ದೇಶದ ಜನರ ನಂಬಿಕಸ್ತ ಕಾರು ಬ್ರಾಂಡಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಹೊಸದೊಂದು ಮೈಲುಗಲ್ಲು ಸಾಧಿಸಿದೆ. ಕಂಪನಿಯು ಆರಂಭವಾದ 29 ಸಂವತ್ಸರಗಳಲ್ಲಿ ಕಂಪನಿಯು ಈ ಫೆಬ್ರವರಿ ತಿಂಗಳಲ್ಲಿ ಕೋಟಿ ಕಾರು ಮಾರಾಟ ಮಾಡಿದೆ.
99 ಲಕ್ಷ 99 ಸಾವಿರ ಕಾರು ಉತ್ಪಾದನೆಯಾದ ನಂತರ ಮಾರುತಿ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿರುವುದು ಕೆಂಪು ಬಣ್ಣದ ಸ್ವಿಫ್ಟ್ ವಿಎಕ್ಸ್ಐ ಕಾರು. (ಓದಿ: ಕೆಂಪು ಕಾರಿನ ಉಡುಗೊರೆ). ಮಾರುತಿ ಸುಜುಕಿ ಕಂಪನಿಯು ಮಾರುತಿ 800 ಕಾರನ್ನು ಆರಂಭದಲ್ಲಿ ಪರಿಚಯಿಸಿತ್ತು.
ಭಾರತ ಸರಕಾರ ಮತ್ತು ಜಪಾನಿನ ಸುಜುಕಿ ಮೋಟರ್ ಕಂಪನಿ ಜಂಟಿಯಾಗಿ 1983ರಲ್ಲಿ ದೇಶದಲ್ಲಿ ಮಾರುತಿ ಸುಜುಕಿ ಹೆಸರಲ್ಲಿ ಉದ್ಯಮ ಸ್ಥಾಪಿಸಿತ್ತು. ದೇಶದಲ್ಲಿ ಕಂಪನಿ ಸಂಸ್ಥಾಪನೆ ಆದ 29 ವರ್ಷದ ನಂತರ ಒಂದು ಕೋಟಿ ಕಾರು ಮಾರಾಟ ಮಾಡಲಾಗಿದೆ. ಕಂಪನಿಯು ಲಾಂಚ್ ಆದ 23ನೇ ವರುಷದ ನಂತರ 2006ನೇ ಇಸವಿಯಲ್ಲಿ 50 ಲಕ್ಷದ ಕಾರನ್ನು ಮಾರಾಟ ಮಾಡಿತ್ತು.
"ಕಳೆದೆರಡು ದಶಕಗಳಿಂದ ಭಾರತದ ಗೆಲುವಿನ ಕಥೆಗಳೊಂದಿಗೆ ಮಾರುತಿಯ ಗೆಲುವಿನ ಕಥೆಯು ಹತ್ತಿರದ ಸಂಬಂಧವನ್ನಿಟ್ಟುಕೊಂಡಿದೆ. ದೇಶದ ಅಭಿವೃದ್ಧಿಯಾಗುತ್ತಿರುವಂತೆ ಮಾರುತಿ ಸುಜುಕಿ ಕೂಡ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮುಂದುವರೆದಿದೆ" ಎಂದು ಕಂಪನಿ ಸಿಇಒ ಶಿಂಝೊ ನಕನಿಶಿ ಹೇಳಿದ್ದಾರೆ.
ಕಳೆದೆರಡು ದಶಕಗಳಲ್ಲಿ ಮಾರುತಿ 800 ಮತ್ತು ಆಮ್ನಿ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿವೆ. ಕಳೆದ ಏಳು ವರ್ಷಗಳಿಂದ ಮಾರುತಿ ಆಲ್ಟೊ ಬೆಸ್ಟ್ ಸೆಲ್ಲರ್ ಕಾರಾಗಿದೆ ಎಂದು ಕಂಪನಿ ಹೇಳಿದೆ.
99 ಲಕ್ಷ 99 ಸಾವಿರ ಕಾರು ಉತ್ಪಾದನೆಯಾದ ನಂತರ ಮಾರುತಿ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿರುವುದು ಕೆಂಪು ಬಣ್ಣದ ಸ್ವಿಫ್ಟ್ ವಿಎಕ್ಸ್ಐ ಕಾರು. (ಓದಿ: ಕೆಂಪು ಕಾರಿನ ಉಡುಗೊರೆ). ಮಾರುತಿ ಸುಜುಕಿ ಕಂಪನಿಯು ಮಾರುತಿ 800 ಕಾರನ್ನು ಆರಂಭದಲ್ಲಿ ಪರಿಚಯಿಸಿತ್ತು.
ಭಾರತ ಸರಕಾರ ಮತ್ತು ಜಪಾನಿನ ಸುಜುಕಿ ಮೋಟರ್ ಕಂಪನಿ ಜಂಟಿಯಾಗಿ 1983ರಲ್ಲಿ ದೇಶದಲ್ಲಿ ಮಾರುತಿ ಸುಜುಕಿ ಹೆಸರಲ್ಲಿ ಉದ್ಯಮ ಸ್ಥಾಪಿಸಿತ್ತು. ದೇಶದಲ್ಲಿ ಕಂಪನಿ ಸಂಸ್ಥಾಪನೆ ಆದ 29 ವರ್ಷದ ನಂತರ ಒಂದು ಕೋಟಿ ಕಾರು ಮಾರಾಟ ಮಾಡಲಾಗಿದೆ. ಕಂಪನಿಯು ಲಾಂಚ್ ಆದ 23ನೇ ವರುಷದ ನಂತರ 2006ನೇ ಇಸವಿಯಲ್ಲಿ 50 ಲಕ್ಷದ ಕಾರನ್ನು ಮಾರಾಟ ಮಾಡಿತ್ತು.
Read: In English
ಗಮನಿಸಿ, ಮೊದಲ ಐವತ್ತು ಲಕ್ಷ ಕಾರು ಮಾರಾಟಕ್ಕೆ 23 ವರ್ಷ ಹಿಡಿದಿತ್ತು. ನಂತರ ಆರೇ ಆರು ವರುಷಗಳಲ್ಲಿ ಕಂಪನಿಯು 50 ಲಕ್ಷ ಕಾರು ಮಾರಾಟ ಮಾಡಿದೆಯೆಂದರೆ ಅದರ ಜನಪ್ರಿಯತೆಗೆ ಇನ್ಯಾವ ಕನ್ನಡಿಯೂ ಬೇಕಿಲ್ಲ. "ಕಳೆದೆರಡು ದಶಕಗಳಿಂದ ಭಾರತದ ಗೆಲುವಿನ ಕಥೆಗಳೊಂದಿಗೆ ಮಾರುತಿಯ ಗೆಲುವಿನ ಕಥೆಯು ಹತ್ತಿರದ ಸಂಬಂಧವನ್ನಿಟ್ಟುಕೊಂಡಿದೆ. ದೇಶದ ಅಭಿವೃದ್ಧಿಯಾಗುತ್ತಿರುವಂತೆ ಮಾರುತಿ ಸುಜುಕಿ ಕೂಡ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮುಂದುವರೆದಿದೆ" ಎಂದು ಕಂಪನಿ ಸಿಇಒ ಶಿಂಝೊ ನಕನಿಶಿ ಹೇಳಿದ್ದಾರೆ.