ದೇಶದಲ್ಲಿ ಮೊದಲ ಬಾರಿಗೆ ಶುರುವಾಗಲಿದೆ ಹೆಲಿಪೋರ್ಟ್ ಸೇವೆ- ಈಗಲಾದ್ರೂ ತಗ್ಗುತ್ತಾ ದೆಹಲಿ ಟಾಫ್ರಿಕ್ ಜಾಮ್..?

Written By:

ನಿವೇನಾದ್ರೂ ರಾಜಧಾನಿ ದೆಹಲಿಯತ್ತ ಪ್ರಯಾಣ ಮಾಡುವುದಾದ್ರೆ ಒಂದು ಪ್ರಮುಖ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಯಾಕೇಂದ್ರೆ ಇನ್ಮುಂದೆ ನೀವು ದೆಹಲಿ ರಸ್ತೆಗಳಲ್ಲಿನ ಅತಿಯಾದ ಟ್ರಾಫಿಕ್‌ನಲ್ಲಿ ಸಿಲುಕಿ ವ್ಯತ್ಯಯ ಪಡುವ ಅಗತ್ಯವೇ ಇಲ್ಲ. ಇದಕ್ಕಾಗಿಯೇ ರಾಜಧಾನಿಯಲ್ಲಿ ಹೆಲಿಪೋರ್ಟ್ ನಿರ್ಮಾಣವಾಗಿದ್ದು, ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸಲಿದೆ.

ನಾವೆಲ್ಲಾ ಇಷ್ಟುದಿನಗಳ ಕಾಲ ಹೆಲಿಪೋರ್ಟ್‌ಗಳ ವ್ಯವಸ್ಥೆಯನ್ನು ಕೇವಲ ವಿದೇಶಿಗಳಲ್ಲಿ ನೋಡುತ್ತಿದ್ದೀವಿ. ಆದ್ರೆ ಇನ್ಮುಂದೆ ರಾಜಧಾನಿ ದೆಹಲಿಯಲ್ಲೂ ಈ ಸೇವೆ ತೆರೆದುಕೊಳ್ಳಲಿದೆ. ವಿನೂತನ ಹೆಲಿಪೋರ್ಟ್ ನಾಳೆಗೆ ಉದ್ಘಾಟನೆಯಾಗಲಿದ್ದು, ಅಧಿಕೃತವಾಗಿ ತನ್ನ ಸೇವೆಯನ್ನು ಆರಂಭಿಸಲಿದೆ.

ನಗರೀಕರಣದ ಪರಿಣಾಮವಾಗಿ ರಾಜಧಾನಿ ದೆಹಲಿ, ದಿನದಿಂದ ದಿನಕ್ಕೆ ಬೃಹತ್ ಗಾತ್ರದಲ್ಲಿ ಬೆಳೆಯತೊಡಗಿದೆ. ಅದರ ಜೊತೆ ಜೊತೆಗೆ ಸಾರಿಗೆ ವ್ಯವಸ್ಥೆಯ ವ್ಯಾಪ್ತಿಯು ಹೆಚ್ಚ ತೊಡಗಿದ್ದು, ಸದ್ಯ ರಾಜಧಾನಿಯಲ್ಲಿ ಅತಿಯಾದ ಟಾಫ್ರಿಕ್ ಸಮಸ್ಯೆ ಉಲ್ಭಣಿಸುತ್ತಿದೆ. ಹೀಗಾಗಿಯೇ ಹೆಲಿಪೋರ್ಟ್‌ನಿಂದ ದೆಹಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣ ಮಾಡಬಹುದಾಗಿದೆ.

ಟ್ರಾಫಿಕ್ ಸಮಸ್ಯೆ ತಗ್ಗಿಸಲು ಇಂತದೊಂದು ಪರಿಕಲ್ವನೆ ಹುಟ್ಟುಹಾಕಿರೋ ಪವನ್ ಹ್ಯಾನ್ಸ್, 100 ಕೋಟಿ ವೆಚ್ಚದಲ್ಲಿ ಹೆಲಿಪೋರ್ಟ್ ಅಭಿವೃದ್ಧಿಗೊಳಿಸಿದೆ. ದೆಹಲಿಯ ರೋಹಿಣಿಯಲ್ಲಿರುವ ಈ ಹೆಲಿಪೋರ್ಟ್ ಅತ್ಯಾಧುನಿಕ ಎಲ್ಲ ಸೌಲಭ್ಯಗಳನ್ನು ಹೊಂದಿದ್ದು, 9 ಹೆಲಿಪ್ಯಾಡ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ.

ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ರೋಹಿಣಿ ಹೆಲಿಪೋರ್ಟ್, ಸುಮಾರು 150 ಜನ ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಸ್ಥಳಾವಕಾಶವಿದೆ. ಜೊತೆಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ನಿಗದಿತ ಸಮಯದಲ್ಲಿ ನಿಮಗೆ ಬೇಕಾದ ಸ್ಥಳಗಳಿಗೆ ಪ್ರಯಾಣಿಸಬಹುದು.

ಈ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಮಾಹಿತಿ ಹಂಚಿಕೊಂಡಿದ್ದ ಪವನ್ ಹ್ಯಾನ್ಸ್, ಪ್ರಾದೇಶಿಕ ಸಾರಿಗೆ ವ್ಯವಸ್ಥೆ ಬಲಗೊಳಿಸಲು ಇಂತಹ ಯೋಜನೆ ರೂಪಿಸಿದ್ದಾಗಿ ಹೇಳಿಕೊಂಡಿತ್ತು. ಅಲ್ಲದೇ ದೆಹಲಿಯಿಂದ ಶಿಮ್ಲಾ, ಹರಿದ್ವಾರ್, ಡೆಹ್ರಾಡೂನ್, ಮಥುರಾ, ಮೀರತ್ ಹಾಗೂ ಬೃಹತ್ ಕೈಗಾರಿಕಾ ಪ್ರದೇಶಗಳೂ ಹೆಲಿಕಾಪ್ಟರ್ ಸೇವೆ ಒದಗಿಸಲಿದೆ. 

ಇನ್ನು ರೋಹಿಣಿ ಹೆಲಿಪೋರ್ಟ್ ಬಗ್ಗೆ ಮಾತನಾಡಿರುವ ವಿಮಾನಯಾನ ಕಾರ್ಯದರ್ಶಿ ಆರ್.ಎನ್.ಚೌಬೇ, "ಐಜಿಐ ವಿಮಾನ ನಿಲ್ದಾಣವು ಕಳೆದ ಕೆಲ ವರ್ಷಗಳಿಂದ ಅತಿಹೆಚ್ಚು ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಈ ಹಿನ್ನೆಲೆ ರೋಹಿಣಿ ಹೆಲಿಪೋರ್ಟ್ ಈ ಸಮಸ್ಯೆಗಳಿಗೆ ಪರಿಹಾರವಾಗಲಿದೆ" ಎಂದಿದ್ದಾರೆ.

ಒಟ್ಟಿನಲ್ಲಿ ಇನ್ಮುಂದೆ ನೀವು ದೆಹಲಿಯಿಂದ ಪ್ರಯಾಣ ಬೆಳೆಸುವುದಾದ್ರೆ ಟ್ರಾಫಿಕ್ ಸಮಸ್ಯೆಯನ್ನು ಎದುರಿಸಬೇಕಿಲ್ಲ. ಇದಕ್ಕೆಲ್ಲಾ ರೋಹಿಣಿ ಹೆಲಿಪೋರ್ಟ್ ಸಹಕಾರಿಯಾಗಿದ್ದು, ಇನ್ನಾದ್ರೂ ದೆಹಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬಿಳುತ್ತಾ ಕಾಯ್ದುನೋಡಬೇಕಿದೆ.

ಎಸ್‌ಯುವಿ ಫೋರ್ಡ್ ಎಂಡೀವರ್ ಚಿತ್ರಗಳ ವೀಕ್ಷಣೆಗಾಗಿ ಈಗಲೇ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Monday, February 27, 2017, 11:34 [IST]
English summary
India's first Heliport will come in the capital city of Delhi and will be inaugurated on February 28, 2017.
Please Wait while comments are loading...

Latest Photos