ಜಾರಿಗೆ ಬರಲಿದೆ ನೀತಿ ಆಯೋಗದ ಹೊಸ ರೂಲ್ಸ್- ಕಾರು ಖರೀದಿ ಇನ್ನು ಅಷ್ಟು ಸುಲಭವಲ್ಲ..!!

Written By:

ಪಂಚ ವಾರ್ಷಿಕ ಯೋಜನೆಗಳ ಬದಲಾಗಿ ಭಾರತದಲ್ಲಿ ಜಾರಿಗೆ ಬಂದಿರುವ ನೀತಿ ಆಯೋಗವು, ಪರಿಸರ ಸಂರಕ್ಷಣೆಗಾಗಿ ಕೆಲವು ಮಹತ್ತರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ಹೆಚ್ಚುತ್ತಿರುವ ಕಾರು ಖರೀದಿ ಬ್ರೇಕ್ ಹಾಕಲು ಕೆಲವು ಹೊಸ ಕಾಯ್ದೆ ಜಾರಿಗೆ ಮಾಡುಲು ಸಿದ್ಧಗೊಂಡಿದೆ.

ಲಾಟರಿ ಮೂಲಕ ಕಾರು ಖರೀದಿ

ಹೌದು.. ನೀತಿ ಆಯೋಗ ಸಿದ್ಧಪಡಿಸಿರುವ ಹೊಸ ಕಾಯ್ದೆ ಪ್ರಕಾರ ಇನ್ಮುಂದೆ ಕಾರು ಖರೀದಿ ಪ್ರಕ್ರಿಯೆ ಲಾಟರಿ ಮೂಲಕ ನಡೆಯಲಿದೆ.

ಲಾಟರಿ ಮೂಲಕ ಎಂದರೆ 100 ಜನರಲ್ಲಿ ಕೇವಲ 10 ಜನ ಮಾತ್ರ ಕಾರು ಖರೀದಿ ಮಾಡಬಹುದಾಗಿದ್ದು, ಕಾರು ಖರೀದಿಯ ಭರಾಟೆಯನ್ನು ತಗ್ಗಿಸಲು ಈ ಕ್ರಮಕೈಗೊಳ್ಳಲಾಗುತ್ತಿದೆ.

ನೀತಿ ಆಯೋಗ ಹೊಸ ಕಾಯ್ದೆ ಜಾರಿಯಾದಲ್ಲಿ ಕಾರು ಖರೀದಿಸುವ ಮುನ್ನ ಹೆಸರು ನೋಂದಾವಣೆ ಮಾಡಕೊಳ್ಳಬೇಕಾಗುತ್ತದೆ. ನಂತರವಷ್ಟೇ ಲಾಟರಿ ಮೂಲಕ ನಿರ್ಧಿಷ್ಟ ಗ್ರಾಹಕರಿಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗುತ್ತದೆ.

2030ರ ವೇಳೆಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕುವ ಉದ್ದೇಶವಿದ್ದು, ಕಾರು ಖರೀದಿ ಮೇಲೆ ಲಾಟರಿ ವ್ಯವಸ್ಥೆ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ.

ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಉತ್ತೇಜನ

ಹೊಸ ಕಾಯ್ದೆ ಜಾರಿಗೆ ತರುತ್ತಿರುವ ಉದ್ದೇಶವೇ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿದೆ.

ಬರಲಿವೆ ಎಲೆಕ್ಟ್ರಿಕ್ ಬಂಕ್‌ಗಳು

ಪೆಟ್ರೋಲ್ ಬಂಕ್‌ಗಳಂತೆ ಇನ್ಮುಂದೆ ಎಲೆಕ್ಟ್ರಿಕ್ ಬಂಕ್‌ಗಳು ಶುರುವಾಗಲಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಬಳಕೆಗೆ ಕಡಿವಾಣ ಬೀಳಲಿದೆ.

ಇನ್ನು ಎಲೆಕ್ಟ್ರಿಕ್ ಕಾರುಗಳ ಮಾರಾಟದಿಂದ ಬರುವ ತೆರಿಗೆ ಸಂಗ್ರಹದಿಂದಲೇ ಎಲೆಕ್ಟ್ರಿಕ್ ಬಂಕ್‌ಗಳನ್ನು ತೆರೆಯುವ ಬಗ್ಗೆ ಮಹತ್ಪದ ಚರ್ಚೆ ಕೂಡಾ ನಡೆದಿದೆ.

ನೀತಿ ಆಯೋಗ ಅಧ್ಯಕ್ಷರು ಆಗಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲೇ ಈ ಯೋಜನೆ ಸಿದ್ಧಗೊಂಡಿದ್ದು, ಕಾರು ಉತ್ಪಾದಕರೊಂದಿಗೂ ಮಹತ್ವದ ಮಾತುಕತೆ ನಡೆಸಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಕಾರು ಉತ್ಪಾದನೆ ಜೊತೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹೆಚ್ಚು ಒತ್ತು ನೀಡುವಂತೆ ಸೂಚನೆ ನೀಡಲಾಗಿದ್ದು, ಹೊಸ ಯೋಜನೆಗೆ ಪ್ರಮುಖ ಕಾರು ಉತ್ಪಾದಕರು ಕೂಡಾ ಸಮ್ಮತಿ ಸೂಚಿಸಿದ್ದಾರೆ.

ಹೊಸ ಯೋಜನೆ ಜಾರಿಗೆ ಬಂದಲ್ಲಿ 2030ರ ಹೊತ್ತಿಗೆ 60 ಮಿಲಿಯನ್ ಡಾಲರ್‌ನಷ್ಟು ಇಂಧನ ಶಕ್ತಿಯ ಮೇಲಿನ ಖರ್ಚು ತಗ್ಗಲಿದೆ. ಜೊತೆಗೆ 1 ಗಿಗಾ ಟನ್‌ನಷ್ಟು ಕಾರ್ಬನ್ ಅಂಶ ತಗ್ಗಲಿದೆ.

ಆದ್ರೆ ಹೊಸ ಕಾನೂನು ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಂದು ರೀತಿ ಒಳ್ಳೆಯ ನಿರ್ಧಾರವೇ ಆದ್ರೂ, ಸದ್ಯಕ್ಕೆ ಕಾರು ಖರೀದಿಸಬೇಕೆಂಬ ಮಾಧ್ಯಮ ವರ್ಗಗಳ ಕನಸು ಕನಸಾಗಿಯೇ ಉಳಿಯುತ್ತದೆ.

Click to compare, buy, and renew Car Insurance online

Buy InsuranceBuy Now

Story first published: Tuesday, May 16, 2017, 12:28 [IST]
English summary
Lottery System Proposed For Rationing Cars In India.
Please Wait while comments are loading...

Latest Photos