ಈಗ ವಿಶ್ವದ ನಂಬರ್ ಒನ್ ವಾಹನ ಕಂಪನಿ ಯಾವುದು ಗೊತ್ತೆ?

ಶುಕ್ರವಾರ, ಜನವರಿ 20, 2012, 16:11 [IST]
General Motors now World No.1 automaker
ಟೊಯೊಟಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಯನ್ನು ಹಿಂದಿಕ್ಕಿ ಜನರಲ್ ಮೋಟರ್ಸ್ ಕಂಪನಿಯು ವಿಶ್ವದ ಬೃಹತ್ ವಾಹನ ಕಂಪನಿಯಾಗಿ ಹೊರಹೊಮ್ಮಿದೆ. 2011ರಲ್ಲಿ ಜಾಗತಿಕವಾಗಿ ಜನರಲ್ ಮೋಟರ್ಸ್ 90 ಲಕ್ಷಕ್ಕಿಂತಲೂ ಹೆಚ್ಚು ವಾಹನ ಮಾರಾಟ ಮಾಡಿದೆ. ಹೀಗಾಗಿ ಇದಕ್ಕೆ ನಂಬರ್ ಒನ್ ಪಟ್ಟ ದೊರಕಿದೆ.'

ಈ ಮಾರಾಟವು ಫೋಕ್ಸ್ ವ್ಯಾಗನ್ ಮಾರಾಟಕ್ಕಿಂತ ಶೇಕಡ 11ರಷ್ಟು ಅಧಿಕವಾಗಿದೆ. ಫೋಕ್ಸ್ ವ್ಯಾಗನ್ ಕಂಪನಿಯು ಕಳೆದ ವರ್ಷ ಒಟ್ಟು 81.6 ಲಕ್ಷ ವಾಹನ ಮಾರಾಟ ಮಾಡಿತ್ತು. ಟೊಯೊಟಾ ಕಂಪನಿ ಇನ್ನೂ ವಾಹನ ಮಾರಾಟ ಫಲಿತಾಂಶ ಪ್ರಕಟಿಸಿಲ್ಲ. ಕಳೆದ ತಿಂಗಳು ಟೊಯೊಟಾ ಕಂಪನಿಯು ಜಾಗತಿಕವಾಗಿ 79 ಲಕ್ಷ ವಾಹನ ಮಾರಾಟ ಮಾಡಿರುವುದಾಗಿ ಅಂದಾಜು ವರದಿ ಪ್ರಕಟಿಸಿತ್ತು.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಉತ್ಪಾದನೆ ಕಡಿತದ ಕಾರಣದಿಂದ ಟೊಯೊಟಾ ಮಾರಾಟ ಗಣನೀಯವಾಗಿ ಇಳಿಕೆ ಕಂಡಿತ್ತು. ಈ ಸಮಯದಲ್ಲಿ ಭೂಕಂಪ, ಸುನಾಮಿ ಕಂಪನಿಯ ವಹಿವಾಟಿಗೆ ಹೊಡೆತ ನೀಡಿತ್ತು. ವರ್ಷಾಂತ್ಯಕ್ಕೆ ಥೈಲಾಂಡಿನಲ್ಲಿನ ನೆರೆ ಹಾವಳಿ ಕಂಪನಿಯ ವಾಹನ ಉತ್ಪಾದನೆಗೆ ಹೊಡೆತ ನೀಡಿತ್ತು. ಅಮೆರಿಕದಲ್ಲಿ ಜನರಲ್ ಮೋಟರ್ಸ್ ವಾಹನ ಮಾರಾಟ ಕಳೆದ ವರ್ಷ ಶೇಕಡ 7.6ರಷ್ಟು ಏರಿಕೆ ಕಂಡಿದೆ. ಕೇವಲ ಷೆವರ್ಲೆ ಬ್ರಾಂಡ್ ವಾಹನ ಮಾರಾಟವೇ ಶೇಕಡ 13ರಷ್ಟು ಏರಿಕೆ ಕಂಡಿದೆ.
English summary
General Motors now World No.1 automaker. General Motors global sales 9.03 million vehicles in 2011. General Motors 2011 sales rose 7.6% from 2011.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.