ಟಾಟಾ ಕಂಪನಿಯ ಸಣ್ಣ ಕಾರು ಟಿಯಾಗೋದಲ್ಲೂ ಬರಲಿದೆ ಈ ತಂತ್ರಜ್ಞಾನ

Written By:

ಆಟೋಮೊಬೈಲ್ ಕ್ಷೇತ್ರದ ದೊಡ್ಡಣ್ಣ ಟಾಟಾ ಮೋಟರ್ಸ್ ಕಂಪನಿಯು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಎಂಬ ವಿಶಿಷ್ಟ ತಂತ್ರಜ್ಞಾನವನ್ನು ತನ್ನ ಬಹು ನಿರೀಕ್ಷಿತ ಮಾದರಿಯ ಟಿಯಾಗೊ ಕಾರಿನಲ್ಲಿ ಬಳಸಲು ಮುಂದಾಗಿದೆ.

ಟ್ರಾಫಿಕ್ ಜಂಜಾಟದ ನಡುವಲ್ಲಿ ಪದೇ ಪದೇ ಕ್ಲಚ್ ಅದುಮಿ ಗೇರ್ ಬದಲಾಯಿಸುವ ಗೋಳು ಸಾಕು, ಸಾಕಾಗಿ ಹೋಯ್ತು ಎಂದು ನಗರ ಪ್ರದೇಶದ ಜನ ಸದಾ ಗೋಳಾಡುತ್ತಿರುತ್ತಾರೆ. ಇಂತಹ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಭಾರತದಲ್ಲಿ ಎಎಂಟಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಆಟೋಮ್ಯಾಟಿಕ್ ಕಾರುಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸುವ ನಿರ್ದಾರಕ್ಕೆ ಬರಲಾಗಿದೆ.

ತನ್ನ ಬಹು ನಿರೀಕ್ಷಿತ ಮಾದರಿಯ ವಾಹನ ಟಿಯಾಗೊ ಸಣ್ಣ ಕಾರಿನ ಮಾದರಿಯಲ್ಲಿ ಅಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಬಲ್ಲ ಮೂಲಗಳ ಪ್ರಕಾರ ಪೆಟ್ರೋಲ್ ಡೀಸೆಲ್ ಎರಡೂ ಮಾದರಿಗಳಲ್ಲಿಯೂ ಈ ವಾಹನ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

ಟಿಯಾಗೊ ಸಣ್ಣ ಕಾರಿನ ಎರಡೂ (ಎಕ್ಸ್‌ಟಿ ಮತ್ತು ಎಕ್ಸ್‌ಎಂ) ಮಾದರಿಗಳಲ್ಲಿ ಸ್ವಯಂಚಾಲಿತ ಗೇರ್ ಬಾಕ್ಸ್ ಅಳವಡಿಸಲಾಗಿದೆ ಮತ್ತು ಎಎಂಟಿ ಹೊರತುಪಡಿಸಿ ಬೇರೆ ಯಾವ ವಿಶೇಷತೆಗಳನ್ನು ಅಳವಡಿಸಲಾಗಿಲ್ಲ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲು ಪೆಟ್ರೋಲ್ ಮಾದರಿಯ ವಾಹನ ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ಮೈಲೇಜ್ ವಿಚಾರಕ್ಕೆ ಬಂದರೆ ಟಿಯಾಗೊ ಎಎಂಟಿ ವಾಹನವು ಪ್ರತಿ ಲೀಟರ್ ಗೆ 25 ಕಿ.ಮೀ ಇಂಧನ ದಕ್ಷತೆ ನೀಡುತ್ತದೆ. ಇದರಲ್ಲಿ 1.2 ರೆವೊಟ್ರೋನ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು 114ಎನ್ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ ಮತ್ತು ಡೀಸೆಲ್ ಇಂಜಿನ್ 140ಎನ್ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈ ಎಎಂಟಿ ವಿಶೇಷತೆಯನ್ನು ಹೊಂದಿರುವ ಈ ಸಣ್ಣ ಕಾರು ಬೇರೆ ಕಂಪನಿಯ ವಾಹನಗಳಾದ ಮಾರುತಿ ಸುಜುಕಿ ಸೆಲೆರಿಯೊ ಎಎಂಟಿ, ರೆನಾಲ್ಟ್ ಕ್ವಿಡ್ 1.0 ಎಎಂಟಿ, ಹುಂಡೈ ಗ್ರಾಂಡ್ ಐ10 ಎಎಂಟಿ ಗಳಿಗೆ ಪ್ರತಿಸ್ಪರ್ಧೆ ನೀಡುವುದರಲ್ಲಿ ಖಂಡಿತ ಅನುಮಾನವಿಲ್ಲ.

ಟಾಟಾ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿರುವ ಟಿಯೊಗೊ, ಟಾಟಾ ಶ್ರೇಣಿಯ ಕಾರುಗಳಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದೆ.

ಈಗಾಗಲೇ ಟಾಟಾ ಕಂಪನಿಯು ಅತಿ ನೂತನ ಟಿಯಾಗೊ ಕಾರಿನ ಕೈಟ್ ಸೆಡಾನ್ ಮತ್ತು ನಿಕ್ಸನ್ ಎಸ್.ಯು.ವಿ ಕಾರನ್ನು 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಎಎಂಟಿ ಗೇರ್ ಬಾಕ್ಸ್ ತಂತ್ರಜ್ಞಾನ ಈ ಎರಡೂ ಮಾದರಿಯ ವಾಹನಗಳಿಗೆ ಹೊಸ ಹುರುಪು ನೀಡಿದಂತಾಗಿದೆ. ಹೆಚ್ಚು ಸಣ್ಣ ಕಾರುಗಳಲ್ಲಿ ಎಎಂಟಿ ಆವೃತ್ತಿಯನ್ನು ಹೊಂದಿರುವುದರಿಂದ ಹೆಚ್ಚು ವಿಳಂಬ ಮಾಡಿದರೆ ಅಪಾಯ ಎದುರಾಗಲಿದೆ ಎಂಬುದನ್ನು ಟಾಟಾ ಸ್ಪಷ್ಟವಾಗಿ ಮನಗಂಡಿದೆ.

ಟಾಟಾ ಕಂಪನಿಯ ಟಿಯಾಗೊ ಕಾರಿನ ಹೆಚ್ಚು ಫೋಟೋಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ಕಿಸಿ.

English summary
Tata Tiago AMT Coming By March; Both Petrol And Diesel Variants To Get AMT
Please Wait while comments are loading...

Latest Photos