ಜಿನೆವಾ ಮೋಟಾರ್ ಶೋಗೂ ಮುಂಚಿತವಾಗಿ ಬಿಡುಗಡೆಯಾಗಿದೆ 'ಐ30 ವಾಗನ್' ಕಾರಿನ ಮಾಹಿತಿ

Written By:

ಹ್ಯುಂಡೈ ಕಂಪನಿಯ ಕಾರು ಎಂದರೆ ಭಾರತದ ಮಂದಿಗೆ ಏನೋ ನಂಬಿಕೆ, ಅದರಂತೆಯೇ ಜನರ ನಂಬಿಕೆಯನ್ನು ಎಂದೂ ಕೂಡ ಈ ಕಾರು ತಯಾರಕ ಕಂಪನಿ ಸುಳ್ಳಾಗಿಸಿಲ್ಲ.

ಮುಂದಿನ ತಿಂಗಳು ಅಂದರೆ ಮಾರ್ಚ್ ನಲ್ಲಿ ಭಾರತದ ಮೋಟೋ ದೈತ್ಯ ಹ್ಯುಂಡೈ ತನ್ನ ಬಹುನೀರೀಕ್ಷಿತ ಕಾರು ಐ30 ವ್ಯಾಗನ್ ಕಾರನ್ನು ಪ್ರಸಿದ್ಧ ಆಟೋ ಶೋ ಜಿನೆವಾದಲ್ಲಿ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಂಡಿದೆ, ಆದರೆ ಅದಕ್ಕೂ ಮೊದಲೇ ಕಾರಿನ ಪ್ರತಿಯೊಂದು ಮಾಹಿತಿ ಬಿಡುಗಡೆಯಾಗಿದೆ.

ಇದೆ ವರ್ಷ ಬಿಡುಗಡೆಗೊಳ್ಳಲಿರುವ ಈ ಕಾರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಕಂಪನಿಯ ನಂಬಿಕೆಯಾಗಿದೆ.

ಎಸ್ಟೇಟ್ ಫೈವ್ ಡೋರ್ ಆವೃತಿಯಾಗಿ ಹ್ಯುಂಡೈ ಕಂಪನಿಯ ಐ30 ಕಾರು ಬಿಡುಗಡೆಗೊಳ್ಳುತ್ತಿದೆ, ಹೆಚ್ಚಿನ ಸುರಕ್ಷತಾ ನಿಯಮಗಳನ್ನು ಒಳಗೊಂಡಿದೆ.

ತನ್ನ ಪ್ರತಿಸ್ಪರ್ದಿಗಳಾದ ಫೋರ್ಡ್ ಫೋಕಸ್ ಎಸ್ಟೇಟ್ ಮತ್ತು ಫೋಕ್ಸ್‌ವ್ಯಾಗನ್ ಗಾಲ್ಫ್ ಎಸ್ಟೇಟ್ ಕಾರುಗಳಿಗೆ ಪೈಪೋಟಿ ನೀಡುವುದಂತೂ ಖಂಡಿತ.

ಮೇಲ್ಭಾಗದಲ್ಲಿ ಕೋಪೇ ಸಿಲ್ಹೊಲೇಟ್ ಮಾದರಿಯ ಬಾಗಿದ ಅಕಾರ ಹೊಂದಿರುವ ಕಾರು ಇದಾಗಿದ್ದು, ಮುಂಭಾಗ ಎಲ್ಲಾ ಹ್ಯಾಚ್‌ಬ್ಯಾಕ್ ಕಾರುಗಳಂತೆ ಆಕೃತಿ ಹೊಂದಿದೆಯಾದರೂ, ಹೆಚ್ಚು ಉದ್ದವಾಗಿ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.

ಪೆಟ್ರೋಲ್ ಮಾದರಿಯ 2 ಆಯ್ಕೆಗಳಲ್ಲಿ ನಿಮಗೆ ಐ30 ಕಾರು ದೊರೆಯಲಿದೆ.
1 ಮೂರು ಸಿಲಿಂಡರ್ ಹೊಂದಿರುವ 1-ಲೀಟರ್ ಟಿ-ಜಿಡಿಐ ಎಂಜಿನ್.
2 ನಾಲ್ಕು ಸಿಲಿಂಡರ್ ಹೊಂದಿರುವ 1.4-ಲೀಟರ್.

ಡೀಸೆಲ್ ಮಾದರಿಯಲ್ಲಿ ಮೂರು ಪವರ್ ಬ್ಯಾಂಡ್ಸ್ ಹೊಂದಿರುವ 1.6-ಲೀಟರ್ ಎಂಜಿನ್ ಹೊಂದಿದೆ.

ಹ್ಯುಂಡೈ ಕಂಪನಿಯ ಐ30 ಕಾರಿನ ಒಳಭಾಗದಲ್ಲಿ ಮೊಬೈಲ್ ಮತ್ತಿತರ ಸಾಧನಗಳನ್ನು ಚಾರ್ಜ್ ಮಾಡಲು ವೈರ್-ಲೆಸ್ ಚಾರ್ಜರ್ ಹೊಂದಿದ್ದು, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್-ಪ್ಲೇ ಜೊತೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ವ್ಯವಸ್ಥೆಯನ್ನು(Touchscreen Infotainment System) ಒಳಗೊಂಡಿರಲಿದೆ.

ಹ್ಯುಂಡೈ ಕಂಪನಿಯ ಮತ್ತೊಂದು ಕಾರು ವರ್ನ 2017 ಚಿತ್ರಗಳನ್ನು ಈಗಲೇ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

Story first published: Thursday, February 23, 2017, 12:32 [IST]
English summary
South Korean car maker Hyundai has revealed the 2017 i30 Wagon ahead of its debut at the Geneva Motor Show. The new wagon model will go on sale by late-2017.
Please Wait while comments are loading...

Latest Photos