ಸ್ಪೀಡ್ ಗವರ್ನರ್ಸ್ ಅಳವಡಿಕೆ- ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು..!!

Written By:

ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯ ಸೂಚನೆಯಂತೆ ದೆಹಲಿ ಸರ್ಕಾರವು ಆ್ಯಪ್ ಆಧರಿತ ಕ್ಯಾಬ್‌ಗಳಿಗೆ ಸ್ಪೀಡ್ ಗವರ್ನರ್ಸ್ ಅಳವಡಿಕೆಗೆ ಮಹತ್ವದ ಆದೇಶ ನೀಡಿದೆ.

ವೇಗಕ್ಕೆ ಮೀತಿ

ಹೊಸ ಆದೇಶದ ಪ್ರಕಾರ ಕ್ಯಾಬ್‌ಗಳಿಗೆ 80 ಕಿ.ಮಿ/ ಪ್ರತಿ ಗಂಟೆಗೆ ವೇಗದ ಮೀತಿ ತರಲಾಗುತ್ತಿದೆ.

ಹೊಸ ಕಾಯ್ದೆಗೆ ಕಾರಣ?

ಪ್ರತಿ ವರ್ಷ 2 ಸಾವಿರಕ್ಕೂ ಅಪಘಾತಗಳು ಕ್ಯಾಬ್‌ಗಳಿಂದಲೇ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಇದರ ಜೊತೆಗೆ 2014-15ರ ಅವಧಿಯಲ್ಲಿ ಕ್ಯಾಬ್‌ಗಳ ಅಪಘಾತದಲ್ಲಿ ಸುಮಾರು 3300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಇದನ್ನು ತಡೆಯುವ ಹಿನ್ನೆಲೆ ಸ್ಪೀಡ್ ಗವರ್ನರ್ಸ್ ಅವಶ್ಯಕತೆ ಇದೆ ಎನ್ನಲಾಗಿದೆ.

ಇನ್ನು ಸ್ಪೀಡ್ ಗವರ್ನರ್ಸ್ ಅಳವಡಿಕೆಗೆ ರೂ.10 ಸಾವಿರ ವೆಚ್ಚ ತಗಲಿದ್ದು, ಇದನ್ನು ಕ್ಯಾಬ್ ಮಾಲೀಕರೇ ಭರಿಸಬೇಕಿದೆ ಎಂಬ ಸೂಚನೆ ಹೊರಡಿಸಲಾಗಿದೆ.

ಕ್ಯಾಬ್ ಮಾಲೀಕರ ಆಕ್ರೋಶ

ಕೇಂದ್ರ ಮತ್ತು ದೆಹಲಿ ಸರ್ಕಾರದ ಆದೇಶವನ್ನು ವಿರೋಧಿಸಿರುವ ಕ್ಯಾಬ್ ಮಾಲೀಕರು, ಇದೊಂದು ಅವೈಜ್ಞಾನಿಕ ನಿಯಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ ನಾವು ಯಾವುದೇ ಕಾರಣಕ್ಕೂ ಸ್ಪೀಡ್ ಗವರ್ನರ್ಸ್ ಅಳವಡಿಕೆ ಅವಕಾಶ ನೀಡುವುದಿಲ್ಲ. ಜೊತೆಗೆ ಹೊಸ ಕಾಯ್ದೆ ಅನುಷ್ಠಾನ ಕೈಬಿಟ್ಟು ಪರ್ಯಾಯ ಮಾರ್ಗ ಸೂಚಿಸುವಂತೆ ಆಗ್ರಹಿಸಿದ್ದಾರೆ.

ಬೃಹತ್ ಪ್ರತಿಭಟನೆಗೆ ಸಜ್ಜು

ಈಗಾಗಲೇ ಸ್ಪೀಡ್ ಗವರ್ನರ್ಸ್ ಕಾಯ್ದೆ ಜಾರಿ ವಿರೋಧಿಸಿರುವ ಕ್ಯಾಬ್ ಮಾಲೀಕರು, ಹೊಸ ಕಾಯ್ಡೆ ವಾಪಸ್ ಪಡೆಯುವಂತೆ ಬೃಹತ್ ಪ್ರತಿಭಟನೆಗೂ ಸಜ್ಜುಗೊಳ್ಳುತ್ತಿದ್ದಾರೆ.

ಬೆಂಗಳೂರಿಗೂ ಬರಲಿದೆ ಹೊಸ ಕಾಯ್ದೆ

ಹೌದು.. ಮೊದಲ ಹಂತವಾಗಿ ದೆಹಲಿಯಲ್ಲಿ ಸ್ಪೀಡ್ ಗವರ್ನರ್ಸ್ ಅಳವಡಿಕೆ ಮಾಡಿರುವ ಕೇಂದ್ರ ಸರ್ಕಾರವು, ಬೆಂಗಳೂರು ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಿಗಲ್ಲೂ ಹೊಸ ರೂಲ್ಸ್ ಕಡ್ಡಾಯಗೊಳಿಸಲಿದೆ.

ಸದ್ಯ ಆ್ಯಪ್ ಆಧರಿತ ಕ್ಯಾಬ್ ಸೇವೆಗಳನ್ನು ಒದಗಿಸುವ ಓಲಾ ಮತ್ತು ಉಬರ್ ಸಂಸ್ಥೆಗಳ ಅಧಿನದಲ್ಲೇ ಬಹುತೇಕ ಕ್ಯಾಬ್‌ಗಳು ಸೇವೆ ಸಲ್ಲಿಸುತ್ತಿದ್ದು, ಹೊಸ ಕಾಯ್ದೆಯಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಹೀಗಾಗಿ ಅಪಘಾತಗಳನ್ನು ತಗ್ಗಿಸುವುದಕ್ಕಾಗಿಯೇ ಸ್ಪೀಡ್ ಗವರ್ನರ್ಸ್ ಜಾರಿಗೆ ತರುವ ಉದ್ದೇಶವಿದ್ದಲ್ಲಿ, ಪರ್ಯಾಯ ಮಾರ್ಗಗಳನ್ನು ಸೂಚಿಸುವ ಮೂಲಕ ಕ್ಯಾಬ್ ಮಾಲೀಕರು ಮತ್ತು ಚಾಲಕರ ಹಿತ ಕಾಯಬೇಕಿದೆ.

Story first published: Tuesday, May 23, 2017, 12:22 [IST]
English summary
Delhi Government Makes Speed Governors Mandatory For Cabs.
Please Wait while comments are loading...

Latest Photos