ಪ್ರತಿ ಲೀಟರ್‌ಗೆ 1,153 ಕಿ.ಮಿ ಮೈಲೇಜ್ ನೀಡಬಲ್ಲ ಈ ವಿಶೇಷ ಕಾರಿನಲ್ಲಿ ಏನಿದೆ?

Written By:

ಆಟೋ ಮೊಬೈಲ್ ಉದ್ಯಮದಲ್ಲಿ ದಿನಕ್ಕೊಂದು ಹೊಸ ಹೊಸ ಆವಿಷ್ಕಾರ ನಡೆಯುತ್ತಲೇ ಇರುತ್ತಲೇ. ಆದ್ರೆ ಕ್ಯೂಬೆಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಗೊಳಿಸಿರುವ ವಿಶಿಷ್ಠ ಕಾರು, ಆಟೋ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಏನಿದೆ ವಿಶೇಷ ಕಾರಿನಲ್ಲಿ?

ಆಲ್ಟ್ರಾ ಎನರ್ಜಿಯೊಂದಿಗೆ ಸಿದ್ಧಗೊಂಡಿರುವ ಈ ಕಾರು, ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ಸುಧಾರಿತ ತಂತ್ರಜ್ಞಾನಗಳ ವೈಶಿಷ್ಟ್ಯತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಫೋಟೋ ಟೈಪ್ ಉತ್ಪಾದಿತ ಈ ವಿಶೇಷ ಕಾರನ್ನು ಕೆನಡಾದ ಕ್ಯೂಬೆಕ್ ಲಾವಾಲ್ ಯೂನಿರ್ವಸಿಟಿ ವಿದ್ಯಾರ್ಥಿಗಳು ಉತ್ಪಾದನೆಗೊಳಿಸಿದ್ದು, ಅಮೆರಿಕದಲ್ಲಿ ನಡೆದ 11ನೇ ಸೆಲ್ ಇಕೋ ಮ್ಯಾರಥನ್‌ನಲ್ಲಿ ಪ್ರದರ್ಶನ ಮಾಡಲಾಗಿದೆ.

ಪ್ರತಿ ಲೀಟರ್‌ ಪೆಟ್ರೋಲ್‌ಗೆ 1153.41 ಕಿ.ಮಿ ಮೈಲೇಜ್ ನೀಡಬಲ್ಲ ವಿಶಿಷ್ಠ ಶಕ್ತಿ ಹೊಂದಿರುವ ಈ ಬೈಕ್‌ನ್ನು ಸುಮಾರು 2 ವರ್ಷಗಳ ಕಾಲ ಸತತ ಪರಿಶ್ರಮದಿಂದ ಅಭಿವೃದ್ಧಿಗೊಳಿಸಲಾಗಿದೆ.

ವಿಶೇಷ ಹೊರ ವಿನ್ಯಾಸ ಹೊಂದಿರುವ ಈ ಕಾರಿನಲ್ಲಿ ಕೇವಲ ಒಬ್ಬರಿಗೆ ಮಾತ್ರ ಅವಕಾಶವಿದ್ದು, ಕ್ರೀಡಾ ವಾಹನವಾಗಿ ಬಳಕೆಯಾಗುವ ನಿರೀಕ್ಷೆಯಿದೆ.

2016ರಲ್ಲೂ ಇಂತದ್ದೇ ವಿಶೇಷ ಕಾರನ್ನು ಆವಿಷ್ಕಾರ ಮಾಡಿದ್ದ ಲಾವಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪ್ರತಿ ಲೀಟರ್ ಪೆಟ್ರೋಲ್‌ಗೆ 1,098 ಕಿಮಿ ಮೈಲೇಜ್ ನೀಡಬಲ್ಲ ಕಾರು ಉತ್ಪಾದನೆ ಮಾಡಿದ್ದರು.

ಪೋಟೋ ಟೈಪ್ ಕಾರು ಮಾದರಿಗಳ ಸಾಲಿನಲ್ಲಿ ಈ ವಿಶೇಷ ಕಾರು ಪ್ರದರ್ಶನಗೊಳಿಸಲಾಗಿದ್ದು, ಸೆಲ್ ಮ್ಯಾರಥನ್ ಕೂಟದಲ್ಲಿ ಪ್ರಥಮ ಬಹುಮಾನ ಕೂಡಾ ಪಡೆದುಕೊಂಡಿದೆ.

ಇಂತಹ ವಿಶೇಷ ವಾಹನಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸೆಲ್ ಸಂಸ್ಧೆಯು, ಕಳೆದ 11 ವರ್ಷಗಳಿಂದ ಫೋಟೋ ಟೈಪ್ ಉತ್ಪಾದಿತ ವಾಹನಗಳ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಿದೆ.

ಕಳೆದ ಬಾರಿ ವಿಶೇಷ ಪ್ರದರ್ಶನ ತೊರಿದ್ದ ಲಾವಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಬಾರಿ 1153 ಕಿ.ಮಿ ಮೈಲೇಜ್ ನೀಡುವ ಕಾರನ್ನು ಉತ್ಪಾದನೆ ಮಾಡಿ ಮಹತ್ವದ ಸಾಧನೆ ಮಾಡಿದ್ದಾರೆ.

ಏರೋಡೈಮಾನಿಕ್ ವ್ಯವಸ್ಥೆ ಹೊಂದಿರುವ ಈ ಕಾರಿನ ಮತ್ತೊಂದು ವಿಶೇಷತೆ ಅಂದರೇ ಕೇವಲ 2 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ.

ಸುಧಾರಿತ ತಂತ್ರಜ್ಞಾನ ಮತ್ತು ಅತ್ಯಂತ ಕಡಿಮೆ ತೂಕ ಹೊಂದಿರುವ ಈ ಬೈಕ್, ಮುಂಬರುವ ದಿನಗಳಲ್ಲಿ ಆಟೋ ಉದ್ಯಮಕ್ಕೆ ಲಗ್ಗೆಯಿಡುವ ಎಲ್ಲಾ ಸಾಧ್ಯತೆಗಳಿವೆ.

ಪರಿಸರ ನಾಶ ತಡೆ ಉದ್ದೇಶಕ್ಕಾಗಿ ಈ ಕಾರು ಮಾದರಿಯನ್ನು ಸಿದ್ಧಗೊಳಿಸಿರುವ ವಿದ್ಯಾರ್ಥಿಗಳು, ವಿಶ್ವಮಟ್ಟದಲ್ಲಿ ಹೊಸ ಚರ್ಚೆಗೆ ಹುಟ್ಟುಹಾಕಿದ್ದಾರೆ.

English summary
Students from Universite Laval, in Quebec, have built a prototype petrol-powered car with 1,153km/l mileage.
Please Wait while comments are loading...

Latest Photos