ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಕಾರುಗಳ ಮಾರಾಟದಲ್ಲಿ ದಾಖಲೆ ನಿರ್ಮಿಸಿರುವ ಮಾರುತಿ ಸುಜುಕಿ ಸಿಯಾಜ್ ಸೆಡಾನ್, ಬಿಡುಗಡೆಗೊಂಡ ಕೇವಲ 10 ತಿಂಗಳ ಅವಧಿಯಲ್ಲಿ 53,644 ಕಾರುಗಳ ಮಾರಾಟದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ.

By Praveen

ಕಾರುಗಳ ಮಾರಾಟದಲ್ಲಿ ದಾಖಲೆ ನಿರ್ಮಿಸಿರುವ ಮಾರುತಿ ಸುಜುಕಿ ಸಿಯಾಜ್ ಸೆಡಾನ್, ಬಿಡುಗಡೆಗೊಂಡ ಕೇವಲ 10 ತಿಂಗಳ ಅವಧಿಯಲ್ಲಿ 53,644 ಕಾರುಗಳ ಮಾರಾಟದೊಂದಿಗೆ ಹೊಸ ದಾಖಲೆ ನಿರ್ಮಿಸಿದೆ. ಜೊತೆಗೆ ಪ್ರತಿಸ್ಪರ್ಧಿ ಹೋಂಡಾ ಸಿಟಿ ಮಾರಾಟಕ್ಕೆ ತೀವ್ರ ಸ್ಪರ್ಧೆ ಒಡ್ಡಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಭಾರತದ ಬೃಹತ್ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಸೆಡಾನ್ ಕಾರು ಸಿಯಾಜ್, ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 2014ರಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಪ್ರೀಮಿಯಂ ಸೆಡಾನ್ ಮಾರುಕಟ್ಟೆಯಲ್ಲಿ ಬೃಹತ್ ಮಾರಾಟದೊಂದಿಗೆ ಈ ಹಿಂದಿನ ದಾಖಲೆಗಳನ್ನು ಧೂಳಿಪಟ ಮಾಡಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಕಳೆದ ಋತುವಿನಲ್ಲಿ 1 ಲಕ್ಷ ಕಾರುಗಳ ಮಾರಾಟದೊಂದಿಗೆ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಿದ್ದ ಸಿಯಾಜ್, ಹೋಂಡಾ ಸಿಟಿ ಮಾರಾಟ ದಾಖಲೆ ಹಿಂದಿಕ್ಕಿ ಮಾರುತಿ ಸುಜುಕಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಮಾರುತಿ ಸಿಯಾಜ್ ಆವೃತ್ತಿಯ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎಸ್‌ಎಚ್‌ವಿಎಸ್‌ ಆಯ್ಕೆಯಲ್ಲಿ ಲಭ್ಯವಿದ್ದು, ಇಂಧನ ಉಳಿತಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇದರಿಂದಾಗಿ ಕಾರು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಸಿಯಾಜ್ ಮಾರಾಟದಲ್ಲಿ ಬೃಹತ್ ದಾಖಲೆ ನಿರ್ಮಿಸುವ ತವಕದಲ್ಲಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಹೈಬ್ರಿಡ್ ಎಂಜಿನ್ ಹೊಂದಿರುವ ಮಾರುತಿ ಸುಜುಕಿ ಸಿಯಾಜ್, ಡ್ಯುಯಲ್ ಏರ್‌ಬ್ಯಾಗ್ ಹೊಂದಿದೆ. ಇನ್ನೂ ಪೆಟ್ರೋಲ್ ಕಾರಿನಲ್ಲಿ ಪ್ರತಿ 1.4 ಲೀಟರ್‌‌ಗೆ ಕೆ-14 ವಿವಿಟಿ ಮೂಲಕ 91.18 ಬಿಎಚ್‌ಪಿ ಹಾಗೂ 130ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಡೀಸೆಲ್ ಕಾರಿನಲ್ಲಿ 1.3 ಲೀಟರ್‌ ಡಿಡಿಐಎಸ್ 200 ಎಂಜಿನ್ ಅಳವಡಿಸಲಾಗಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಇನ್ನೂ ಮಾರುತಿ ಸುಜುಕಿ ಸಿಯಾಜ್ ಕಾರಿನಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದ್ದು, ಡೀಸೆಲ್ ಕಾರಿನಲ್ಲಿ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಇದರಿಂದ ಕಾರು ಆಯ್ಕೆಯಲ್ಲಿ ಹೆಚ್ಚಿನ ಅವಕಾಶವಿದ್ದು, ಪೆಟ್ರೋಲ್ ಕಾರಿನಲ್ಲಿ ಫೈವ್ ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆ ಅಳವಡಿಸಲಾಗಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಸದ್ಯ ಮಾರುಕಟ್ಟೆಯಲ್ಲಿ ದಾಖಲೆಯ ಮಾರಾಟದೊಂದಿಗೆ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಪ್ರತಿಸ್ಪರ್ಧಿ ಸೆಡಾನ್ ಕಾರುಗಳಿಂತ ಭಿನ್ನವಾಗಿದೆ. ನೂತನ ವೈಶಿಷ್ಠತೆಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಯಾಜ್ Z+ ಗ್ರಾಹಕರನ್ನು ಮೋಡಿ ಮಾಡಿದೆ.

ಮಾರಾಟದಲ್ಲಿ ಹೋಂಡಾ ಸಿಟಿ ಹಿಂದಿಕ್ಕಿದ ಮಾರುತಿ ಸುಜುಕಿ ಸಿಯಾಜ್..!

ಇನ್ನೂ ಬೆಲೆ ಕುರಿತು ಹೇಳುವುದಾದರೆ ಗ್ರಾಹಕರಿಗೆ ಖರೀದಿಗೆ ಉತ್ತಮವಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಪ್ರಾರಂಭಿಕ ಬೆಲೆ ರೂ. 7.72 ಲಕ್ಷದಿಂದ ರೂ. 10.52 ಲಕ್ಷಕ್ಕೆ ಲಭ್ಯವಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮಾರಾಟದಲ್ಲಿ ಬೃಹತ್ ದಾಖಲೆ ನಿರ್ಮಿಸುವ ನೀರಿಕ್ಷೆಯಿದೆ.

ದೀಪಾವಳಿ ಸಂಭ್ರಮಕ್ಕೆ ಭಾರತ ಪ್ರವೇಶಿಸಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
Launches in 2014, Maruti Ciaz is the selling highest selling sedan in 2016 for India. Maruti sold 53,644 units of Ciaz for the period of April 2016 to January 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X