ಇನ್ಮುಂದೆ ಸಿಗೋದಿಲ್ಲ ಮಾರುತಿ ಸುಜುಕಿ ಸಿಯಾಜ್ ಆರ್‌ಎಸ್

Written By:

ಪ್ರಮುಖ ಕಾರು ಉತ್ವಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಇನ್ನು ಮುಂದೆ ಸಿಯಾಜ್ ಆರ್‌ಎಸ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಿದೆ. ಬಲ್ಲ ಮೂಲಗಳ ಪ್ರಕಾರ ಚಾಲ್ತಿಯಲ್ಲಿರುವ ಸಿಯಾಜ್ ಆರ್‌ಎಸ್ ಕಾರನ್ನು ಸೆಡಾನ್ ಆವೃತ್ತಿಗೆ ಪರಿಷ್ಕಣೆಗೊಳಿಸುತ್ತಿದ್ದು, ಇಂಡೋ-ಜಪಾನ್ ಕಾರು ತಯಾಕರು ಹೊಸ ವಿನ್ಯಾಸ ನೀಡಿದ್ದಾರೆ.

ಭಾರತೀಯ ಮಾರುಕಟ್ಟೆಯಿಂದ ಹಳೆಯ ಮಾದರಿಯ ಸಿಯಾಜ್ ಆರ್‌ಎಸ್ ಹಿಂಪಡೆಯಲಾಗುತ್ತಿದ್ದು, ಇದೇ ವೇಳೆ ಮಾರುತಿ ಸುಜುಕಿ ತನ್ನ ಉತ್ಪನ್ನಗಳ ದರ ಪಟ್ಟಿಯನ್ನು ಪರಿಷ್ಕರಣೆಗೊಳಿಸಿದೆ. ಇದರಲ್ಲಿ ಸಿಯಾಜ್ ಆರ್‌ಎಸ್ ಹೆಸರು ಕೈಬಿಡಲಾಗಿದ್ದು, ಸಿಯಾಜ್ ಆರ್‌ಎಸ್ ಭಾರತದಿಂದ ಹೊರನಡೆಯುವುದು ಖಚಿತವಾಗಿದೆ.

ಈ ಹಿಂದೆ 2015ರಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದ ಸಿಯಾಜ್ ಆರ್‌ಎಸ್,  ಮೂಲತಃ ಸ್ಪೋರ್ಟ್ಸ್ ಆವೃತ್ತಿಯೊಂದಿಗೆ ಮಾರಾಟದಲ್ಲಿ ಹೊಸ ದಾಖಲೆ ಬರೆದಿತ್ತು. ಆದ್ರೆ ಪ್ರಸಕ್ತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರು ವಿನ್ಯಾಸಗೊಳಿಸಲಾಗುತ್ತಿದ್ದು, ಹಳೆಯ ಸಿಯಾಜ್ ಆರ್‌ಎಸ್ ಅನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ.

ನೂತನ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಳ್ಳುತ್ತಿರುವ ಹೊಸ ಸಿಯಾಜ್ ಆರ್‌ಎಸ್, ಅದ್ಭುತ ವಿನ್ಯಾಸ ಹೊಂದಿದೆ. ನೂತನ ಕಾರಿನಲ್ಲಿ ವಿನೂತನ ರೀತಿಯ ಸ್ಪಾಯ್ಲರ್ ವ್ಯವಸ್ಥೆ ಅಳವಡಿಸಲಾಗಿದ್ದು, ಹಿಂಭಾಗದ ಅಡಿಯಲ್ಲಿ ಹಾಗೂ ಮುಂಭಾಗದಲ್ಲಿ ಸ್ಪಾಯ್ಲರ್ ಬಾಕ್ಸ್ ವ್ಯವಸ್ಥೆ ಹೊಂದಿದೆ.

ಇನ್ನೂ ಬಿಡುಗಡೆಗೆ ಕಾಯ್ದಿರುವ ಸಿಯಾಜ್ ಸೆಡಾನ್ ಕಾರಿನಲ್ಲಿ ಇಂಟಿರಿಯರ್‌ಗೆ ಹೆಚ್ಚಿನ ಒತ್ತು ಕೊಡಲಾಗಿದ್ದು, ಈ ಹಿಂದಿನ ಹಲವು ಸೌಲಭ್ಯಗಳನ್ನು ಮುಂದುವರೆಸಲಾಗಿದೆ. ಕಾರಿನಲ್ಲೇ ಎಲ್ಲ ಮಾಹಿತಿ ನೀಡಬಲ್ಲ
ಟಚ್ ಸ್ಕ್ರಿನ್ ಮತ್ತು ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್ ಹೊಂದಿದ್ದು, ಆಪ್ಯಲ್ ಕಾರ್ ಪ್ಲೇಯ್ ಸೌಲಭ್ಯವಿದೆ.

ಸಿಯಾಜ್ ಆರ್‌ಎಸ್ ಆವೃತ್ತಿಗಿಂತಲೂ ಭಿನ್ನವಾಗಿರುವ ಪರಿಷ್ಕೃತ ಸಿಯಾಜ್ ಆರ್‌ಎಸ್ ಸೆಡಾನ್ ಹೈಬ್ರಿಡ್ ಎಂಜಿನ್ ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎರಡು ಆಯ್ಕೆಗಳಿದ್ದು, 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದರಿಂದ ಆದ್ಯತೆ ಮೇರೆಗೆ ಕಾರು ಖರೀದಿಗೆ ಸುಲಭವಾಗಲಿದೆ.

ಪೈವ್ ಸ್ಪೀಡ್ ಮ್ಯಾನುವಲ್ ಹಾಗೂ 4 ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರುವ ನೂತನ ಸಿಯಾಜ್ ಆರ್‌ಎಸ್, ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಸದ್ಯ 7 ಬಣ್ಣಗಳಲ್ಲಿ ಲಭ್ಯವಿರುವ ಸಿಯಾಜ್ ಆರ್‌ಎಸ್, ಪರ್ಲ್ ಸ್ನೋ ವೈಟ್, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಪರ್ಲ್ ಸಂಗ್ರಿಯಾ ರೆಡ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್, ಮೆಟಾಲಿಕ್ ಸಿಲ್ಕಿ ಸಿಲ್‌ವರ್, ಮೆಟಾಲಿಕ್ ಗ್ಲಿಸ್ಟೆನಿಂಗ್, ಮೆಟಾಲಿಕ್ ಕ್ಲಿಯರ್ ಬೀಜ್ ಬಣ್ಣಗಳಲ್ಲಿ ಲಭ್ಯವಿದೆ.

 

 

ದೆಹಲಿ ಎಕ್ಸ್‌ಶೋರಂ ಪ್ರಕಾರ ಪೆಟ್ರೋಲ್ ಚಾಲಿತ ಎಂಜಿನ್ ಕಾರಿನ ಬೆಲೆ 9.20 ಲಕ್ಷ ಹಾಗೂ ಡಿಸೇಲ್ ಕಾರಿನ ಬೆಲೆ 10.28 ಲಕ್ಷಕ್ಕೆ ನಿಗದಿಗೊಳಿಸಲಾಗಿತ್ತು. ಒಟ್ಟಿನಲ್ಲಿ ಹಳೆಯ ಸಿಯಾಜ್ ಆರ್‌ಎಸ್ ಸ್ಥಾನವನ್ನು ನೂತನ ಆವೃತ್ತಿ ತಂದುಕೊಡುವ ನೀರಿಕ್ಷೆಯಿದೆ.

ಮುಂಬರುವ ಮಾರುತಿ ಸ್ವಿಫ್ಟ್ ಕಾರುಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿ ಕ್ಲಿಕ್ ಮಾಡಿ.

Story first published: Saturday, February 11, 2017, 15:46 [IST]
English summary
Maruti Suzuki has discontinued the top-of-the-line model Ciaz RS from it sedan lineup in India.
Please Wait while comments are loading...

Latest Photos