ಭಾರತೀಯ ಮಾರುಕಟ್ಟೆಗೆ ಲೆಕ್ಸಸ್ ಆರ್‌ಸಿ ಎಫ್ ಕಾರು ಲಗ್ಗೆ...

2 ಕೋಟಿ ಬೆಲೆಬಾಳುವ ಲೆಕ್ಸಸ್ ಆರ್‌ಸಿ ಎಫ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

Written By:

ಟೊಯೋಟಾದ ಐಷಾರಾಮಿ ವಾಹನ ವಿಭಾಗ, 'ಲೆಕ್ಸಸ್' ತನ್ನ ಪ್ರಮುಖ ಎಸ್‌ಯುವಿ ಎಲ್ಎಕ್ಸ್450 ಕಾರನ್ನು ಬಿಡುಗಡೆಗೊಳಿಸಿದೆ. ಇದರ ಬೆನ್ನಲೇ ತನ್ನ ಲೆಕ್ಸಸ್ ಆರ್‌ಸಿ ಎಫ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಕಳೆದ ಎರಡು ತಿಂಗಳುಗಳ ಹಿಂದೆಯಷ್ಟೇ ತನ್ನ ಕಾರ್ಯಾಚರಣೆಯನ್ನು ಭಾರತದಲ್ಲಿ ಆರಂಭಿಸಿರುವ ಕಂಪೆನಿ ತನ್ನ ಮುಂದಿನ ಸ್ಪೋರ್ಟ್ಸ್ ಆವೃತಿಯ ಕಾರನ್ನು ಸದ್ಯದರಲ್ಲಿಯೇ ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಕಂಪೆನಿಯ ಉತ್ಪನ್ನ ಬಿಡುಗಡೆ ಪಟ್ಟಿಯಲ್ಲಿ ಆರ್‌ಎಕ್ಸ್ ಎಸ್‌ಯುವಿ ಮತ್ತು ಹೈಬ್ರಿಡ್ ಪವರ್‌ಟ್ರೈನ್ ಹೊಂದಿರುವ ಇಎಸ್ ಸೆಡಾನ್ ಕಾರುಗಳು ಒಳಗೊಂಡಿವೆ.

ಲೆಕ್ಸಸ್ ಆರ್‌ಸಿ ಎಫ್ ಕಾರು ಭಾರತಕ್ಕೆ ಲಭ್ಯವಿದ್ದು, ಯಾವುದೇ ರೀತಿಯ ಕಸ್ಟಮೈಸಷನ್ ಇಲ್ಲದ ಕಾರಿನ ಬೆಲೆ ರೂ. 2 ಕೋಟಿ(ಎಕ್ಸ್ ಷೋ ರೂಂ) ನಿಗದಿಪಡಿಸಲಾಗಿದೆ.

ಆರ್‌ಸಿ ಎಫ್ ಬಿಡುಗಡೆಯೊಂದಿಗೆ ಲೆಕ್ಸಸ್ ಐಷಾರಾಮಿ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸರಣಿಯನ್ನು ನಾಲ್ಕು ಕಾರುಗಳಿಗೆ ಏರಿಸಿಕೊಂಡಿದೆ.

ಆರ್‌ಸಿ ಎಫ್ ಎಂದಿನಂತೆ ತನ್ನ ಕಂಪನಿಯ ಛಾಯೆಯ ಡಿಸೈನ್ ಒಳಗೊಂಡಿದ್ದು, ಇದರ ಜೊತೆಯಲ್ಲೇ ಕ್ರೀಡಾ ಸ್ಪರ್ಶ ಒಳಗೊಂಡಿರಲಿದೆ.

ಕಂಪನಿಯ ಎಲ್ಎಕ್ಸ್, ಆರ್‌ಎಕ್ಸ್ ಮತ್ತು ಇಎಸ್ ಕಾರುಗಳಲ್ಲಿ ಇರುವಂತಹ ಮುಂಭಾಗದ ಗ್ರಿಲ್ ಈ ಆರ್‌ಸಿ ಎಫ್ ಕಾರಿನಲ್ಲಿ ಸ್ಪೋರ್ಟ್ ಲುಕ್ ಪಡೆದುಕೊಂಡಿದೆ.

ಆರ್‌ಸಿ ಎಫ್ ಕಾರು ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪ, 20 ಇಂಚಿನ ಚಕ್ರಗಳನ್ನು ಪಡೆದುಕೊಂಡಿದೆ. ಕಾರಿನ ಒಟ್ಟಾರೆ ವಿನ್ಯಾಸ ಕೂಪ್ ಮಾದರಿಯ ಬಾಡಿಲೈನ್ ಒಳಗೊಂಡಿರಲಿದೆ.

ಈ ಲೆಕ್ಸಸ್ ಆರ್‌ಸಿ ಎಫ್ ಕಾರು ಅತ್ಯುತ್ತಮವಾದ 5-ಲೀಟರ್ಸ್ ವಿ8 ಇಂಜಿನ್ ತಂತ್ರಜ್ಞಾನ ಹೊಂದಿದ್ದು 527ಎನ್ಎಂ ತಿರುಗುಬಲದಲ್ಲಿ 467 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

8 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಕೇವಲ 4.3 ಸೆಕೆಂಡ್‌ನಲ್ಲಿ 0 ಕಿ.ಮೀ ನಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದೆ.

ಡ್ರೈವಿಂಗ್ ಸ್ಥಿತಿಯನ್ನು ಸರಿಹೊಂದುವಂತೆ ವಿವಿಧ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿರುವ ಈ ಕಾರಿಗೆ ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

English summary
Read in Kannada about Lexus RC F car available in India. Know more about Lexus RC F car's specification, milage, engine specification and more
Please Wait while comments are loading...

Latest Photos