಅಲ್ಲಿಂದ ಬಳಿಕ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಬೇಡಿಕೆ ಹೆಚ್ಚಾಗ ತೊಡಗಿತ್ತು. ಈಗ ಪರಿಸ್ಥಿತಿ ಮತ್ತಷ್ಟು ಬದಲಾಗಿದ್ದು, ಭಾರತೀಯ ವಾಹನ ಮಾರುಕಟ್ಟೆ ಉಪಯುಕ್ತ ವಾಹನಗಳತ್ತ ಹೆಚ್ಚು ವಾಲುತ್ತಿದೆ.

ಭಾರತೀಯ ವಾಹನ ಮಾರುಕಟ್ಟೆಯ ಪ್ರಗತಿಯ ಸಂಕೇತವಾಗಿ ಉಪಯುಕ್ತ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬಲ್ಲ ಮೂಲಗಳ ಪ್ರಕಾರ ದೇಶದಲ್ಲಿ ಮಾರಾಟವಾಗುತ್ತಿರುವ ಪ್ರತಿ ನಾಲ್ಕು ಪ್ರಯಾಣಿಕ ಕಾರುಗಳಲ್ಲಿ ಒಂದು ಉಪಯುಕ್ತ ವಾಹನವು ಸೇರಿಕೊಂಡಿದೆ.

ಬದಲಾವಣೆಗೆ ತಕ್ಕಂತೆ ದೇಶದ ಮುಂಚೂಣಿಯ ಸಂಸ್ಥೆಗಳು ಉಪಯುಕ್ತ ವಾಹನಗಳ ಬಿಡುಗಡೆಯಲ್ಲಿ ಕಾರ್ಯ ಮಗ್ನವಾಗಿದೆ. ಈ ಪೈಕಿ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಮಾರುತಿ ಸುಜುಕಿ ಅತಿ ಹೆಚ್ಚು ಮಾರಾಟವನ್ನು ಕಾಪಾಡಿಕೊಂಡಿದೆ.

ಮಾರುಕಟ್ಟೆ ಬದಲಾವಣೆಯನ್ನು ಸರಿಯಾಗಿ ಮನವರಿಕೆ ಮಾಡಿಕೊಂಡಿದ್ದ ಮಾರುತಿ, ತಕ್ಕ ಸಮಯದಲ್ಲಿ ಸಣ್ಣ ಕಾರುಗಳಿಂದ ಉಪಯುಕ್ತ ವಾಹನಗಳನ್ನು ಬಿಡುಗಡೆ ಮಾಡುವುದರಲ್ಲಿ ಗಮನ ಕೇಂದ್ರಿಕರಿಸಿತ್ತು. ಇದು ಮಾರಾಟದಲ್ಲೂ ಪ್ರತಿಫಲಿಸಿದೆ.

ಉಪಯುಕ್ತ ವಾಹನ ವಿಭಾಗದಲ್ಲಿ ದೇಶಕ್ಕೆ ನಂ.1 ಆಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಶ್ರೇಣಿಯ ಕಾರುಗಳಿಗೆ ಮಾರುತಿ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಅತ್ತ ಹ್ಯುಂಡೈ ಮತ್ತು ಟೊಯೊಟಾ ಸಂಸ್ಥೆಗಳಲ್ಲೂ ಬದಲಾವಣೆಯ ಗಾಳಿ ಬೀಸಿದೆ.

ಎಪ್ರಿಲ್ ನಿಂದ ಅಕ್ಟೋಬರ್ ತಿಂಗಳ ವರೆಗಿನ ಉಪಯುಕ್ತ ವಾಹನಗಳ ಮಾರಾಟದಲ್ಲಿ ಶೇಕಡಾ 37ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ 4,44,048 ಯುನಿಟ್ ಗಳಷ್ಟು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3,24,460 ಯುನಿಟ್ ಗಳಷ್ಟೇ ಸೇಲ್ ಆಗಿದ್ದವು.

ಕಳೆದ ವರ್ಷ ಪ್ರತಿ ಐದು ಪ್ರಯಾಣಿಕ ಕಾರಿನಲ್ಲಿ ಒಂದು ಉಪಯುಕ್ತ ವಾಹನ ಮಾರಾಟವಾಗುತ್ತಿದ್ದವು. ಈ ಪ್ರಮಾಣವೀಗ ಪ್ರತಿ ನಾಲ್ಕು ಪ್ರಯಾಣಿಕ ಕಾರುಗಳಲ್ಲಿ ಒಂದು ಉಪಯುಕ್ತ ವಾಹನ ಕಾಣಿಸಿಕೊಂಡಿದೆ.

ಅತ್ಯುತ್ತಮ ಚಲನಶೀಲತೆ, ಉನ್ನತ್ತ ಮಟ್ಟದ ನಿರ್ವಹಣೆ ಹಾಗೂ ಸುರಕ್ಷತೆಯು ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ಮಾರಾಟ ಏರುಗತಿಗೆ ಕಾರಣವಾಗಿದೆ. ಪ್ರಸ್ತುತ ಬೇಡಿಕೆಯು ಇದೇ ರೀತಿ ಮುಂದುವರಿಯಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಉಪಯುಕ್ತ ವಾಹನ ವಿಭಾಗದಲ್ಲಿ ಶೇಕಡಾ 14ರಷ್ಟಿದ್ದ ಮಾರುತಿ ಮಾರಾಟವು ಶೇಕಡಾ 25ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಮಹೀಂದ್ರ ಮಾರಾಟವು ಶೇಕಡಾ 36ರಿಂದ ಶೇಕಡಾ 30ಕ್ಕೆ ಇಳಿಕೆಯಾಗಿದೆ. ಮಹೀಂದ್ರದ ನೂತನ ಟಿಯುವಿ300 ಮತ್ತು ಕೆಯುವಿ100 ಅಷ್ಟೇನು ಸದ್ದು ಮಾಡಿಲ್ಲ.

ಅತ್ತ ಉಪಯುಕ್ತ ವಾಹನ ವಿಭಾಗದಲ್ಲಿ ಹ್ಯುಂಡೈ ಮಾರುಕಟ್ಟೆ ಶೇರುಗಳು ಸಹ ಶೇಕಡಾ 10ರಿಂದ ಶೇಕಡಾ 13ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಕ್ರೈಸ್ಟಾ ಹಾಗೂ ಫಾರ್ಚ್ಯುನರ್ ಬೆಂಬಲದೊಂದಿಗೆ ಟೊಯೊಟಾ ಸಹ ಏರುಗತಿಯತ್ತ ದಾಪುಗಾಲನ್ನಿಟ್ಟಿದೆ.


Click it and Unblock the Notifications