ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಮಿಟ್ಸುಬಿಸಿ, ತನ್ನ ಹೊಚ್ಚ ಹೊಸ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಕಾರನ್ನು ಬಿಡುಗಡೆಗೊಳಿಸಿದೆ.

By Praveen

ಭಾರತೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಮಿಟ್ಸುಬಿಸಿ ಸಂಸ್ಥೆಯು ವಿನೂತನ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಪಜೆರೊ ಸ್ಪೋರ್ಟ್ಸ್ ಸೆಲೆಕ್ಟ್ ಪ್ಲಸ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿದೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಬೆಲೆ (ಮುಂಬೈ ಎಕ್ಸ್‌ಶೋರಂ ಪ್ರಕಾರ)

ಸೆಲೆಕ್ಟ್ ಪ್ಲಸ್ ಮಾದರಿ- ರೂ.30.50 ಲಕ್ಷ

ಟು ವೀಲ್ಹ್ ಮಾದರಿ- ರೂ.30.95 ಲಕ್ಷ

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಪಜೆರೊ ಸ್ಪೋರ್ಟ್ ಸೀಮಿತ ಆವೃತ್ತಿಯ ಕ್ರೀಡಾ ಬಳಕೆಯ ವಾಹನಗಿಂತ ಹೆಚ್ಚು ಬದಲಾವಣೆ ಹೊಂದಿರುವ ಸೆಲೆಕ್ಟ್ ಪ್ಲಸ್ ಮಾದರಿಯೂ, ಎಂಜಿನ್ ತಾಂತ್ರಿಕತೆಯಲ್ಲೂ ಅಪ್ ಗ್ರೇಡ್ ಹೊಂದಿದೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಕಾರಿನ ಒಳಮೈಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲವಾದರೂ, ಸುಧಾರಿತ ತಂತ್ರಜ್ಞಾನಗಳ ಸೌಲಭ್ಯದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಸೆಲೆಕ್ಟ್ ಪ್ಲಸ್ ಮಾದರಿಯ ವಿನ್ಯಾಸಗಳಲ್ಲಿ ಹೆಚ್ಚಿನ ಬದಲಾವಣೆ ತರಲಾಗಿದ್ದು, ಕಾರಿನ ಅಂಚುಗಳಲ್ಲಿ ಕಪ್ಪು ಬಣ್ಣದ ವಿನ್ಯಾಸಗಳು ಕಾರಿನ ಅಂದ ಹೆಚ್ಚಿಸಿವೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

2.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಪಜೆರೊ ಸ್ಪೋರ್ಟ್ಸ್ ಸೆಲೆಕ್ಟ್ ಪ್ಲಸ್ ಆವೃತ್ತಿಯು, ಆಪ್ ರೋಡಿಂಗ್ ಪ್ರಿಯರನ್ನು ಸೆಳೆಯಲಿದೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಸೆಲೆಕ್ಟ್ ಪ್ಲಸ್ ಆವೃತ್ತಿ ಮತ್ತೊಂದು ವಿಶೇಷ ಅಂದ್ರೆ, ಕೆಲವು ತುರ್ತು ಸಂದರ್ಭಗಳಲ್ಲಿ ಹಿಂದಿನ 2 ಚಕ್ರಗಳಿಗೆ ಮಾತ್ರ ಪೂರ್ಣ ಪ್ರಮಾಣದ ಶಕ್ತಿ ಒದಗಿಸಿ ವಾಹನ ಚಾಲನೆ ಮಾಡುವ ಅವಕಾಶವಿದೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಸೆಲೆಕ್ಟ್ ಪ್ಲಸ್ ಮಾದರಿಗಳು ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿದ್ದು, 178ಬಿಎಚ್‌ಪಿ ಹಾಗೂ 400 ಎಂಎನ್ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿವೆ.

ಮಿಟ್ಸುಬಿಸಿ ವಿನೂತನ ಪಜೆರೊ ಸ್ಪೋರ್ಟ್ ಸೆಲೆಕ್ಟ್ ಪ್ಲಸ್ ಬಿಡುಗಡೆ

ಇನ್ನು ಕಾರಿನ ಹೊರಮೈಯಲ್ಲಿ 3ಡಿ 'ಪಜೆರೊ ಸ್ಪೋರ್ಟ್' ಡಿಕಾಲ್ಸ್, ಕ್ರೋಮ್ ಸುತ್ತುವರಿದ ಹೆಡ್ ಲೈಟ್, ಟೈಲ್ ಲ್ಯಾಂಪ್, ಡೋರ್ ಹ್ಯಾಂಡಲ್, ಸನ್ ವೈಸರ್ ಹಾಗೂ ಟೈಟಾನಿಯಂ ಅಲಾಯ್ ವೀಲ್ ಸೌಲಭ್ಯಗಳಿರಲಿದೆ.

Most Read Articles

Kannada
English summary
Read In Kannada about Mitsubishi Pajero sport select plus launched in India.
Story first published: Tuesday, May 30, 2017, 11:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X