ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದ್ದು, ಈ ಐಷಾರಾಮಿ ಸೆಡಾನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

By Girish

ಜರ್ಮನ್ ಕಾರು ತಯಾರಕ ಐಷಾರಾಮಿ ಕಂಪನಿ ಬಿಎಂಡಬ್ಲ್ಯೂ ಭಾರತದಲ್ಲಿ 330ಐ ಎಂಬ ಮೂರನೇ ಸರಣಿಯ ಐಷಾರಾಮಿ ಸೆಡಾನ್ ಕಾರನ್ನು ಭಾರತದಲ್ಲಿ ಅನಾವರಣಗೊಳಿಸಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಈ ಹೊಚ್ಚ ಹೊಸ ಬಿಎಂಡಬ್ಲ್ಯೂ 330ಐ ಕಾರು ಕಾರು ಬಲಿಷ್ಠವಾದ 4-ಸಿಲಿಂಡರ್ ಟರ್ಬೊಚಾರ್ಜ್ ತಂತ್ರಜ್ಞಾನ ಹೊಂದಿರುವ ಎಂಜಿನ್ ಹೊಂದಿದ್ದು 350ಎನ್ಎಂ ತಿರುಗುಬಲದಲ್ಲಿ 248ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಬಿಎಂಡಬ್ಲ್ಯೂ 330ಐ ಭಾರತದಲ್ಲಿ 'ಸ್ಪೋರ್ಟ್ ಲೈನ್' ಮತ್ತು 'ಎಂ ಸ್ಪೋರ್ಟ್' ಎಂಬ ಎರಡು ಆಯ್ಕೆಯಲ್ಲಿ ಲಭ್ಯವಿದ್ದು, ಗ್ರಾಹಕ ತನಗೆ ಬೇಕಾದ ಮಾದರಿಯ ಕಾರನ್ನು ಆಯ್ದುಕೊಳ್ಳಬಹುದಾಗಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಈ ಕಾರಿನಲ್ಲಿ ಉತ್ಪಾದನೆಯಾದ ಎಲ್ಲಾ ಶಕ್ತಿಯನ್ನು ಹಿಂಬದಿಯ ಚಕ್ರಗಳಿಗೆ ಕಳುಹಿಸಿ ಕೊಡಲಾಗುತ್ತದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಆಲ್ಪೈನ್ ವೈಟ್, ಬ್ಲ್ಯಾಕ್ ಸ್ಯಾಫೈರ್ ಮತ್ತು ಮೆಡಿಟರೇನಿಯನ್ ಬ್ಲೂ ಎಂಬ ಮೂರು ರೀತಿಯ ಬಣ್ಣಗಳಲ್ಲಿ ಬಿಎಂಡಬ್ಲ್ಯೂ 330ಐ ಸ್ಪೋರ್ಟ್ ಲೈನ್ ಲಭ್ಯವಿದ್ದು, ಬೆಲೆ ರೂ. 42.4 ಲಕ್ಷ(ಎಕ್ಸ್ ಷೋ ರೂಂ, ದೆಹಲಿ) ನಿಗದಿಪಡಿಸಲಾಗಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಇನ್ನು, 330ಐ ಕಾರಿನ ಎಂ ಸ್ಪೋರ್ಟ್ ಮಾದರಿಯು ಕೇವಲ ಆಲ್ಪೈನ್ ವೈಟ್ ಮತ್ತು ಬ್ಲ್ಯಾಕ್ ಸ್ಯಾಫೈರ್ ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆ ರೂ. 44.9 ಲಕ್ಷ(ಎಕ್ಸ್ ಷೋ ರೂಂ, ದೆಹಲಿ) ನಿಗದಿಪಡಿಸಲಾಗಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

0 ಕಿ.ಮೀ ವೇಗದಿಂದ 100 ಕಿ.ಮೀ ವೇಗ ತಲುಪಲು ಕೇವಲ 5.8 ಸೆಕೆಂಡುಗಳನ್ನು ತೆಗೆದುಕೊಳ್ಳುವ ಈ ಕಾರು 16.05 ಕಿ.ಮೀ ಮೈಲೇಜ್ ನೀಡಲಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಸ್ಟೈಲಿಂಗ್ ಮತ್ತು ಸಲಕರಣೆಗಳ ವಿಷಯದಲ್ಲಿ ಬಿಎಂಡಬ್ಲ್ಯೂ 330ಐ ಕಾರು ಹೆಚ್ಚು ರೂಪಾಂತರಗಳನ್ನು ಪಡೆದುಕೊಂಡಿದ್ದು, ಹೆಚ್ಚು ಆರಾಮಧಾಯಕ ಪ್ರಯಾಣ ಮಾಡಬಹುದಾಗಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಇನ್ನು, ಬಿಎಂಡಬ್ಲ್ಯೂ 330ಐ ಸ್ಪೋರ್ಟ್ ಲೈನ್ ಕಾರು ಚರ್ಮದ ಸ್ಟೀರಿಂಗ್ ಚಕ್ರವನ್ನು ಪಡೆದುಕೊಂಡಿದ್ದು, ಅದಕ್ಕೆ ವಿರುದ್ಧವಾಗಿ ಕೆಂಪು ಹೊಲಿಗೆ ಹಾಕಲಾಗಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

18 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿರುವ ಎಂ ಸ್ಪೋರ್ಟ್ 330ಐ ಪೂರ್ಣ ಪ್ರಮಾಣದ ಬಣ್ಣದ ಪರದೆ, ಪಾರ್ಕಿಂಗ್ ಸೆನ್ಸರ್ ಮತ್ತು ಕ್ಯಾಮೆರಾ ಒಳಗೊಂಡಿರಲಿದೆ.

ಬಿಎಂಡಬ್ಲ್ಯೂ 330ಐ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಭಾರತದ ಜನತೆ ಪೆಟ್ರೋಲ್ ಕಾರುಗಳ ಕಡೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಬಿಎಂಡಬ್ಲ್ಯೂ ಕಂಪನಿಯ ಕಾರು ಹೆಚ್ಚು ಜನರನ್ನು ಆಕರ್ಷಣೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Read in Kannada about BMW 330i launched in India. Know more about BMW 330i car's prices, mileage, specifications and more
Story first published: Monday, May 15, 2017, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X