ಹೊಸ ಮಾರುತಿ ಡಿಜೈರ್ ಬೇಕೆಂದರೆ ಎಷ್ಟು ತಿಂಗಳು ಕಾಯಬೇಕು ಗೊತ್ತೇ ?

Written By:

ಇತ್ತೀಚಿಗಷ್ಟೇ ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಾರುತಿ ಡಿಜೈರ್ ಕಾರು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರತಿಯೊಬ್ಬರಿಂದಲೂ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇವಲ 13 ದಿನಗಳ ಸರಿ ಸುಮಾರು 40,000 ಸಾವಿರ ಹೊಸ ಮಾರುತಿ ಸುಜುಕಿ ಡಿಜೈರ್ ಕಾರುಗಳು ಬುಕ್ ಆಗುವ ಮೂಲಕ ಭಾರತದ ಅತ್ಯಂತ ಹೆಚ್ಚು ಡಿಮ್ಯಾಂಡ್ ಹೊಂದಿರುವ ಕಾರು ಎನ್ನುವ ಖ್ಯಾತಿಗೆ ಈ ಕಾರು ಪಾತ್ರವಾಗಿದೆ.

ಈಗಾಗಲೇ ಈ ಕಾರಿಗಾಗಿ ಕಾಯುವ ವೇಳೆ ಎರಡು ತಿಂಗಳಿಗೆ ವಿಸ್ತರಿಸಿದ್ದು, ನಿಮಗೆ ಡಿಜೈರ್ ಕಾರು ಬೇಕೆಂದರೆ ಕನಿಷ್ಠ ಪಕ್ಷ 8 ರಿಂದ 10 ವಾರಗಳು ಕಾಯಲೇಬೇಕು ಎನ್ನಲಾಗಿದೆ.

ಶ್ರೇಷ್ಠ ವಿನ್ಯಾಸ, ಲಕ್ಷಣಗಳು, ನವೀಕರಿಸಿದ ಒಳಾಂಗಣ ಮತ್ತು ಅದರ ಬೆಲೆಯಿಂದಾಗಿ ಈ ಹೊಸ ಫೇಸ್ ಲಿಫ್ಟ್ ಕಾರು ಹೆಚ್ಚು ಜನಪ್ರಿಯಗೊಂಡಿದೆ ಎನ್ನಬಹುದು.

ಮೂರನೇ ಪೀಳಿಗೆಯ ಈ ಮಾರುತಿ ಸುಜುಕಿ ಡಿಜೈರ್ ಕಾರು ಮೊದಲ ಬಾರಿಗೆ ಏಪ್ರಿಲ್ 24, 2017 ರಂದು ಅನಾವರಣಗೊಳಿಸಲಾಯಿತು ಮತ್ತು ಭಾರತದ ದೊಡ್ಡ ಕಾರು ತಯಾರಕ ಕಂಪನಿಯ ಈ ಕಾರು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಈ ಫೇಸ್ ಲಿಫ್ಟ್ ಕಾರಿನ ಬೆಲೆ ರೂ. 5.45 ಲಕ್ಷ (ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದ್ದು, ಹೊಸ ಡಿಜೈರಿನ ರೂಪಾಂತರಗಳ ಆಧಾರದ ಮೇಲೆ ಕಾರಿನ ಕಾಯುವಿಕೆ ನಿರ್ಧರಿಸಲಾಗುತ್ತಿದೆ.

ಪೆಟ್ರೋಲ್ ಮಾದರಿಯ ಮಾರುತಿ ಡಿಜೈರ್ ಕಾರು 1.2 ಲೀಟರ್ ಎಂಜಿನ್ ಹೊಂದಿದ್ದು, 113 ಎನ್ಎಂ ತಿರುಗುಬಲದಲ್ಲಿ 82 ಅಶ್ವಶಕ್ತಿ ಉತ್ಪಾದಿಸಲಿದೆ.

ಇನ್ನು ಡೀಸೆಲ್ ಮಾದರಿಯ ಮಾರುತಿ ಡಿಜೈರ್ ಕಾರು 1.3 ಲೀಟರ್ ಎಂಜಿನ್ ಹೊಂದಿದ್ದು, 190 ಎನ್ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿ ಉತ್ಪಾದಿಸಲಿದೆ.

ಇದರ ಜೊತೆಗೆ ಆಕ್ಸ್‌ಫರ್ಡ್ ಬ್ಲೂ, ಶೇರ್‌ವುಡ್ ಬ್ರೌನ್, ಗಲ್ಯಾಂಟ್ ರೆಡ್, ಮ್ಯಾಗ್ಮಾ ಗ್ರೇ, ಸಿಲ್ಕಿ ಸಿಲ್ವರ್ ಮತ್ತು ಪರ್ಲ್ ಆರ್ಟಿಕ್ ವೈಟ್‌ನಲ್ಲಿ ಲಭ್ಯವಿದೆ

ಡಿಜೈರ್ ಬೆಲೆಗಳು (ಪೆಟ್ರೋಲ್ ಮಾದರಿ)
ಎಲ್‌ಎಕ್ಸ್‌ಐ - ರೂ.5.45 ಲಕ್ಷ
ವಿಎಕ್ಸ್‌ಐ - ರೂ.6.29 ಲಕ್ಷ
ವಿಎಕ್ಸ್‌ಐ ಎಜಿಎಸ್- ರೂ.6.76 ಲಕ್ಷ
ಝಡ್ಎಕ್ಸ್‌ಐ- ರೂ.7.05 ಲಕ್ಷ
ಝಡ್ಎಕ್ಸ್‌ಐ ಎಜಿಎಸ್- ರೂ. 7.52 ಲಕ್ಷ
ಝಡ್‌ಎಕ್ಸ್ಐ ಪ್ಲಸ್- ರೂ.7.94 ಲಕ್ಷ
ಝಡ್‌ಎಕ್ಸ್ಐ ಪ್ಲಸ್ ಎಜಿಎಸ್- ರೂ.8.41 ಲಕ್ಷ

ಡಿಜೈರ್ ಬೆಲೆಗಳು (ಡಿಸೇಲ್ ಮಾದರಿ)
ಎಲ್‌ಡಿಐ- ರೂ. 6.45ಲಕ್ಷ
ವಿಡಿಐ- ರೂ.7.29ಲಕ್ಷ
ವಿಡಿಐ ಎಜಿಎಸ್- ರೂ.7.76ಲಕ್ಷ
ಝಡ್‌ಡಿಐ- ರೂ. 8.05 ಲಕ್ಷ
ಝಡ್‌ಡಿಐ ಎಜಿಎಸ್- ರೂ.8.52 ಲಕ್ಷ
ಝಡ್‌ಡಿಐ ಪ್ಲಸ್- ರೂ. 8.94 ಲಕ್ಷ
ಝಡ್‌ಡಿಐ ಪ್ಲಸ್ ಎಜಿಎಸ್- ರೂ. 9.41 ಲಕ್ಷ

Read more on ಮಾರುತಿ maruti
English summary
Read in Kannada about New Maruti Suzuki waiting period extends from 8 to 10 weeks with bookings crossing 40,000 within 13 days of its launch in India
Please Wait while comments are loading...

Latest Photos