ಈಗೇನಿದ್ದರು ಭಾರತದಲ್ಲಿ ಹೈಬ್ರಿಡ್ ಕಾರುಗಳದ್ದೇ ಹವಾ-ಟೊಯೊಟಾ ಹೈಬ್ರಿಡ್ ಕೊರೊಲ್ಲಾ ಬಿಡುಗಡೆಗೆ ಸಿದ್ಧತೆ..!

Written By:

ಜಪಾನ್ ಮೂಲದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆ ಟೊಯೊಟೊ, ತನ್ನ ಬಹುನೀರಿಕ್ಷಿತ ಕೊರೊಲ್ಲಾ ಹೈಬ್ರಿಡ್ ಕಾರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ.

ಈ ಹಿಂದೆ 2016ರಲ್ಲಿ ಬಿಡುಗಡೆಯಾಗಿದ್ದ ಟೊಯೊಟಾ ಕೊರೆಲ್ಲಾ ಭಾರತದಲ್ಲಿ ಭರ್ಜರಿ ಮಾರಾಟ ಕಂಡಿತ್ತು. ಹೀಗಾಗಿ ವಿನೂತನ ವೈಶಿಷ್ಠತೆಗಳೊಂದಿಗೆ ಮತ್ತೆ ಮಾರುಕಟ್ಟೆ ಲಗ್ಗೆಯಿಡಲಿರುವ ಕೊರೆಲ್ಲಾ ಹೈಬ್ರಿಡ್ ಮತ್ತೊಮ್ಮೆ ಗ್ರಾಹಕರ ಮನಗೆಲ್ಲುವ ವಿಶ್ವಾಸದಲ್ಲಿದೆ. ಸೆಡಾನ್ ಮಾದರಿಯಲ್ಲಿ ಬಿಡುಗಡೆಗೊಳ್ಳಲಿದ್ದು, ಗ್ರಾಹಕರ ನೀರಿಕ್ಷೆಯಂತೆ ಸಿದ್ಧಗೊಂಡಿದೆ.

ಭಾರತದಲ್ಲೇ ಸಿದ್ಧಗೊಂಡಿರುವ ಟೊಯೊಟಾ ಕೊರೊಲ್ಲಾ ಹೈಬ್ರಿಡ್, ಸಾಂಪ್ರದಾಯಿಕ ಮಾದರಿಗಳಿಂತ ಕೊಂಚ ಭಿನ್ನವಾಗಿವೆ . ಹೀಗಾಗಿ ಲಗ್ಷುರಿ ಬ್ರಾಂಡ್ ಮತ್ತು ಲೆಕ್ಸಸ್ ಮಾದರಿಗಳಲ್ಲಿ ಸಾಕಷ್ಟು ಸುಧಾರಣೆ ತಂದಿರುವ ಟೊಯೊಟಾ ಮೋಟಾರ್ ಕಾರ್ಪ್, ಲೆಕ್ಸಸ್ ಹೈಬ್ರಿಡ್ ಮಾದರಿಯನ್ನು ಹೊರತಂದಿದೆ.

ಸದ್ಯ ಚೀನೀ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರುವ ಟೊಯೊಟಾ ಕೊರೊಲ್ಲಾ ಹೈಬ್ರಿಡ್, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ಗ್ರಾಹಕರ ಗಮನದಲ್ಲಿಟ್ಟುಕೊಂಡು ಸಿದ್ಧವಾಗಿರುವ ಕೊರೊಲ್ಲಾ ಹೈಬ್ರಿಡ್ ಕಾರು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರಲಿದೆ ಎನ್ನಲಾಗುತ್ತಿದೆ.

ಇನ್ನು ಬಿಡುಗಡೆಗೆ ಸಿದ್ಧಗೊಂಡಿರುವ ಟೊಯೊಟಾ ಕೊರೊಲ್ಲಾ ಹೈಬ್ರಿಡ್ ಕಾರು ಸೆಡಾನ್ ಮಾದರಿಯಲ್ಲಿದ್ದು, E170 ಆವೃತ್ತಿಯು ಗಾತ್ರದಲ್ಲಿ ದೊಡ್ಡದಾಗಿದೆ. ಹೀಗಾಗಿ ಬೆಲೆಯೂ ಸ್ವಲ್ಪ ಹೆಚ್ಚಿದೆ. ಅಂತಯೇ E160 ಮಾದರಿ ಕಾರು ಸಣ್ಣ ಆವೃತ್ತಿಯಾಗಿದ್ದು, ಕೊರಿಯಾ ಹಾಗೂ ಜಪಾನ್ ಮಾರುಕಟ್ಟೆಗಳಲ್ಲಿ ಈಗಾಗಲೇ ಜನಪ್ರಿಯತೆ ಪಡೆದಿವೆ.

ಸದ್ಯದ ಮಾರುಕಟ್ಟೆಯ ಬೇಡಿಕೆ ತಕ್ಕಂತೆ ಸಿದ್ಧಗೊಂಡಿರುವ ಟೊಯೊಟಾ ಕೊರೊಲ್ಲಾ ಹೈಬ್ರಿಡ್ ಕಾರಿನ ವಿನ್ಯಾಸ ಅದ್ಭುತವಾಗಿದೆ. ಸಾಮಾನ್ಯ ಮಾದರಿಗಿಂತ ಭಿನ್ನವಾಗಿರುವ ನೂತನ ಮಾದರಿಯು, ಈ ಹಿಂದಿನ ಟೊಯೊಟಾ ಪ್ರಯಸ್ ಮಾದರಿಯ ಎಂಜಿನ್ ಇಲ್ಲಿ ಎರವಲು ಪಡೆಯಲಾಗಿದೆ. ಹೀಗಾಗಿ 197 ಬಿಎಚ್‌ಪಿ ಉತ್ಪಾದಿತ 1.8-ಲೀಟರ್ ಪೆಟ್ರೋಲ್ VVT-I ಎಂಜಿನ್ ಹಾಗೂ 71 ಬಿಎಚ್‌ಪಿ ಉತ್ಪಾದಿತದ ವಿದ್ಯುತ್ ಮೋಟಾರ್ ಜೊತೆಗೂಡಿ ಗರಿಷ್ಠ ಪ್ರಮಾಣದ 127 ಬಿಎಚ್‌ಪಿ ಉತ್ಪಾದನೆ ಮಾಡುವ ಸಾಮಥ್ಯ ಹೊಂದಿದೆ.

ಇಂಧನ ಕ್ಷಮತೆಯಲ್ಲೂ ಸೈ ಎನ್ನಿಸಿಕೊಂಡಿರುವ ಹೈಬ್ರಿಡ್ ಟೊಯೊಟಾ ಕೊರೊಲ್ಲಾ ಪ್ರತಿ ಲೀಟರ್‌ಗೆ 23 ಕಿಲೋ ಮೀಟರ್ ಮೈಲೇಜ್ ನೀಡಲಿದೆ. ಜೊತೆಗೆ ನೂತನ ಮಾದರಿಯಲ್ಲಿ ವಿದ್ಯುನ್ಮಾನ ನಿಯಂತ್ರಿತ ಇ-ಸಿವಿಟಿ ವ್ಯವಸ್ಥೆ ಕೂಡಾ ಲಭ್ಯವಿದೆ.

ಭಾರತೀಯ ಮಾರುಕಟ್ಟೆ ಪ್ರಮುಖ ಬೇಡಿಕೆಯಾಗಿರುವ ಮೈಲೇಜ್ ವಿಚಾರವನ್ನು ಮುಂದಿಟ್ಟುಕೊಂಡು ನೂತನ ಮಾದರಿ ನಿರ್ಮಾಣ ಮಾಡಿರುವ ಟೊಯೊಟಾ, ಕೊರೊಲ್ಲಾ ಹೈಬ್ರಿಡ್ ಮಾದರಿಯಲ್ಲಿ 99 ಬಿಎಚ್ ಪಿ ಉತ್ಪಾದಿತ 1.5-ಲೀಟರ್ ಪವರ್ ಟ್ರೈನ್ ಎಂಜಿನ್ ಕೂಡಾ ಬಳಕೆ ಮಾಡಿದ್ದಾರೆ. ಹೀಗಾಗಿ ಮೈಲೇಜ್ ನೆಚ್ಚಿಕೊಳ್ಳುವ ಗ್ರಾಹಕರಿಗೆ ಇದು ವರವಾಗಲಿದೆ ಎನ್ನುವುದು ಟೊಯೊಟಾ ಕಂಪನಿಯ ತಂತ್ರಗಾರಿಕೆ.

ಬಿಡುಗಡೆಗೆ ಕಾಯ್ದಿರುವ ಟೊಯೊಟಾ ಕೊರೊಲ್ಲಾ ಬೆಲೆಯು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 23 ಲಕ್ಷದಿಂದ ರೂ.25 ಲಕ್ಷಕ್ಕೆ ಲಭ್ಯವಿರಲಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಅಕಾರ್ಡ್‌ಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

ಪ್ರಿಮಿಯಂ ಸೆಡಾನ್ ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಹೋಂಡಾ ಆಕಾರ್ಡ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಟೊಯೊಟಾ toyota
Story first published: Wednesday, February 22, 2017, 17:41 [IST]
English summary
The Toyota Corolla Hybrid will be assembled in India, and the hybrid version sports tweaked looks compared to the regular model.
Please Wait while comments are loading...

Latest Photos