ಅತ್ಯಾಧುನಿಕ 2017 ಫೋಕ್ಸ್ ವ್ಯಾಗನ್ ಪಸ್ಸಾಟ್ ಭಾರತಕ್ಕೆ
ಗುಣಮಟ್ಟ ಹಾಗೂ ಅತ್ಯಂತ ಸುರಕ್ಷಿತ ಕಾರುಗಳ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ ಜರ್ಮನಿಯ ಮೂಲದ ಫೋಕ್ಸ್ ವ್ಯಾಗನ್, ಅತಿ ನೂತನ 2017 ಪಸ್ಸಾಟ್ ಕಾರನ್ನು ಭಾರತದಲ್ಲಿ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆ ಮಾಡಲಿದೆ.

ಭಾರತೀಯ ರಸ್ತೆಗಳಲ್ಲಿ ಫೋಕ್ಸ್ ವ್ಯಾಗನ್ ಪಸ್ಸಾನ್ ಟೆಸ್ಟಿಂಗ್ ಭರದಿಂದ ಸಾಗುತ್ತಿದೆ. ಎಲ್ಲ ಹಂತದಲ್ಲೂ 2017 ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.

2016 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಫೋಕ್ಸ್ ವ್ಯಾಗನ್ ಪಸ್ಸಾಟ್ ದೇಶದಲ್ಲಿ ಮೊದಲ ಸಾರ್ವಜನಿಕ ದರ್ಶನವನ್ನು ನೀಡಿತ್ತು.

ಆರಂಭದಲ್ಲಿ ಫೋಕ್ಸ್ ವ್ಯಾಗನ್ ಪಸ್ಸಾನ್ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಲಿದೆ. ತದಾ ಬಳಿಕ ಹೆಚ್ಚು ಐಷಾರಾಮಿ ಡೀಸೆಲ್ ಆವೃತ್ತಿಯು ದೇಶವನ್ನು ಕಾಲಿಡಲಿದೆ.

ಫೋಕ್ಸ್ ವ್ಯಾಗನ್ ಪಸ್ಸಾಟ್ ನಲ್ಲಿರುವ 1.8 ಲೀಟರ್ ಟಿಎಸ್ ಐ ಪೆಟ್ರೋಲ್ ಎಂಜಿನ್ 180 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಏಳು ಸ್ಪೀಡ್ ಡ್ಯುಯಲ್ ಕ್ಲಚ್ ಆಟೋ ಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಈಗ ಮಾರಾಟದಲ್ಲಿರುವ ಸ್ಕೋಡಾ ಸೂಪರ್ಬ್ ಮತ್ತು ಒಕ್ಟಾವಿಯಾ ಕಾರುಗಳಲ್ಲಿ ಇದೇ ಎಂಜಿನ್ ಜೋಡಣೆಯಾಗಿರುವುದು ಮಹತ್ವದೆನಿಸಿಕೊಳ್ಳುತ್ತದೆ.

ಹಿಂದಿನ ಜನಾಂಗದ ಕಾರುಗಳಿಗೆ ಹೋಲಿಸಿದಾಗ ಎಂಟನೇ ತಲೆಮಾರಿನ ಫೋಕ್ಸ್ ವ್ಯಾಗನ್ ಪಸ್ಸಾಟ್ ಆಕಾರದಲ್ಲಿ ಸ್ವಲ್ಪ ಕಿರಿದಾಗಿರಲಿದೆ. ನೂತನ ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಿರುವುದರಿಂದ ಕಾರಿನೊಳಗಡೆ ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ.

ಪೆಟ್ರೋಲ್ ಆವೃತ್ತಿಯ ಬಳಿಕ ಎಂಟ್ರಿ ಕೊಡಲಿರುವ ಪಸ್ಸಾಟ್ ಡೀಸೆಲ್ ಮಾದರಿಯು 2 ಲೀಟರ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಇದೇ ಸಂದರ್ಭದಲ್ಲಿ ನಿಕಟ ಭವಿಷ್ಯದಲ್ಲೇ ಪೆಟ್ರೋಲ್ ಎಲೆಕ್ಟ್ರಿಕ್ ಹೈಬ್ರಿಡ್ ಪಸ್ಸಾಟ್ ಜಿಟಿಇ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಫೋಕ್ಸ್ ವ್ಯಾಗನ್ ಹೊಂದಿದೆ. ಆದರೆ ಇದು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟವಾಗುವ ಸಾಧ್ಯತೆಯಿದೆ.

ದೇಶದಲ್ಲಿ ಸ್ಕೋಡಾ ಸೂಪರ್ಬ್ ಮತ್ತು ಟೊಯೊಟಾ ಕ್ಯಾಮ್ರಿ ಪ್ರೀಮಿಯಂ ಸೆಡಾನ್ ಕಾರುಗಳಿಗೆ ಅತಿ ನೂತನ 2017 ಫೋಕ್ಸ್ ವ್ಯಾಗನ್ ಪಸ್ಸಾಟ್ ಪ್ರತಿಸ್ಪರ್ಧಿಯಾಗಲಿದೆ. ಇನ್ನೊಂದೆಡೆ ಹೈಬ್ರಿಡ್ ವೆರಿಯಂಟ್ ಹೋಂಡಾ ಅಕಾರ್ಡ್ ಹೈಬ್ರಿಡ್ ಮಾದರಿಗೆ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications