ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

By Nagaraja

ಪ್ರತಿಯೊಂದು ರಾಷ್ಟ್ರವು ಆತ್ಮ ರಕ್ಷಣೆಗೆ ಹೆಚ್ಚಿನ ಒತ್ತು ಕೊಡುತ್ತಿದೆ. ಈ ಪೈಕಿ ಕೆಲವು ರಾಷ್ಟ್ರಗಳು ಅಣ್ವಸ್ತ್ರ ನಿರ್ಮಾಣದಲ್ಲಿ ತೊಡಗಿದರೆ ಇಲ್ಲಿ ವಿಶ್ವದ ಪವರ್ ಫುಲ್ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ ಸೂಪರ್ ಸೋನಿಕ್ ವಿಮಾನವೊಂದರ ತಯಾರಿಯಲ್ಲಿ ತೊಡಗಿದೆ.

ಜಗತ್ತಿನ ಯಾವುದೇ ಪ್ರದೇಶದಲ್ಲಾದರೂ ಕೆಲವೇ ಗಂಟೆಗಳಲ್ಲಿ ಸೈನ್ಯ ನೆಲೆ ಸ್ಥಾಪಿಸುವುದು ಯೋಜನೆಯ ಉದ್ದೇಶವಾಗಿದೆ. ಅಂದರೆ ಯುದ್ಧ ಟ್ಯಾಂಕರ್ ನಿಂದ ಆರಂಭಿಸಿ ಒಂದು ಯುದ್ಧ ಪರಿಸ್ಥಿತಿಗೆ ಬೇಕಾದ ಎಲ್ಲ ಶಸ್ತ್ತಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ವಿಮಾನ ಹೊಂದಿದ್ದು, ರಕ್ಷಣಾ ವಿಭಾಗದಲ್ಲಿ ರಷ್ಯಾ ಭವಿಷ್ಯವನ್ನೇ ಬದಲಾಯಿಸುವ ಸಾಧ್ಯತೆಯಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ರಷ್ಯಾ ಹೊಂಚು ಹಾಕಿರುವ ಈ ಫೈಟರ್ ವಿಮಾನ, 200 ಟನ್ ಗಳಷ್ಟು ಭಾರವನ್ನು ಗಂಟೆಗೆ ಬರೋಬ್ಬರಿ 2,000 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಜಗತ್ತಿನ ಯಾವುದೇ ಪ್ರದೇಶದಲ್ಲೂ ಏಳು ತಾಸಿನೊಳಗೆ ಮಿಲಿಟರಿ ನೆಲೆ ಸ್ಥಾಪಿಸುವುದು ಯೋಜನೆಯ ಉದ್ದೇಶವಾಗಿದೆ. ಹಾಗೊಂದು ವೇಳೆ ಯುದ್ಧ ಪರಿಸ್ಥಿತಿ ನಿರ್ಮಾಣವಾದ್ದಲ್ಲಿ ಇದರ ಪರಿಪೂರ್ಣ ಲಾಭವನ್ನು ರಷ್ಯಾ ಪಡೆಯಬಹುದಾಗಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಸದ್ಯಕ್ಕೆ ಪಿಎಕೆ ಟಿಎ ( PAK TA) ಎಂಬ ಹೆಸರು ಪಡೆದಿರುವ ಈ ಯುದ್ಧ ವಿಮಾನ, ಸೈನಿಕರ ಜೊತೆಗೆ ಯುದ್ಧ ಟ್ಯಾಂಕರುಗಳನ್ನು (ಟಿ-14 ಆರ್ಮಟಾ) ಸಾಗಿಸುವ ಸಾಮರ್ಥ್ಯ ಹೊಂದಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

2024ರೊಳಗೆ ಈ ಕನಸನ್ನು ನನಸಾಗಿಸುವುದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಐದು ಸದಸ್ಯ ವಿಟೋ ಪವರ್ ರಾಷ್ಟ್ರಗಳ ಪೈಕಿ ಒಂದಾಗಿರುವ ರಷ್ಯಾ ಉದ್ದೇಶವಾಗಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ರಷ್ಯಾದ ಇಂಡಸ್ಟ್ರಿಯಲ್ ಕಮಿಷನ್ ಇಂತಹದೊಂದು ಯೋಜನೆಯನ್ನು ಮುಂದಿರಿಸಿದ್ದು, ಭವಿಷ್ಯದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕನ ಮಾಡಿಕೊಂಡು ಯುದ್ಧ ವಿಮಾನ ಅಭಿವೃದ್ಧಿಪಡಿಸಲಾಗುತ್ತದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಹಾಗೆ ನೋಡಿದಾಗ ಸೂಪರ್ ಪವರ್ ರಾಷ್ಟ್ರವಾದ ರಷ್ಯಾ ಕಳೆದ ಕೆಲವು ವರ್ಷಗಳಿಂದ ಹಿನ್ನೆಡೆಯಲ್ಲಿದೆ. ಈ ಹಿನ್ನಲೆಯಲ್ಲಿ ವಿರೂಪ ಆಕೃತಿಯನ್ನು ಪಡೆದಿರುವ ಫೈಟರ್ ವಿಮಾನದ ಪ್ರವೇಶ ನಿರ್ಣಾಯಕವೆನಿಸಲಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಇನ್ನು ಗರಿಷ್ಠ 7,000 ಕೀ.ಮೀ. ವ್ಯಾಪ್ತಿಯ ವರೆಗೂ ಚಲಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಭಾಗಶ: ವಿದ್ಯುತ್ ಶಕ್ತಿಯಿಂದ ವಿಮಾನ ನಿಯಂತ್ರಣ ಮಾಡುವುದು ಉದ್ದೇಶವಾಗಿದೆ. ಎಂಜಿನ್ ಇತ್ಯಾದಿ ಬಗೆಗಿನ ಮಾಹಿತಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಇದರ ಜೊತೆಗೆ ಫಿರಂಗಿ ಶಸ್ತ್ರಾಸ್ತ್ರಗಳು, ವಿಮಾನ ನಿರೋಧಕ ಕ್ಷಿಪಣಿಗಳು, ಮಿಸೈಲ್, ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ.

ಕೆಲವೇ ಗಂಟೆಗಳಲ್ಲಿ ಸೈನ್ಯನೆಲೆ ಸ್ಥಾಪಿಸುವ ದೈತ್ಯ ಫೈಟರ್ ವಿಮಾನ

ಈಗ ರಷ್ಯಾ ಯುದ್ಧ ವಿಮಾನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
Read more on ವಿಮಾನ plane
English summary
Giant Russian plane Could deliver an army anywhere in the world in around 7 hours 
Story first published: Wednesday, April 1, 2015, 15:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X