ವಿಶ್ವದ ಅಗ್ರ ಐದನೇ ವಾಹನ ತಯಾರಿಕಾ ಕಂಪನಿ ಫಿಯೆಟ್ ಮಾರಾಟ ವಿಷಯದಲ್ಲಿ ದೇಶದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಈಗ ದೇಶದ ರಸ್ತೆಗೆ ಹಲವು ನೂತನ ಬ್ರಾಂಡುಗಳನ್ನು ಪರಿಚಯಿಸಲು ಫಿಯೆಟ್ ಯೋಜನೆ ರೂಪಿಸುತ್ತಿದೆ. ಅಂದರೆ ಈಗಾಗಲೇ ಜಾಗತಿಕವಾಗಿ ಜನಪ್ರಿಯವಾಗಿರುವ ಆಲ್ಫಾ ರೊಮಿಯೊ, ಮಸೆರಟಿ ಮತ್ತು ಜೀಪ್ ಬ್ರಾಂಡ್ ಕಾರುಗಳನ್ನು ಕಂಪನಿ ಪರಿಚಯಿಸಲಿದೆ ಎಂದು ವರದಿಗಳು ಹೇಳಿವೆ.
ಆರಂಭದಲ್ಲಿ ದೇಶದ ರಸ್ತೆಗೆ ಆಲ್ಪಾ ರೊಮಿಯೊ ಮತ್ತು ಮಸೆರಟಿ ಪರಿಚಯಿಸಲು ಕಂಪನಿಯು ಉದ್ದೇಶಿಸಿದೆ. ಇಟಲಿಯ ಕಾರು ಕಂಪನಿ ಈಗಾಗಲೇ ಫೆರಾರಿ ಸ್ಪೋರ್ಟ್ ಕಾರನ್ನು ಪರಿಚಯಿಸಿದೆ. ಫೆರಾರಿ ಬ್ರಾಂಡ್ ಕುರಿತು ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ ಮಸೆರಟಿ ಮತ್ತು ಆಲ್ಫಾ ರೊಮಿಯೊ ಬ್ರಾಂಡ್ ದೇಶದ ಜನರಿಗೆ ಹೆಚ್ಚು ಪರಿಚಿತವಲ್ಲ.
ಈಗಾಗಲೇ ಕಂಪನಿಯು ಅಮೆರಿಕದ ಕಾರು ಕಂಪನಿ ಕ್ರಿಸ್ಲರ್ ನ ಗರಿಷ್ಠ ಪಾಲು ತನ್ನದಾಗಿಸಿಕೊಂಡಿದೆ. ಭವಿಷ್ಯದಲ್ಲಿ ದೇಶದ ರಸ್ತೆಗೆ ಕ್ರಿಸ್ಲರ್ ಬ್ರಾಂಡುಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಕ್ರಿಸ್ಲರ್ ಕಂಪನಿಯ ಜೀಪುಗಳು ದೇಶದ ರಸ್ತೆಗೆ ಹೆಚ್ಚು ಇಷ್ಟವಾಗುವ ನಿರೀಕ್ಷೆಯನ್ನು ಈಗಾಗಲೇ ಹಲವು ವಾಹನ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಜೀಪ್ ಅಂದ್ರೆ ಕಾರು ಬ್ರಾಂಡ್. ಟಾಟಾ ಮೋಟರ್ಸ್ ನಿಂದ ಶೋರೂಂಗಳನ್ನು ಪ್ರತ್ಯೇಕಿಸಲು ಫಿಯೆಟ್ ಈಗಾಗಲೇ ನಿರ್ಧರಿಸಿದೆ.