2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

By Nagaraja

ಬಿಡುಗಡೆಯಾದ ಏಳು ತಿಂಗಳುಗಳ ಅವಧಿಯಲ್ಲೇ 50,000 ಸಂಖ್ಯೆಗಳ ಮಾರಾಟವನ್ನು ದಾಟಿರುವ ವಿಟಾರಾ ಬ್ರಿಝಾ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲು ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಿದ್ಧತೆ ನಡೆಸುತ್ತಿದೆ. ಬಲ್ಲ ಮೂಲಗಳ ಪ್ರಕಾರ, ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪೆಟ್ರೋಲ್ ಕ್ರೀಡಾ ಬಳಕೆಯ ವಾಹನವು 2017 ಮೇ ತಿಂಗಳಲ್ಲಿ ಬಿಡುಗಡೆ ಮಾಡಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಡೀಸೆಲ್ ಆವೃತ್ತಿ ಬಿಡುಗಡೆಯಾದ ಒಂದು ವರ್ಷದ ಬಳಿಕವಷ್ಟೇ ಪೆಟ್ರೋಲ್ ಆವೃತ್ತಿಯು ಬಿಡುಗಡೆಯಾಗಲಿದೆ. ಅಲ್ಲದೆ ಈಗ ಡೀಸೆಲ್ ಕಾರುಗಳಿಗೆ ಬಂದಿರುವ ಬೇಡಿಕೆಯನ್ನು ಈಡೇರಿಸಲು ಸಹಕಾರಿಯಾಗಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ ಮಾರುತಿ ವಿಟಾರಾ ಬ್ರಿಝಾ ಪೆಟ್ರೋಲ್ ಆವೃತ್ತಿಯು 1.5 ಲೀಟರ್ ಫೋರ್ ಸಿಲಿಂಡರ್ ಎಂಜಿನ್ ಪಡೆಯಲಿದೆ. ಇದು ಮುಂದಿನ ವರ್ಷದಲ್ಲಿ ಎಸ್-ಕ್ರಾಸ್ ಹಾಗೂ ಸಿಯಾಝ್ ಕಾರಿನಲ್ಲೂ ಜೋಡಣೆಯಾಗುವ ಸಾಧ್ಯತೆಯಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಆದರೆ 1.5 ಲೀಟರ್ ಎಂಜಿನ್ ಲಗತ್ತಿಸಿದ್ದಲ್ಲಿ 1.2 ಲೀಟರ್ ಗಿಂತಲೂ ಸಣ್ಣ ಕಾಂಪಾಕ್ಟ್ ಎಸ್ ಯುವಿ ಗಳಿಗೆ ಲಭ್ಯವಾಗಲಿರುವ ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳುವಲ್ಲಿ ಮಾರುತಿ ವಿಟಾರಾ ಬ್ರಿಝಾ ವಿಫಲವಾಗಲಿದೆ. ಪರಿಣಾಮ ಪೆಟ್ರೋಲ್ ಆವೃತ್ತಿಯು ದುಬಾರಿಯೆನಿಸಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಮತ್ತೊಂದು ಕಡೆ ಸ್ಥಳೀಯವಾಗಿ ನಿರ್ಮಿಸಲಿರುವ ಹೊಸತಾದ 1.0 ಲೀಟರ್ ಬೂಸ್ಟರ್ ಜೆಟ್ ತ್ರಿ ಸಿಲಿಂಡರ್ ಎಂಜಿನ್ ಜೋಡಣೆ ಮಾಡುವ ಬಗ್ಗೆ ಸಂಸ್ಥೆಯ ಇರಾದೆಯಲ್ಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಪ್ರಸ್ತುತ ಎಂಜಿನ್ ಮಾರುತಿಯ ಶಕ್ತಿಶಾಲಿ ಹ್ಯಾಚ್ ಬ್ಯಾಕ್ ಕಾರು ಬಲೆನೊ ಆರ್ ಎಸ್ ಮಾದರಿಯಲ್ಲೂ ಬಳಕೆಯಾಗಲಿದೆ. ಇದು ಫೋರ್ಡ್ ಇಕೊಸ್ಪೋರ್ಟ್ ನ 1.0 ಇಕೊಬೂಸ್ಟ್ ಆವೃತ್ತಿಗೆ ಪ್ರತಿಸ್ಪರ್ಧೆಯಾಗಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ನಿಕಟವರ್ತಿಗಳ ಪ್ರಕಾರ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಲ್ಲಿ 1.2 ಲೀಟರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಬಳಕೆ ಮಾಡುವುದನ್ನು ಮಾರುತಿ ನಿರಾಕರಿಸಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಏತನ್ಮಧ್ಯೆ ಯಾವುದೇ ಎಂಜಿನ್ ಬಳಕೆಯಾದರೂ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಇನ್ನೊಂದೆಡೆ ಬ್ರಿಝಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇಂಡೋನೇಷ್ಯಾ ಆಟೋ ಶೋವನ್ನು ತಲುಪಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳ ನಡುವಣ ಅಂತರವು ಕಡಿಮೆಯಾಗುತ್ತಿರುವುದರಿಂದ ಪೆಟ್ರೋಲ್ ಎಂಜಿನ್ ಯೋಜನೆಯು ಮಾರುತಿಗೆ ಉತ್ತಮ ಮಾರಾಟವನ್ನು ನೀಡಲಿದೆ. ಇದು ವಿದೇಶ ಮಾರುಕಟ್ಟೆಯನ್ನು ಗುರಿ ಮಾಡಲು ಸಹ ಮಾರುತಿಗೆ ನೆರವಾಗಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಸದ್ಯ ಮಾರಾಟದಲ್ಲಿರುವ 1.3 ಲೀಟರ್ ಡಿಡಿಐಎಸ್ ಎಂಜಿನ್, 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ. ಇನ್ನು ನಿಕಟ ಭವಿಷ್ಯದಲ್ಲೇ ಎಎಂಟಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

2017ರಲ್ಲಿ ವಿಟಾರಾ ಬ್ರಿಝಾ ಪೆಟ್ರೋಲ್ ಕಾರು ಬಿಡುಗಡೆ

ಭಾರತ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಜೊತೆಗೆ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಆವೃತ್ತಿಗಳಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪೈಪೋಟಿಯನ್ನು ಒಡ್ಡುತ್ತಿದೆ.

ಇವನ್ನೂ ಓದಿ:

ಇವನ್ನೂ ಓದಿ:

01. ಮಾರುತಿ ಗೇರ್ ಚೇಂಜ್; ರೆನೊ ಕ್ವಿಡ್ ಪ್ರತಿದಾಳಿಗೆ ಸಿದ್ಧ

02. ಬಿಡುಗಡೆಯಾದ 7 ತಿಂಗಳಲ್ಲೇ ವಿಟಾರಾ ಬ್ರಿಝಾ 50,000 ಮಾರಾಟ

03. ಕೊನೆಗೂ ಶರಣಾದ ಮಾರುತಿ ರಿಟ್ಜ್; ಇಗ್ನಿಸ್ ಹಾದಿ ಸುಗಮ

Most Read Articles

Kannada
English summary
Maruti Suzuki Vitara Brezza — Petrol Variant To Be Launched By May 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X