ಕಾಲು ಇಲ್ಲದೆ ಇದ್ರೆ ಏನ್ ಅಂತೆ- ಇವರ ಸಾಧನೆಯನ್ನು ಎಲ್ಲರೂ ಮೆಚ್ಚುವಂತದ್ದೇ..!!

Written By:

ಅವರ ಹೆಸರು ಬಾಲಾಜಿ, ವಯಸ್ಸು 35, ಇವರು ದೈಹಿಕವಾಗಿ ನ್ಯೂನತೆ ಹೊಂದಿದ್ದರು, ಇಂದು ಪ್ರತಿಯೊಬ್ಬರಿಗೂ ಮಾದರಿ ವ್ಯಕ್ತಿ ಎಂದರೇ ತಪ್ಪಾಗಲಾರದು.

ಬೈಕ್ ಟ್ಯಾಕ್ಸಿ ಸೇವೆ ಆರಂಭ

ಜೀವನದಲ್ಲಿ ಎನಾದರೂ ಒಂದು ಸಾಧನೆ ಮಾಡಲೇಬೇಂಕೆಂಬ ಛಲ ಹೊಂದಿದ್ದ ಬಾಲಾಜಿ, ಇಂದು ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರಂಭಿಸಿ ಎಲ್ಲರಿಂದಲೂ ಸೈ ಎನ್ನಿಸಿಕೊಂಡಿದ್ದಾರೆ.

ಸ್ನೇಹಿತನೊಬ್ಬನ ಸಹಾಯದಿಂದ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಬಾಲಾಜಿ, ಮೊದಮೊದಲು ಕಡಿಮೆ ಬಂಡವಾಳದೊಂದಿಗೆ ತಮ್ಮ ಬಳಿಯಿರುವ ನಾಲ್ಕು ಚಕ್ರದ ಬೈಕ್‌ನಿಂದಲೇ ಗಳಿಕೆ ಆರಂಭಿಸಿದ್ದರು.

ಮಾ ಉಲಾ

ಬಾಲಾಜಿಯವರು ಆರಂಭ ಮಾಡಿರುವ ಬೈಕ್ ಟ್ಯಾಕ್ಸಿ ಹೆಸರೇ 'ಮಾ ಉಲಾ'. ಇದರ ಅರ್ಥ ಪರರಿಗೆ ಸೇವೆ ನೀಡು ಎಂದರ್ಥ.

ಚೆನ್ನೈ ಮೂಲದರಾಗಿರುವ ಬಾಲಾಜಿ, ಬೈಕ್ ಟ್ಯಾಕ್ಸಿ ಆರಂಭಿಸಿದ್ದೇ ತಡ ಕೆಲವೇ ದಿನಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿದೆ. ಜೊತೆಗೆ ಬಾಲಾಜಿಯವರ ವಿಭಿನ್ನ ಪ್ರಯತ್ನಕ್ಕೆ ಹಲವಾರು ಜನ ಬೆಂಬಲ ಕೂಡಾ ನೀಡಿದ್ದಾರೆ.

ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಂದ ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡುವ ಬಾಲಾಜಿ, ಇಂದು ತಿಂಗಳಿಗೆ 30 ಸಾವಿರಕ್ಕಿಂತಲೂ ಅಧಿಕ ಸಂಪಾದನೆ ಮಾಡುತ್ತಿದ್ದಾರೆ.

ಮೊದಮೊದಲು ತಮ್ಮ ಬಳಿ ಇದ್ದ ವಿಶೇಷ ಬೈಕ್ ಮೂಲಕ ಸೇವೆ ಆರಂಭಿಸಿದ್ದ ಬಾಲಾಜಿ, ಇಂದು ದೈಹಿಕವಾಗಿ ಉನಗೊಂಡಿರುವ ಹತ್ತಾರು ಯುವಕರಿಗೂ ಉದ್ಯೋಗ ನೀಡಿದ್ದಾರೆ.

ಲಭ್ಯವಿರುವ ಸಂಪರ್ಕ ಸಾಧನಗಳಿಂದಲೇ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ಇವರ ತಂಡ, ಚೆನ್ನೈನ ಪ್ರಮುಖ ಪ್ರದೇಶಗಳಿಗೆ ಸೇವೆ ನೀಡುವ ವ್ಯವಸ್ಥೆ ಹೊಂದಿದ್ದಾರೆ.

ಪಡೆದ ಶಿಕ್ಷಣಕ್ಕೆ ಸೂಕ್ತ ಉದ್ಯೋಗ ಸಿಗಲಿಲ್ಲವೆಂದು ಕೊರಗುವ ಅದೆಷ್ಟೋ ಯುವಜನತೆ ಒಂದೆಡೆಯಾದರೆ, ಬುದ್ಧಿಮಾಂದ್ಯನೆಂದು ಕಿಳಾಗಿ ಕಾಣುವರರು ಎಷ್ಟೋ ಜನ ನಮ್ಮಲ್ಲಿದ್ದಾರೆ.

ಆದ್ರೆ ಅದ್ಯಾವುದಕ್ಕೂ ಜಗ್ಗದ ಬಾಲಾಜಿ, ಬೈಕ್ ಟ್ಯಾಕ್ಸಿ ಸೇವೆ ಆರಂಭಿಸುವ ಮೂಲಕ ಬದುಕು ಕಟ್ಟಿಕೊಂಡ ಇತರಿಗೂ ಪ್ರೇರಕರಾಗಿದ್ದಾರೆ.

ಸುಮಾರು 13 ಯುವಕರ ತಂಡದೊಂದಿಗೆ ದಿನವಿಡಿ ಶ್ರಮ ವಹಿಸುವ ಬಾಲಾಜಿ, ಪ್ರತಿ ಕಿಲೋ ಮೀಟರ್‌ಗೆ ರೂ.10 ಚಾರ್ಜ್ ಮಾಡುವ ಮೂಲಕ ಇತರೆ ಟ್ಯಾಕ್ಸಿ ಸೇವೆಗಳಿಗೂ ಸ್ಪರ್ಧೆ ನೀಡುತ್ತಿದ್ದಾರೆ.

ಅಂಗವೈಕಲ್ಯ ಎಂಬುದು ಮನುಷ್ಯನ ದುರ್ಬಲತೆ ಅಲ್ಲ. ಸಾಧಿಸುವ ಛಲವೊಂದಿದ್ದರೆ ಪರರಿಗೆ ಭಾರವಾಗಿ ಬದುಕದೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆಯೇ ಬಾಲಜಿಯ ಸಾಧನೆ.

Click to compare, buy, and renew Car Insurance online

Buy InsuranceBuy Now

English summary
A Chennai-based bike taxi service has started the first-ever bike taxi service run by differently-abled people.
Please Wait while comments are loading...

Latest Photos