ಫೋರ್ಡ್ ಕಾರುಗಳನ್ನು ಖರೀದಿ ಮಾಡೋಕ್ಕೂ ಮುಂಚೆ ಈ ಖುಷಿ ವಿಚಾರ ತಿಳ್ಕೊಳಿ !!

Written By:

ಫೋರ್ಡ್ ಇಂಡಿಯಾ ತನ್ನ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಮಟ್ಟದ ರಿಯಾಯಿತಿಯನ್ನು ಘೋಷಣೆ ಮಾಡಿದ್ದು, ಅತಿ ಶೀಘ್ರದಲ್ಲೇ ಕಂಪನಿಯು ಈ ಅನುಕೂಲವನ್ನು ಗ್ರಾಹಕರಿಗೆ ಮಾಡಿಕೊಡಲಿದೆ.

ಸದ್ಯದರಲ್ಲಿಯೇ ಭಾರತದಾದ್ಯಂತ ಜಿಎಸ್‌ಟಿ ತೆರಿಗೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದ್ದು, ವಾಹನ ತಯಾರಕ ಸಂಸ್ಥೆ ಫೋರ್ಡ್ ಜಿಎಸ್‌ಟಿ ತೆರಿಗೆಗನುಗುಣವಾಗಿ ತನ್ನ ಕೆಲವು ಕಾರುಗಳ ವಾಹನ ಮೌಲ್ಯವನ್ನು ಕಡಿತಗೊಳಿಸಲು ಮುಂದಾಗಿದೆ.

ಹೌದು, ಹೊಸ ಫೋರ್ಡ್ ಗ್ರಾಹಕರು ಈ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಕಾರು ತಯಾರಿಕಾ ಸಂಸ್ಥೆಗಳೂ ಸಹ ತಮ್ಮ ಕಾರುಗಳ ಮೇಲಿನ ದರನ್ನು ಕಡಿತಗೊಳಿಸಲಿವೆ.

ಭಾರತದ ನಾಗರಿಕರ ನೆಚ್ಚಿನ ಕಾರು ತಯಾರಕ ಸಂಸ್ಥೆ ಫೋರ್ಡ್ ತನ್ನ ಕಾರುಗಳಾದ ಇಕೋ ಸ್ಪೋರ್ಟ್ಸ್, ಫಿಗೊ ಹ್ಯಾಚ್ ಬ್ಯಾಕ್, ಆಸ್ಪೈರ್ ಸೆಡಾನ್ ವಾಹನಗಳ ದರ ಕಡಿಮೆ ಮಾಡಿದೆ.

ಇಕೋ ಸ್ಪೋರ್ಟ್ಸ್ ಖರೀದಿದಾರರು ಈ ಕಾರಿನ ಮೇಲೆ ರೂ. 20,000 ರಿಂದ 30,000 ವರೆಗೂ ರಿಯಾಯಿತಿಗಳನ್ನು ಪಡೆಯಬಹುದು. ಈ ಕಾಂಪ್ಯಾಕ್ಟ್ ಎಸ್‌ಯುವಿ ಈಗ 7.18 ಲಕ್ಷದಿಂದ 10.76 ಲಕ್ಷ (ಎಕ್ಸ್ ಷೋ ರೂಂ ದೆಹಲಿ) ದರ ಹೊಂದಿದೆ.

ಇನ್ನು, ಕಂಪೆನಿಯ ಪ್ರಕಟಣೆಯಂತೆ ಫಿಗೊ ಹ್ಯಾಚ್ ಬ್ಯಾಕ್ ಮತ್ತು ಆಸ್ಪೈರ್ ಕಾರುಗಳು ಕಡಿಮೆ ಎಂದರೂ ರೂ. 10,000 ರಿಂದ 20,000 ವರೆಗೆ ರಿಯಾಯಿತಿ ಪಡೆಯಲಿವೆ.

ಫೋರ್ಡ್ ಫಿಗೊ ಸದ್ಯ ರೂ. 4.75 ಲಕ್ಷ ರೂ ಇಂದ 7.73 ಲಕ್ಷ ದರ ಹೊಂದಿದ್ದು. ಆಸ್ಪೈರ್ ಸೆಡಾನ್ ರೂ. 5.44 ಲಕ್ಷ ದಿಂದ 8.28 ಲಕ್ಷ ದರ ಪಡೆದಿದೆ.

"ಜಿಎಸ್‌ಟಿಯು ಭಾರತದಲ್ಲಿ ವಾಸ್ತವಿಕವಾಗಿ ಅನುಷ್ಠಾನಕ್ಕೆ ಬರುವುದಕ್ಕೂ ಮುಂಚಿತವಾಗಿ ಗ್ರಾಹಕರಿಗೆ ಈ ನಿರೀಕ್ಷಿತ ಪ್ರಯೋಜನವನ್ನು ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ" ಎಂದು ಫೋರ್ಡ್ ಇಂಡಿಯಾ ವಿ.ಪಿ. ಮಾರಾಟದ ಮುಖ್ಯಸ್ಥರಾದ ವಿನಯ್ ರೈನಾ ತಿಳಿಸಿದರು.

1,200 ಸಿಸಿ ಗಿಂತಲೂ ಕಡಿಮೆ ಇಂಜಿನ್ ಸಾಮರ್ಥ್ಯ ಹೊಂದಿರುವ ಸಣ್ಣ ಪೆಟ್ರೋಲ್ ಕಾರುಗಳು ಶೇಕಡಾ 1% ಸೆಸ್ಸ್ ಹೊಂದಿವೆ ಮತ್ತು 1,500 ಸಿಸಿಗಿಂತ ಕಡಿಮೆ ಇರುವ ಡೀಸೆಲ್ ಕಾರುಗಳು 3% ಸೆಸ್ಸ್ ಹೊಂದಿರಲಿವೆ.

1,500ಸಿಸಿ ಗಿಂತಲೂ ಹೆಚ್ಚು ಎಂಜಿನ್ ಸಾಮರ್ಥ್ಯ ಹೊಂದಿರುವ ದೊಡ್ಡ ಕಾರುಗಳು ಮೇಲೆ ಶೇಕಡಾ 15% ರಷ್ಟು ಸೆಸ್ಸ್ ಚಾರ್ಜಸ್ ಇರಲಿದೆ.

ಈಗಾಗಲೇ ಐಷಾರಾಮಿ ಕಾರು ತಯಾರಕ ಆಡಿ ಇಂಡಿಯಾ, ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲ್ಯೂ ಸಂಸ್ಥೆಗಳು ತಮ್ಮ ವಾಹನ ಮಾದರಿಗಳ ಬೆಲೆಗೆ ತಕ್ಕಂತೆ ರಿಯಾಯಿತಿಯನ್ನು ಘೋಷಣೆ ಮಾಡಿವೆ.

Read more on ಫೋರ್ಡ್ ford
English summary
luoik
Please Wait while comments are loading...

Latest Photos