ಹಲವು ಘಟಕಗಳಲ್ಲಿ ಉತ್ಪಾದನೆ ಸ್ಥಗಿತ ಮಾಡಿದ ರೆನಾಲ್ಟ್, ಕಾರಣ ಏನ್ ಗೊತ್ತಾ...?

Written By:

ಪ್ರಸಿದ್ಧ ಫ್ರೆಂಚ್ ವಾಹನ ತಯಾರಕ ಸಂಸ್ಥೆ 'ರೆನಾಲ್ಟ್', ಜಾಗತಿಕ ಸೈಬರ್ ದಾಳಿಯನ್ನು ತಡೆಯವ ಉದ್ದೇಶದಿಂದ ಹಲವಾರು ಘಟಕಗಳಲ್ಲಿ ತನ್ನ ವಾಹನ ಉತ್ಪಾದನೆಯನ್ನು ನಿಲ್ಲಿಸಿದೆ.

ಅತ್ಯಂತ ಅಚ್ಚರಿಯ ವಿಚಾರವನ್ನು ಕಂಪನಿ ಬಿಡುಗಡೆಗೊಳಿಸಿದ್ದು, 'ಜಾಗತಿಕ ಸೈಬರ್ ದಾಳಿ' ಹೆಚ್ಚು ಪ್ರಬಲವಾಗಿದ್ದು, ಈ ವಿಚಾರವನ್ನು ಕಂಪನಿಯು ಹೆಚ್ಚು ಗಂಭೀರವಾಗಿ ಪರಿಗಣಿಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಸದ್ಯ ಉತ್ಪಾದನೆ ನಿಲ್ಲಿಸಿರುವ ಘಟಕಗಳಲ್ಲಿ ವಾಯುವ್ಯ ಫ್ರಾನ್ಸ್‌ನಲ್ಲಿರುವ ಸ್ಯಾಂಡೋವಿಲ್ಲೆನಲ್ಲಿರುವ ರೆನಾಲ್ಟ್ ತಯಾರಿಕಾ ಘಟಕ ಕೂಡ ಒಳಗೊಂಡಿದೆ.

ರೆನಾಲ್ಟ್ ಕಂಪನಿ ತನ್ನ ಶಾಖೆ ಹೊಂದಿರುವ ಸರಿ ಸುಮಾರು 100 ದೇಶಗಳಲ್ಲಿ ಹತ್ತಾರು ಸಾವಿರ ಕಂಪ್ಯೂಟರ್‌ಗಳು ದಾಳಿಗೊಳಗಾಗಿವೆ ಎನ್ನಲಾಗಿದೆ.

"ಮುಂದಾಗುವ ಅವಘಡಗಳನ್ನು ತಪ್ಪಿಸುವ ಸಲುವಾಗಿ ಕೈಗಾರಿಕಾ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಕೆಲವು ಘಟಕಗಳಲ್ಲಿ ನಿಲ್ಲಿಸಿದೆ" ಎಂದು ಕಂಪನಿಯ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಸೈಬರ್ ದಾಳಿಗೆ ತುತ್ತಾದ ಮೊದಲ ಕಂಪನಿ ಎಂಬ ಕುಖ್ಯಾತಿಗೆ ರೆನಾಲ್ಟ್ ಕಂಪನಿ ಪಾತ್ರವಾಗಿದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ.

ರೆನಾಲ್ಟ್ ಕಂಪನಿಯ ಪ್ರತಿಸ್ಪರ್ಧಿ ಕಂಪೆನಿ ಪಿಎಸ್ಎ ಗ್ರೂಪ್, ಇಂತಹ ಯಾವುದೇ ರೀತಿಯ ದಾಳಿಗೆ ಒಳಗಾಗಿಲ್ಲ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ತನ್ನ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎನ್ನುವ ಮಾಹಿತನ್ನು ಹೊರತುಪಡಿಸಿ ಮತ್ಯಾವ ವಿಚಾರವನ್ನೂ ಕಂಪನಿ ಬಹಿರಂಗಪಡಿಸಿಲ್ಲ.

ಅಸಲಿ ವಿಷ್ಯ ಏನು..?

ಇತ್ತೀಚಿಗೆ, ತಂತ್ರಜ್ಞಾನ ಬೆಳೆದಂತೆಲ್ಲಾ ಮನುಷ್ಯ ಹೆಚ್ಚು ಅಪ್ಡೇಟ್ ಆಗ್ತಾ ಇದ್ದಾನೆ, ಇದರ ಜೊತೆ ಆತನಿಗೆ ಕೆಲವು ಸಮಸ್ಯೆಗಳೂ ಸಹ ಎದುರಾಗಿರುವುದು ಖಂಡಿತ.

 

‘ವನ್ನಾಕ್ರೈ' ಎಂಬ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ.

ವನ್ನಾಕ್ರೈ ಕುತಂತ್ರಾಂಶದ ದಾಳಿಗೆ ಒಳಗಾಗಿರುವ ಸುಮಾರು 2 ಲಕ್ಷ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ.

ಹಾನಿಗೊಳಗಾದ ಕಂಪ್ಯೂಟರ್‌ಗಳಮ್ಮು ಸರಿಪಡಿಸುವ ಕೆಲಸ ನಡೆಯುತ್ತಿದ್ದು ಎಂದಿನಂತೆ ತಡೆಗಟ್ಟುವ ಕಾರ್ಯ ನಡೆಯಲಿದೆ ಎಂದು ಕುಬೇರ್ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.

Click to compare, buy, and renew Car Insurance online

Buy InsuranceBuy Now

English summary
Read in Kannada about Renault halts production at several sites after cyber attack. Know more about Renault, Renault production, cyber attack and more...
Please Wait while comments are loading...

Latest Photos