ಸ್ಕೋಡಾ ಕಾರು ತಯಾರಕ ಕಂಪನಿ ಸುಪರ್ಬ್ ಮಾಡೆಲ್‌ನ ಮುಂದುವರಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಆವೃತ್ತಿಯ ಕಾರು ಇಂಧನ ಉಳಿತಾಯ ಮಾಡುವ ನವೀನ ತಂತ್ರಜ್ಞಾನ ಟಿಎಸ್‌ಐಯನ್ನು ಹೊಂದಿದೆ. ಟಿಎಸ್ಐ ಅಂದ್ರೆ ಟರ್ಬೋಚಾರ್ಜ್‌ಡ್ ಫ್ಯುಯೆಲ್ ಸ್ಟ್ರಾಟಿಫೈಡ್ ಇಂಜೆಕ್ಷನ್.
ಇದನ್ನು ಹೊರತುಪಡಿಸಿದರೆ ಉಳಿದೆಲ್ಲ ಸೌಲಭ್ಯಗಳು ಮೊದಲಿನ ಆವೃತ್ತಿಯಂತೆಯೇ ಇವೆ. ಹಿಂಭಾಗ ಮತ್ತು ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಹೊಂದಿದೆ ಮತ್ತು ಹಿಂದುಗಡೆ ಮತ್ತು ಮುಂದುಗಡೆ 8 ಎರ್ ಬ್ಯಾಗ್‌ಗಳನ್ನು ಹೊಂದಿದೆ.
ಇನ್ನೊಂದು ಸಂತಸದ ಸುದ್ದಿಯೆಂದರೆ, ಮೊದಲಿನ ಆವೃತ್ತಿಗಿಂತ ಇದರ ಬೆಲೆ ಭರ್ತಿ ಎರಡು ಲಕ್ಷ ಕಡಿಮೆ. ಇನ್ನೇನು ಬೇಕು? ಕಳೆದ 11 ತಿಂಗಳುಗಳಲ್ಲಿ ಹಿಂದಿನ ಮಾಡೆಲ್ 500ರಷ್ಟು ಬಿಕರಿಯಾಗಿವೆ. ಈಗ ಬೆಲೆ ಕಡಿತಗೊಳಿಸಿರುವುದರಿಂದ ಈ ವರ್ಷ ಮಾರಾಟದಲ್ಲಿ ಸಾವಿರ ಗಡಿ ದಾಟುವ ಗುರಿ ಸ್ಕೋಡಾ ಹೊಂದಿದೆ.