ರಸ್ತೆಗೆ ಬಂತು ಟಾಟಾ ಕ್ಸಿನಾನ್ ಎಕ್ಸ್‌ಟಿ

ಮಂಗಳವಾರ, ಮಾರ್ಚ್ 3, 2009, 16:16 [IST]
Tata Xenon XT
ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಅತ್ಯಂತ ಜಾಗರೂಕತೆಯಿಂದ ಅಡಿಯಿರಿಸುತ್ತಿರುವ ಟಾಟಾ ಮೋಟಾರ್ಸ್ ಟಾಟಾ ಕ್ಸಿನಾನ್ ಎಕ್ಸ್‌ಟಿ ಎಂಬ ಪಿಕಪ್ ವಾಹನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಐದು ಸೀಟುಗಳಿರುವ ಕ್ಸಿನಾನ್ ವಾಹನ 2.2 ಲೀಟರ್ ಡಿಕೋರ್ ಡೀಸೆಲ್ ಇಂಜಿನನ್ನು ಹೊಂದಿದೆ. ಕ್ಸಿನಾನ್ ಗಾತ್ರ, ಅದನ್ನು ಬಳಸಲಾಗುತ್ತಿರುವ ಕ್ಷೇತ್ರ ಮತ್ತು ಅದರ ಬೆಲೆ ಕುರಿತಂತೆ ಭಾರೀ ಅಲೆ ಎಬ್ಬಿಸಲಿದೆ ಎಂದು ಹೇಳಲಾಗಿದೆ.

ಆದರೆ, ಬಿಕ್ಕಟ್ಟನ್ನು ಗಮನದಲ್ಲಿರಿಸಿಕೊಂಡು ಅನಗತ್ಯ ಪ್ರಯೋಗಗಳಿಗೆ ಟಾಟಾ ಮೋಟಾರ್ಸ್ ಕಡಿವಾಣ ಹಾಕುತ್ತಿದೆ. ದೇಶದಾದ್ಯಂತ ಕೇವಲ 58 ಟಾಟಾ ಶೋರೂಂಗಳಲ್ಲಿ ಮಾತ್ರ ಕ್ಸಿನಾನ್ ಎಕ್ಸ್‌ಟಿ ಕೊಳ್ಳಲು ಲಭ್ಯವಿದೆ. ಪ್ರಸ್ತುತ ವರ್ಷದಲ್ಲಿ 24 ಸಾವಿರ ವಾಹನಗಳನ್ನು ಮಾತ್ರ ಟಾಟಾ ಮೋಟಾರ್ಸ್ ಉತ್ಪಾದಿಸುವ ಗುರಿ ಹೊಂದಿದೆ.

7.3 ಲಕ್ಷ ರು.ಯಿಂದ 8.6 ಲಕ್ಷ ರು. ಬಾಳುವ ಕ್ಸಿನಾನ್ ಎಕ್ಸ್‌ಟಿ ವಿದೇಶಗಳಲ್ಲಿಯೂ ತನ್ನ ಬೇಡಿಕೆಯನ್ನು ಸ್ಥಾಪಿಸಿಕೊಂಡಿದೆ. ಈಗಾಗಲೆ ಬ್ರಜಿಲ್, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಇಟಲಿ ದೇಶಗಳಿಗೆ ಕ್ಸಿನಾನ್ ರಫ್ತಾಗುತ್ತಿದೆ. ಮಾರ್ಚ್ 23ರಂದು ಮುಂಬೈನಲ್ಲಿ ಬಿಡುಗಡೆಯಾಗುತ್ತಿರುವ ಲಕ್ಷ ರು. ಬಾಳುವ ನ್ಯಾನೋ ಕೂಡ ಟಾಟಾ ಮೋಟಾರ್ಸ್ ಕಂಪನಿಯ ಈ ವರ್ಷದ ನಿರೀಕ್ಷೆಯ ವಾಹನವಾಗಿದೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.