ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಕಾರು ತಯಾರಕ ಕಂಪನಿ ಮಹೀಂದ್ರಾ ತನ್ನ ಜನಪ್ರಿಯ ಎಕ್ಸ್ ಯುವಿ 500 ಮತ್ತು ಸ್ಕಾರ್ಪಿಯೊ ಮಾದರಿಗಳಲ್ಲಿ ಪೆಟ್ರೋಲ್ ಆವೃತಿಯನ್ನು ಬಿಡುಗಡೆಗೊಳಿಸಲು ತೀರ್ಮಾನಿಸಿದೆ.

By Girish

ಮುಂಬರುವ ಹಣಕಾಸಿನ ವರ್ಷದಲ್ಲಿ ಮಹೀಂದ್ರಾ ಮೋಟರ್ಸ್ ತನ್ನ ಎಕ್ಸ್ ಯುವಿ 500 ಮತ್ತು ಜನಪ್ರಿಯ ಸ್ಕಾರ್ಪಿಯೊ ವಾಹನಗಳ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಮಹೀಂದ್ರಾ ಕಂಪನಿಗೆ ಅದೃಷ್ಟ ಲಕ್ಷ್ಮಿ ಎಂದೇ ಹೇಳಲಾಗುವ ಸ್ಕಾರ್ಪಿಯೊ ಎಸ್ ಯುವಿಗೆ ಪೆಟ್ರೋಲ್ ಎಂಜಿನ್ ಅಳವಡಿಸಲು ತೀರ್ಮಾನಿಸಲಾಗಿದೆ, ಕೆಲವು ವರ್ಷಗಳ ಹಿಂದೆಯಷ್ಟೇ ಬಿಡುಗಡೆಗೊಂಡ ಮಹೀಂದ್ರಾ ಕಂಪನಿಯ ಮತ್ತೊಂದು ವಾಹನ ಎಕ್ಸ್ ಯುವಿ 500 ಕ್ರೀಡಾ ಬಳಕೆಯ ವಾಹನ ಸಹ ಪೆಟ್ರೋಲ್ ಮಾದರಿಗೆ ಪರಿವರ್ಸತಿಸಲು ಯೋಜನೆ ರೂಪಿಸಲಾಗಿದೆ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಈಗಾಗಲೇ ಹೆಚ್ಚಿನ ಮಂದಿ ಡೀಸೆಲ್ ಕಾರುಗಳ ಬದಲು ಪೆಟ್ರೋಲ್ ಮಾದರಿಯ ವಾಹನಗಳ ಕಡೆ ಹೆಚ್ಚು ಆಕರ್ಷಿತವಾಗುತ್ತಿರುವುದು ಈ ನಿರ್ಣಯ ತೆಗೆದುಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಮುಂಬರುವ ವರ್ಷ (2018) ರಲ್ಲಿ ಮಹೀಂದ್ರಾ ತನ್ನ ಪೆಟ್ರೋಲ್ ಮಾದರಿಯ ಎಕ್ಸ್ ಯುವಿ 500 ಮತ್ತು ಸ್ಕಾರ್ಪಿಯೊ ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಮಹೀಂದ್ರಾ ತನ್ನ ಸ್ಯಾಂಗ್ಯೊಂಗ್ ತಿವೋಲಿ ಕಾರನ್ನು ಮಾದರಿಯನ್ನಾಗಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ಮತ್ತೊಂದು ಕ್ರೀಡಾ ಬಳಕೆಯ ವಾಹನಕ್ಕೆ ತಾಕ್ಕಾಲಿಕವಾಗಿ ಎಸ್201 ಎಂಬ ಹೆಸರನ್ನು ಇಡಲಾಗಿದೆ. ಈ ಕಾರು ಮುಂದಿನ 2019 ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯ ಎಂಬ ಸೂಚನೆ ನೀಡಲಾಗಿದೆ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಎಕ್ಸ್ ಯುವಿ 500 ಕಾರು ಅತ್ಯುತ್ತಮವಾದ ಎರಡು ರೀತಿಯ ಡೀಸೆಲ್ ಎಂಜಿನ್ ಆಯ್ಕೆ(2.2-ಲೀಟರ್ ಮತ್ತು 1.99 ಲೀಟರ್) ಗಳಲ್ಲಿ ಬರುತ್ತಿದೆ, ಬೆಲೆ 12.47 ಲಕ್ಷ ಮತ್ತು 17.57 ಲಕ್ಷ (ಎಕ್ಸ್ ಶೋ ರೂಂ ದೆಹಲಿ).

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

"ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಗ್ಯಾಸೊಲಿನ್ ಆವೃತಿಯ ಸ್ಕಾರ್ಪಿಯೊ ಸಹ ಬಿಡುಗಡೆ ಮಾಡುಲಾಗುವುದು" ಎಂದು ಮಹೀಂದ್ರಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಜನರಲ್ಲಿ ವಾಯುಮಾಲಿನ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡುತಿದ್ದು, ಇತ್ತೀಚಿಗೆ ಡೀಸೆಲ್ ಕಾರುಗಳ ಮಾರಾಟ ಇಳಿಕೆ ಕಂಡಿರುವುದು, ಅದರಲ್ಲಿಯೂ 2.0-ಲೀಟರ್ ಎಂಜಿನ್ ಹೊಂದಿರುವ ಡೀಸೆಲ್ ಕಾರುಗಳ ಮಾರಾಟ ಸಂಪೂರ್ಣ ಇಳಿಮುಖವಾಗಿದ್ದು ಈ ಎಲ್ಲಾ ನಿರ್ದಾರಗಳಿಗೂ ಮುಖ್ಯ ಕಾರಣ ಎನ್ನಬಹುದು.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ಮೊದಲಿನಿಂದಲೂ ಕ್ರೀಡಾ ಬಳಕೆಯ ವಾಹನಗಳಲ್ಲಿ ಹೆಚ್ಚು ಡೀಸೆಲ್ ಎಂಜಿನ್ ಅಳವಡಿಸುವ ಪದ್ಧತಿ ರೂಡಿಯಲ್ಲಿದೆ, ಆದರೆ ಇತ್ತೀಚೆಗೆ ಈ ಕಾರುಗಳ ಮಾರಾಟ ಕುಂಠಿತವಾಗಿರುವುದು ಎಲ್ಲಾ ಕಾರು ತಯಾರಕ ಸಂಸ್ಥೆಗಳಿಗೆ ಪರ್ಯಾಯ ಮಾರ್ಗ ಹುಡುಕಿಕೊಳ್ಳಿ ಎಂಬ ಸೂಚನೆ ಕೊಟ್ಟಂತೆಯೇ ಸರಿ.

ಸ್ಕಾರ್ಪಿಯೊ ಮತ್ತು ಎಕ್ಸ್ ಯುವಿ500 ಪೆಟ್ರೋಲ್ ಆವೃತಿ ಬರ್ತಿದೆ...

ನಿಮಗೆ ಗೊತ್ತೇ ಈ ಹಿಂದೆಸ್ಕಾರ್ಪಿಯೊ ವಾಹನ ಹೆಚ್ಚು ಮಾಲಿನ್ಯ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಈ ಕಾರನ್ನು ದೆಹಲಿ ಸರ್ಕಾರ ನಿಷೇದಿಸಿತ್ತು.

ಮಹೀಂದ್ರಾ ಕಂಪನಿಯ ಮೊದಲ ಪೆಟ್ರೋಲ್ ಎಂಜಿನ್ ಹೊಂದಿರುವ ಕ್ರೀಡಾ ಬಳಕೆಯ ವಾಹನ ಕೆಯುವಿ100 ಕಾರಿನ ಚಿತ್ರಗಳನ್ನು ಈ ಕೆಳಗೆ ನೋಡಿ.

Most Read Articles

Kannada
English summary
Mahindra has confirmed the launch of the XUV500 petrol and the Scorpio, during the next fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X