ಅಪನಗದೀಕರಣ ಅವಧಿಯಲ್ಲೂ ಟಾಟಾ ಹೆಕ್ಸಾ ಭರ್ಜರಿ ಮಾರಾಟ

ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾಗಿದ್ದ ಟಾಟಾ ಮೋಟಾರ್ಸ್‌ನ ಹೆಕ್ಸಾ ಕಾರು, ಅತ್ಯುತ್ತಮ ಪ್ರದರ್ಶನದ ಮೂಲಕ ಭರ್ಜರಿ ಮಾರಾಟ ಕಾಣುತ್ತಿದೆ.

Written By:

ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾಗಿದ್ದ ಟಾಟಾ ಮೋಟಾರ್ಸ್‌ನ ಹೆಕ್ಸಾ ಕಾರು, ಭರ್ಜರಿ ಮಾರಾಟ ಕಾಣುತ್ತಿದೆ. ಜನವರಿ 17 ರಿಂದ ಇಲ್ಲಿಯವರೆಗೆ 1,498 ಕಾರುಗಳು ಮಾರಾಟಗೊಂಡಿದ್ದು, ಅಪನಗದೀಕರಣದ ಭಯದಲ್ಲೂ ಬಿಡುಗಡೆಯಾಗಿ ಯಶ್ವಸಿಯಾಗಿದೆ. ಇಂಪ್ಯಾಕ್ಟ್ ಡಿಸೈನ್ ಹೊಂದಿರೋ ಹೆಕ್ಸಾ ಕಾರು ಗ್ರಾಹಕರ ಮನಗೆದ್ದಿದೆ.

ಟಾಟಾದ ಟಿಯಾಗೋ ಈಗಾಗಲೇ ದೇಶದಲ್ಲಿ ಉತ್ತಮ ಮಾರಾಟವಾದ ಕಾರುಗಳಲ್ಲಿ ಒಂದು ಎನ್ನಿಸಿದ್ದು, ಕಾರಿನ ವಿನ್ಯಾಸ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ಹೀಗಾಗಿಯೇ ರೂ.18 ಲಕ್ಷ ಗಳಿಂದ 12 ಲಕ್ಷ ರೂ. ನಡುವೆ ಪ್ರೀಮಿಯಂ ಎಸ್‌ಯುವಿ ಕಾರುಗಳ ಮಾರಾಟ ಯಶಸ್ವಿಗೊಳಿಸಲು ಯೋಚಿಸಿದ್ದ ಟಾಟಾ ಮೋರ್ಟಾರ್ಸ್, ಹೆಕ್ಸಾ ಕಾರನ್ನು ಮಾರಾಕಟ್ಟೆಗೆ ಪರಿಚಯಿಸಿ ಯಶ್ವಸಿಯಾಗಿದೆ.

ಹೆಕ್ಸಾ ಖರೀದಿಗೆ ಉತ್ತಮವಾಗಿದ್ದು, ಪ್ರಮುಖ ನಗರಗಳಲ್ಲಿ ಈಗಾಗಲೇ ಭರ್ಜರಿ ಮಾರಾಟ ಕಾಣುತ್ತಿದೆ. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈನಲ್ಲಿ ಹೆಕ್ಸಾ ಲಭ್ಯವಿದ್ದು, ಗ್ರಾಹಕರು ಖರೀದಿ ಮುನ್ನ ನೂತನ ಕಾರಿನ ಬಗೆಗೆ ಕುತಹೂಲವಿದ್ದಲ್ಲಿ ಟೆಸ್ಟ್ ಡ್ರೈವ್ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಸದ್ಯದಲ್ಲೇ ಹೈದ್ರಾಬಾದ್‌ನಲ್ಲೂ ಈ ಅವಕಾಶ ಒದಗಿಸಲಾಗುವುದು ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಹೆಕ್ಸಾ ಮಾರಾಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಕಾರ್ಯಕ್ರಮ ಹಮ್ಮಿಕೊಂಡಿರುವ ಟಾಟಾ ಮೋಟಾರ್ಸ್, ಗ್ರಾಹಕರನ್ನು ಸೆಳೆಯಲು ಟೆಸ್ಟ್ ಡ್ರೈವ್ ಸೌಲಭ್ಯ ಒದಗಿಸುತ್ತಿದೆ. ಈ ಮೂಲಕ ಗ್ರಾಹಕರ ಆದ್ಯತೆಗಳ ಅಭಿಪ್ರಾಯ ಸಂಗ್ರಹಿಸಿ ಮಾರಾಟ ತಂತ್ರಗಾರಿಕೆ ರೂಪಿಸುತ್ತಿದೆ. ಈಗಾಗಲೇ ಶೇಕಡಾ 60ರಷ್ಟು ಪ್ರೀ-ಬುಕಿಂಗ್ ಮೂಲಕವೇ ಖರೀದಿಗೆ ಸಿದ್ದವಾಗಿದ್ದು, ಅಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಹೆಕ್ಸಾ 2.2-ಲೀಟರ್ ವ್ಯಾರಿಕೋರ್ 400 ಮತ್ತು ವ್ಯಾರಿಕೋರ್ 320 ಎಂಜಿನ್ ಹೊಂದಿದೆ. ವ್ಯಾರಿಕೋರ್ 400 ಎಂಜಿನ್ 153ಬಿಎಚ್‌ಪಿಯೊಂದಿಗೆ 400ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಂತೆಯೇ ವ್ಯಾರಿಕೋರ್ 320 ಎಂಜಿನ್ 147ಬಿಎಚ್‌ಪಿಯೊಂದಿಗೆ 320ಎನ್ಎಂ ಟಾರ್ಕ್ ಉತ್ವಾದಿಸುತ್ತೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯಿದೆ.

ಇನ್ನು ಹೆಕ್ಸಾ ಕಾರಿನಲ್ಲಿ ಸುರಕ್ಷಾ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ ಹೊಂದಿದ್ದು, ಎಬಿಎಸ್ ಜೊತೆ ಇಬಿಡಿ, 6 ಏರ್ ಬ್ಯಾಗ್ ವ್ಯವಸ್ಥೆಯಿದೆ.

ವಿನೂತನ ತಂತ್ರಜ್ಞಾನಗಳಿಂದ ಸಿದ್ದಗೊಂಡಿರುವ ಹೆಕ್ಸಾ ಮಳೆ ಸಂವೇದಕ ವೈಪರ್ಸ್ ಹೊಂದಿದೆ. ಕಾರಿನಲ್ಲಿ ಫ್ಲೆಕ್ಸಿಬಲ್ ಸೀಟುಗಳು, ವೇಗ ನಿಯಂತ್ರಕಗಳಿವೆ. ಇನ್ನೂ 10 ಜೆಬಿಎಲ್ ಹರ್ಮಾನ್ ಸ್ಪೀಕರ್ ವ್ಯವಸ್ಥೆ ಒದಗಿಸಲಾಗಿದೆ. ಹೀಗಾಗಿ ಯುಟಿಲಿಟಿ ವಿಭಾಗದಲ್ಲಿ ಹೆಕ್ಸಾ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ.

ಸದ್ಯ ಮಾರಾಟದಲ್ಲಿ ಯಶಸ್ವಿ ಕಾಣುತ್ತಿರುವ ಹೆಕ್ಸಾ, ಮಾರುತಿ ವಿಟರಾ ಬ್ರೆಜಾ ಮತ್ತು ಪೋರ್ಡ್ ಎಕೋಸ್ವೋರ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗುತ್ತಿದೆ. ಹೀಗಾಗಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ನೆಕ್ಸಾನ್ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಚಿಂತನೆ ನಡೆಸಿದೆ.

ಟಾಟಾದ ಪ್ರಮುಖ ಎಸ್‌ಯುವಿ ಕಾರು ಹೆಕ್ಸಾ ಫೋಟೋ ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

English summary
The Tata Hexa will be judged based on the sales performance of the SUV from the first month of launch as demonisation withers out.
Please Wait while comments are loading...

Latest Photos